Kraken variant : ಒಮಿಕ್ರಾನ್ XBB 1.5 ನ ಅತ್ಯಂತ ಅಪಾಯಕಾರಿ ಹೊಸ ರೂಪಂತರಿ ವೈರಾಣು ಪತ್ತೆ ಮಾಡಿದ ವೈದ್ಯರು…!
ಕೊರೊನಾ ನಂತರ ದಿನಗಳಲ್ಲಿ ಜನರು ಇನ್ನೂ ಚೇತರಿಸಿಕೊಂಡಿಲ್ಲ.ಜಗತ್ತಿನಾದ್ಯಂತ ಮರಣ ಮೃದಂಗ ಬಾರಿಸಿರುವ ಕೊರೊನಾ ಹಾವಳಿ ಈ ವರ್ಷವೂ ಕಡಿಮೆ ಆಗುವ ಹಾಗೆ ಕಾಣುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಕೊರೊನಾದ ಹಲವು ರೂಪಾಂತರಗಳು ಜಗತ್ತಿನಾದ್ಯಂತ ಮರಣ ಮೃದಂಗ ಬಾರಿಸಿದ್ದು ಈಗ ಮತ್ತೊಂದು ಹೊಸ ವೈರಾಣು ಕಂಡುಬಂದಿದೆ, ಸದ್ಯದ ಪರಿಸ್ಥಿತಿಯಲ್ಲಿ ಜನರಲ್ಲಿ ಈಗಾಗಲೇ ಕೊರೊನಾ ವೈರಸ್ ಮತ್ತು ಓಮಿಕ್ರಾನ್ ನ ಹಲವು ರೂಪಾಂತರಗಳು ಕಾಣಿಸಿಕೊಂಡಿವೆ. ಬಹಳಷ್ಟು ಜನರು ಈ ವೈರಸ್ ಗೆ ತುತ್ತಾಗಿದ್ದು, ಕೆಲವರು ಗುಣಮುಖರಾಗಿ ಮನೆ ಸೇರಿದ್ರೆ ಇನ್ನು ಕೆಲವರು ವೈರಸ್ ನಿಂದ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.
ಕ್ರಾಕನ್ ರೂಪಾಂತರ ಹಾವಳಿ :
ಒಮಿಕ್ರೋನ್ ನಂತರ ವಿಶ್ವದಲ್ಲಿ ಮತ್ತೊಂದು ರೂಪಾಂತರಿ ವೈರಾಣು ಜನರ ಜೀವನದಲ್ಲಿ ಹೊಸ ಅಲೆಯನ್ನು ಶುರುಮಾಡತೊಡಗಿದ,ಕ್ರಾಕನ್ ರೂಪಾಂತರವು ಕೊರೊನಾ ಅಲೆಗಿಂತ ಹೆಚ್ಚು ಅಪಾಯಕಾರಿಯಾಗಿದೆ ಎಂದು ಹೇಳಲಾಗಿದೆ.
ಯುರೋಪಿಯನ್ ಸೆಂಟರ್ ಫಾರ್ ಡಿಸೀಸ್ ಪ್ರಿವೆನ್ಷನ್ ಅಂಡ್ ಕಂಟ್ರೋಲ್ ನೀಡಿರುವ ಮಾಹಿತಿ ಪ್ರಕಾರ, ವಿಶ್ವ ಆರೋಗ್ಯ ಸಂಸ್ಥೆಯು Omicron ನ XBB.1.5 ರೂಪಾಂತರವನ್ನು ಕ್ರಾಕನ್ ಎಂದು ಹೆಸರಿಸಿದೆ. ಇದು Omicron ನ XBB ರೂಪಾಂತರದ ಭಾಗವೂ ಸಹ ಆಗಿದೆ.
ಕ್ರಾಕನ್ ರೂಪಾಂತರವು ಹೆಚ್ಚು ಅಪಾಯಕಾರಿ ಆಗಿದ್ದು, ಪ್ರಪಂಚದಾದ್ಯಂತದ ಎಲ್ಲಾ ಆರೋಗ್ಯ ತಜ್ಞರಿಗೆ ಭೀತಿಗೊಳಪಡಿಸಿದೆ.
ವಿಶ್ವದ ಅತ್ಯಂತ ಅಪಾಯಕಾರಿ ರೂಪಾಂತರ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಈಗಾಗಲೆ ತಿಳಿಸಿದೆ, ವಿಶ್ವ ಆರೋಗ್ಯ ಸಂಸ್ಥೆಯು ಹೊಸ ವೈರಾಣವನ್ನು “ಕ್ರಾಕನ್ ರೂಪಾಂತರ” ಎಂದು ಹೆಸರಿಸಿದೆ. ಕ್ರಾಕನ್ ರೂಪಾಂತರವು ಈವಾಗ ಎಲ್ಲ ಕಡೆಯೂ ಹಬ್ಬಿದ್ದು. ಭಾರತದಲ್ಲಿಯೂ ಇದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಸೋಮವಾರ ಆರೋಗ್ಯ ಸಚಿವಾಲಯವು ಒಮಿಕ್ರಾನ್ ನ ಎಲ್ಲಾ ರೂಪಾಂತರಗಳು ಗಾಳಿಯಲ್ಲಿಯೇ ಇವೆ , ಆದ್ದರಿಂದ ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಿ ಎಂದು ಹೇಳಿದೆ. ಈಗ ಕಾಣಿಸಿಕೊಂಡಿರುವ ಹೊಸ ರೂಪಾಂತರವಾದ ಕ್ರಾಕನ್ ಕೊರೊನಾ ಅಲೆಯನ್ನು ಮತ್ತಷ್ಟು ಅಪಾಯದ ಸಂದಿಗ್ಧ ಪರಿಸ್ಥಿಯನ್ನು ಹೆಚ್ಚು ಮಾಡುತ್ತದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆಯು ಕ್ರಾಕನ್ ರೂಪಾಂತರದ ಬಗ್ಗೆ ವಿವರವಾದ ಮಾಹಿತಿ ನೀಡಿದೆ. ಕ್ರಾಕನ್ ರೂಪಾಂತರದ ಲಕ್ಷಣಗಳು ಹೀಗಿವೆ.
ಕ್ರಾಕನ್ ರೂಪಾಂತರದ ಲಕ್ಷಣಗಳು :
- ಸೋರುವ ಮೂಗು
- ಕೆಮ್ಮು ಬರುವುದು ಗಂಟಲು ಕೆರತ
- ಜ್ವರ
- ತಲೆನೋವು
- ದೇಹದ ನೋವು ಮತ್ತು
- ಆಯಾಸ ಸಮಸ್ಯೆ.
ಕ್ರಾಕನ್ ವೈರಾಣು ಅಪಾಯಕಾರಿ ಆಗಿದ್ದು, ಇದು ಗಾಳಿಯ ಮೂಲಕ ಹಬ್ಬುತ್ತದೆ ಆದ್ದರಿಂದ ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಿಕೊಳ್ಳಿ.