ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕವಾದಿ)-CPI-M.CITU.DHS.DYFI.KPRS ವತಿಯಿಂದ ಹೋರಾಟ ಹಮ್ಮಿಕೊಂಡಿದ್ದರು
ವಿಜಯನಗರ ಮಾರ್ಚ್:28
ವಿಜಯನಗರ ಜಿಲ್ಲೆ ಸಚಿವ ಆನಂದ್ ಸಿಂಗ್ ಮೇಲಿರುವ ಅಕ್ರಮ ಭೂಕಬಳಿಕೆ, ಅದಿರು ಕಳ್ಳ ಸಾಕಾಣಿಕೆ, ಸರಕಾರಿ ಜಾಗ ಒತ್ತುವರಿ, ಬಿಡಿಸಿಸಿ ಬ್ಯಾಂಕ್ ನೇಮಕಾತಿಯಲ್ಲಿನ ಅಕ್ರಮ ಆರೋಪಗಳನ್ನು ಸಿಬಿಐ ತನಿಖೆಗೆ ಒತ್ತಾಯಿಸಲು ವಿಜಯನಗರ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳು ಭಾರತ ಸರ್ಕಾರ ನವದೆಹಲಿ ಸಲ್ಲಿಸಲಾಯಿತು.

ಕಳೆದ 15 ವರ್ಷಗಳಿಂದ ಶಾಸಕರಾಗಿರುವ ಆನಂದ್ ಸಿಂಗ್ ಮೇಲೆ ಹಲವಾರು ಅಪರಾಧಿಕ ಆರೋಪಗಳು ಪ್ರತಿನಿತ್ಯ ಸುದ್ದಿ ಮಾಡುತ್ತಿದ್ಧರೂ ಯಾವುದೇ ಕ್ರಮವಾಗುತ್ತಿಲ್ಲ ಕಬ್ಬಿಣದ ಅದಿರು ಕಳ್ಳ ಸಾಕಾಣಿಕೆ ವಿಷಯದಲ್ಲಿ ಈಗಾಗಲೇ ಇಡಿ ಇಲಾಖೆಯು 5 ಕೋಟಿಗೂ ಅಧಿಕ ಹಣವನ್ನು ಜಪ್ತು ಮಾಡಿದೆ. ತಮ್ಮ ಸ್ವಂತ ಬಂಗಲೆಯನ್ನು ಕಟ್ಟಿರುವ ವಿಷಯದಲ್ಲಿ ಒಳಚರಂಡಿಗಾಗಿ ಮೀಸಲಾಗಿರುವ ಭೂಮಿಯನ್ನು ಒತ್ತುವರಿ ಮಾಡಿರುವ ವಿಷಯವು ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಿದ್ದರೂ ಸಹ ಸರಕಾರದಿಂದ ಈವರೆಗೆ ಯಾವುದೇ ಕ್ರಮವಾಗಿಲ್ಲ.

ಅಲ್ಲದೇ ನಗರದ ಬಿಡಿಸಿಸಿ ಬ್ಯಾಂಕ್ ನಲ್ಲಿ ಇತ್ತೀಚಿಗೆ ನಡೆದ 58 ಹುದ್ದೆಗಳ ನೇಮಕಾತಿಯಲ್ಲಿ ಅಂದಾಜು 15 ಕೋಟಿ ರೂ ಗಳ ಅಕ್ರಮ ವ್ಯವಹಾರದ ಆರೋಪವು ಕೇಳಿ ಬಂದಿದೆ ಬ್ಯಾಂಕ್ ಅಧ್ಯಕ್ಷರೇ ಆಗಿರುವ ಸಚಿವ ಆನಂದ್ ಸಿಂಗ್ ಬಾಗಿಯಾಗಿರುವ ಆರೋಪಗಳಿವೆ, 6,000 ಸಾವಿರ ಅರ್ಜಿಗಳನ್ನು ಹಾಕಿದ ಅಭ್ಯರ್ಥಿಗಳಲ್ಲಿ ಎಲ್ಲರಿಗೂ ಪರೀಕ್ಷೆಗಳನ್ನು ನಡೆಸಿಲ್ಲ ಹಾಗೂ ಪರೀಕ್ಷೆ ಬರೆದ ಎಲ್ಲಾ ಅಭ್ಯರ್ಥಿಗಳಿಗೂ ಸಂದರ್ಶನ ನಡೆಸಿಲ್ಲ ಅಲ್ಲದೆ ಮೌಕಿಕ ಸಂದರ್ಶನದ ಹೆಸರಿನಲ್ಲಿ ಅಪೆಕ್ಸ್ ಬ್ಯಾಂಕ್ ಮತ್ತು RESERVE BANK ನ ನೇಮಕಾತಿಯ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ತಮಗೆ ಬೇಕಾದವರನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಹಣಕಾಸಿನ ಅವ್ಯವಹಾರ ನಡೆದಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದೆ.
ಅಲ್ಲದೆ ಸಚಿವರ ಸಹೋದರ ಸಂಬಂಧಿ ಹೆಸರು ಇದರಲ್ಲಿ ಕೇಳಿಬಂದಿದೆ ಹಾಗೂ ನಗರದಲ್ಲಿರುವ ಐ ಎಸ್ ಆರ್ ಫ್ಯಾಕ್ಟರಿ ಯನ್ನು ಮುಚ್ಚಿಸುವಲ್ಲಿ ಸಚಿವರ ಪ್ರಮುಖ ಪಾತ್ರವಿದೆ ಎಂಬುವುದು ಈಗಾಗಲೇ ಜನಜನಿತವಾಗಿದೆ ಚರ್ಚೆ ಯಾಗುತ್ತಿದೆ
ಇತ್ತೀಚಿಗೆ ಸಂಡೂರಿನಲ್ಲಿ ಶ್ರೀ ಕುಮಾರಸ್ವಾಮಿ ದೇವಸ್ಥಾನದ 180 ಎಕ್ಕರೆ ಜಮೀನು ಸಚಿವ ಆನಂದ್ ಸಿಂಗ್, ಅವರ ಪುತ್ರ ಸಿದ್ದಾರ್ಥ್ ಸಿಂಗ್ ಮತ್ತು ಅವರ ಕುಟುಂಬದವರು ಕಬಳಿಕೆ ಮಾಡಿರುವ ತಾಜಾ ಆರೋಪವಿದೆ.
ಇಷ್ಟೆಲ್ಲಾ ಆರೋಪಗಳ ನಡುವೆ ಈಗ ಚುನಾವಣೆ ಹೊಸ್ತಿಲಲ್ಲಿ ಯಾವುದೇ ಸಂಕೋಚವಿಲ್ಲದೆ ಚುನಾವಣೆಗೆ ಮುಂದಾಗಿರುವುದು ಪ್ರಜಾಪ್ರಭುತ್ವದ ಅಣಕವಾಗಿದೆ. ಈ ಸಂದರ್ಭದಲ್ಲಿ ಸಂಘಟನೆಯ ನೂರಾರು ಮುಖಂಡರು ಸದಸ್ಯರು ಕಾರ್ಯದರ್ಶಿಗಳು ಪಾಲ್ಗೊಂಡಿದ್ದರು ತಾಲೂಕ ವರದಿಗಾರರು:ಮಾಲತೇಶ್ ಶೆಟ್ಟರ್ ಹೊಸಪೇಟೆ