ನ್ಯಾ. ಎ ಜೆ ಸದಾಶಿವ ಆಯೋಗದ ವರದಿ ಜಾರಿ. ವಿರೋಧಿಸಿ ಪ್ರತಿಭಟನೆ
ತರೀಕೆರೆ ಮಾರ್ಚ್:28
ತರೀಕೆರೆ– ಅವೈಜ್ಞಾನಿಕವಾದ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೊಳಿಸಿರುವುದನ್ನು.

ತರೀಕೆರೆ ತಾಲೂಕು ಬಂಜಾರ, ಭೋವಿ , ಕೊರಚ ಕೊರಮರ ಸಮಾಜದ ಮುಖಂಡರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ಮೆರವಣಿಗೆ ನಡೆಸಿ, ತರೀಕೆರೆ ಉಪ ವಿಭಾಗ ಅಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಬಂಜಾರ ಸಂಘದ ಅಧ್ಯಕ್ಷರಾದ ಗೋವಿಂದ ನಾಯ್ಕ್, ಶಿವಶಂಕರ್ ನಾಯಕ್, ಕುಮಾರ್ ನಾಯಕ್, ವಿಜಯ ಬಾಯಿ, ಮಂಜು ಮಹಾರಾಜ ಸ್ವಾಮೀಜಿ, ಹಾಗೂ ಕೊರಚ ಕೊರಮ ಸಂಘದ ಅಧ್ಯಕ್ಷರಾದ ವಿ ಗಾಳಪ್ಪ, ಗುಂಡಪ್ಪ, ಭೋವಿ ಸಂಘದ ಮುಖಂಡರಾದ ಗೌರೀಶ, ಲಾಯರ್ ಪರಮೇಶ್, ಮುಂತಾದವರು ವಹಿಸಿದ್ದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್ ತರೀಕೆರೆ