ಟರ್ಕಿ ಭೂಕಂಪದಲ್ಲೊಂದು ಹೃದಯಾ ವಿದ್ರಾವಕ ಘಟನೆ ; ತನ್ನ ಪ್ರಾಣದ ಹಂಗು ತೊರೆದು ಮಗುವನ್ನು ಬದುಕಿಸಿದ ವ್ಯಕ್ತಿ…!
ಟರ್ಕಿ (ಫೆ.7) :
ಪ್ರಬಲ ಭೂಕಂಪಕ್ಕೆ ಟರ್ಕಿ ನಲುಗಿ ಹೋಗಿದೆ. ದಿನೇ ದಿನೆ ಮರಣದ ಪ್ರಮಾಣವು ಏರುತ್ತಲೇ ಇದ್ದು, ಟರ್ಕಿ ಈಗ ನರಕ ಸದೃಶ್ಯ ದಂತಿದೆ . ಇಲ್ಲಿಯವರೆಗೆ ಭೂಕಂಪದ ಪರಿಣಾಮವಾಗಿ ಮೃತಪಟ್ಟವರ ಸಂಖ್ಯೆ 15000 ಕ್ಕೂ ಅಧಿಕಕ್ಕೆ ಏರಿದೆ. ಬದುಕುಳಿದವರನ್ನು ಅವಶೇಷಗಳಡಿಯಿಂದ ಹೊರತೆಗೆಯುವ ಕಾರ್ಯ ಇನ್ನೂ ಮುಂದುವರೆದಿದೆ.
ಈ ನಡುವೆ ಟರ್ಕಿಯಲ್ಲಿ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಕ್ಷಣಾ ತಂಡಗಳು ಇನ್ನೂ ಮೃತದೇಹಗಳನ್ನು ಹೊರತೆಗೆಯುತ್ತಿದ್ದಾರೆ. ಆದರೆ ವ್ಯಕ್ತಿಯೊಬ್ಬ ತನ್ನ ಪ್ರಾಣದ ಹಂಗು ತೊರೆದು ಮಗನನ್ನು ಬದುಕಿಸಿದ್ದಾರೆ. ಅವಶೇಷಗಳ ಅಡಿಯಿಂದ ಮೃತ ದೇಹಗಳನ್ನು ಹೊರತೆಗೆಯುತ್ತಿದ್ದ ರಕ್ಷಣಾ ತಂಡವು ವ್ಯಕ್ತಿಯ ಮೃತದೇಹದ ಕೈಯಲ್ಲಿ ಮಗು ಜೀವಂತವಾಗಿರುವುದನ್ನು ಕಂಡುಹಿಡಿದಿದ್ದಾರೆ.