ತರೀಕೆರೆ ಆಡಳಿತ ನಿರ್ಲಕ್ಷದಿಂದ ಕಾಡು ಪ್ರಾಣಿಗಳು ಹಾಗೂ ಕೂಲಿಕಾರ್ಮಿಕರ ಮಾರಣ ಹೋಮ :
ಚಿಕ್ಕಮಗಳೂರು (ತರೀಕೆರೆ. ಫೆ. 23) :
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಕ್ಕವಳ್ಳಿ, ಲಿಂಗದಳ್ಳಿ, ಅಮೃತಪುರ,ಮತ್ತು ತರೀಕೆರೆ ಕಸಬಾ ಹೋಬಳಿಯ ಗಡಿ ಭಾಗದಲ್ಲಿ ಅರಣ್ಯ ಪ್ರದೇಶ ಇರುವುದರಿಂದ ಜನವಸತಿ ಪ್ರದೇಶಗಳು ಮತ್ತು ಅರಣ್ಯದ ಮಧ್ಯೆ ಯಾವುದೇ ಟ್ರಂಚ್ ಅಥವಾ ತಡೆಗೋಡೆಯನ್ನು ನಿರ್ಮಿಸದೆ ಇರುವುದು ಬಹಳಷ್ಟು ಜೀವ ಹಾನಿಗಳು ಹಾಗೂ ರೈತರ ಬೆಳೆಹಾನಿಗೆ ಕಾರಣವಾಗಿದೆ.
ಇದಕ್ಕೆ ಮೂಲ ಕಾರಣ ಸ್ಥಳೀಯ ಆಡಳಿತ ವ್ಯವಸ್ಥೆಯಲ್ಲಿ ಇರುವ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯಲ್ಲಿರುವ ಕೆಲ ಅಧಿಕಾರಿಗಳು ಹಾಗೂ ಸ್ಥಳೀಯ ಭೂ ಕಬಳಿಕೆದಾರರ ನಡುವೆ ಇರುವ ಅನೈತಿಕ ಒಪ್ಪಂದಗಳು ಹಾಗೂ ಅದನ್ನು ಪೋಷಿಸಿ ಅದರ ಮೂಲಕ ಹಣ ಮಾಡುವ ರಾಜಕಾರಣಿಗಳ ಒಳ ಒಪ್ಪಂದದ ಪರಿಣಾಮ ಈಗ ಮೂಕ ಪ್ರಾಣಿಗಳು ಹಾಗೂ ಸಾಮಾನ್ಯ ರೈತ ಕೂಲಿ ಕಾರ್ಮಿಕರು ತಮ್ಮ ಪ್ರಾಣಗಳನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಕುರಿತು ಹಲವು ಬಾರಿ ಅರಣ್ಯ ಇಲಾಖೆಗೆ ಹಾಗೂ ಕಂದಾಯ ಇಲಾಖೆಗೆ ದೂರು ನೀಡಿದ್ದರೂ ಸಹ ಈ ಕುರಿತು ಯಾವುದೇ ಕ್ರಮವನ್ನು ತೆಗೆದುಕೊಳ್ಳದೆ ಇರುವುದು ಇವರ ತಂತ್ರ ಬಯಲಾಗಿದೆ. ಅರಣ್ಯ ಇಲಾಖೆ ಹಾಗೂ ರೆವಿನ್ಯೂ ಇಲಾಖೆ ತಕ್ಷಣ ಕ್ರಮ ಜರುಗಿಸಲು ಪತ್ರಿಕಾಗೋಷ್ಠಿಯ ಮೂಲಕ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಕುರುಬ ಸಮಾಜದ ಮುಖಂಡರಾದ ಹಾಲು ವಜ್ರಪ್ಪ, ಕಾಂಗ್ರೆಸ್ ಮುಖಂಡರಾದ ಆನಂದ, ಹಾಲೇಶ್, ಮುಂತಾದವರು ಉಪಸ್ಥಿತರಿದ್ದರು.