ವೀರಶೈವ ಸಮಾಜ ಜಿಎಚ್ ಶ್ರೀನಿವಾಸರವರನ್ನು ಇಪ್ಪತೈದು ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸುತ್ತೇವೆ
ತರೀಕೆರೆ ಏ.21

ವಿಧಾನಸಭಾ ಚುನಾವಣೆಯಲ್ಲಿ ನಾನು ಬೆಂಬಲಿಸಿದ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಆರ್ ರಾಜಶೇಖರ್ ಇಂದು ಬ್ಲಾಕ್ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಮಾತನಾಡಿದರು. ತರೀಕೆರೆ ಕ್ಷೇತ್ರದಲ್ಲಿ ಜಿಎಸ್ ಶ್ರೀನಿವಾಸ್ ರವರನ್ನು 25, ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸುತ್ತೇವೆ. ಕ್ಷೇತ್ರದಲ್ಲಿ ಅತಿ ಹೆಚ್ಚು ಮತಗಳು ವೀರಶೈವ ಸಮಾಜದವರದಾಗಿರುತ್ತದೆ. 46 ಗ್ರಾಮ ಪಂಚಾಯಿತಿಗಳಲ್ಲಿ ಶ್ರೀನಿವಾಸ್ ರವರನ್ನು ಗುರುತಿಸಿರುತ್ತೇವೆ. ಪ್ರಾಮಾಣಿಕವಾಗಿ ಮತ ಹಾಕಿಸಿ ಗೆಲ್ಲಿಸುತ್ತೇವೆ ಎಂದು ಹೇಳಿದರು. ಇಂದು ಪಟ್ಟಣದ ಬ್ಲಾಕ್ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಅಧ್ಯಕ್ಷರಾದ ಹೆಚ್ ಯು ಫಾರೂಕ್ ಮತ್ತು ಜಿಎಚ್ ಶ್ರೀನಿವಾಸ್ ರವರ ನೇತೃತ್ವದಲ್ಲಿ ಬಿಜೆಪಿಯಿಂದ ಆರು ಜನ ಮುಖಂಡರು ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿ ಸೇರ್ಪಡೆಗೊಂಡರು.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಆರ್ ರಾಜಶೇಖರ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಯಾಗಿದ್ದ ಟಿ ಜಿ ಮಂಜುನಾಥ್, ಲಕ್ಕವಳ್ಳಿಯ ರವಿಕುಮಾರ್, ಬೆಟ್ಟದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಿಜಿ ಗಂಗಾಧರಪ್ಪ, ನೇರಲಕೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎನ್ ಎಲ್ ತಮ್ಮ ಯ್ಯಪ್ಪ, ಲಂಬಾಣಿ ಸಮಾಜದ ಮುಖಂಡರು ಹಾಗೂ ವಕೀಲರು ಆದ ಶಿವಶಂಕರ್ ನಾಯ್ಕ, ದಲಿತ ಸಂಘರ್ಷ ಸಮಿತಿಯ ಎಚ್ ವಿ ಬಾಲರಾಜ್, ದಲಿತ ಮುಖಂಡರಾದ ಶಿವಚಂದ್ರ ಸೇರಿದಂತೆ ಎಂಟು ಜನರು ಕಾಂಗ್ರೆಸ್ ಪಕ್ಷಕ್ಕೆ ಹೊಸದಾಗಿ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡ ಟಿಜಿ ಮಂಜುನಾಥ್ ಮಾತನಾಡಿ ಬಿಜೆಪಿ ಮತ್ತು ಡಿ ಎಸ್ ಸುರೇಶ್ ರವರ ಜನ ವಿರೋಧಿ ಧೋರಣೆಯಿಂದ ಬೇಸತ್ತು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ಜಿಎಚ್ ಶ್ರೀನಿವಾಸ ರವರನ್ನು ಖಂಡಿತ ಗೆಲ್ಲಿಸುತ್ತೇವೆ ಎಂದು ಹೇಳಿದರು. ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಎಚ್ವಿ ಬಾಲರಾಜ್ ಮಾತನಾಡಿ ನಾವು ಕಾಂಗ್ರೆಸ್ಸಿಗೆ ಬೆಂಬಲಿಸುತ್ತೇವೆ, ಈ ಹಿಂದೆ ಶಾಸಕರಾಗಿದ್ದ ಶ್ರೀನಿವಾಸ್ ರವರು ಮಾಡಿರುವ ಸೇವೆ ಮತ್ತು ಅಭಿವೃದ್ಧಿ ಕೆಲಸಗಳು ಜನಪ್ರಿಯವಾಗಿವೆ ಎಂದು ಹೇಳಿದರು. ಲಕ್ಕವಳ್ಳಿ ರವಿಕುಮಾರ್ ಮಾತನಾಡಿ ಡಿಎಸ್ ಸುರೇಶರವರು ಶ್ರೀಮಂತರ ಪರವಾಗಿ ಕೆಲಸ ಮಾಡಿದ್ದಾರೆ, ಅವರ ತೋಟಗಳಿಗೆ ಹೋಗುವ ರಸ್ತೆ ಅಭಿವೃದ್ಧಿ ಮಾಡಿಸಿದ್ದಾರೆ. ಬಡವರ ಕೇರಿಗಳಿಗೆ ರಸ್ತೆ ಅಭಿವೃದ್ಧಿ ಮಾಡಿಸಿಲ್ಲ. ಕಾಂಗ್ರೆಸ್ ನಿಂದ ಜಿ ಎಚ್ ಶ್ರೀನಿವಾಸ್ ಶಾಸಕರಾದರೆ ಕ್ಷೇತ್ರದ ಅಭಿವೃದ್ಧಿ ಮಾಡಿಸುತ್ತಾರೆ ಎಂದು ಹೇಳಿದರು. ದಲಿತ ಮುಖಂಡ ಶಿವಚಂದ್ರ ಮಾತನಾಡಿ ಬಿಜೆಪಿಯ ಸುರೇಶ್ ರವರಿಗೆ ಎಸ್ ಸಿ / ಎಸ್ ಟಿ ಯವರ ಓಟು ಬೇಡ ಎಂದು ತಿರಸ್ಕರಿಸಿದ್ದಾರೆ.ಮತ್ತು ಎಸ್ಸಿ ಎಸ್ಟಿ ಅವರನ್ನು ಕಂಡರೆ ಅವರಿಗೆ ಆಗುವುದಿಲ್ಲ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷದಿಂದ ಉಮೇದುವಾರಿಕೆ ಸಲ್ಲಿಸಿರುವ ಜಿಎಚ್ ಶ್ರೀನಿವಾಸ್ ಮಾತನಾಡಿ ಬಿಜೆಪಿ ಸರ್ಕಾರದ ಧೋರಣೆ ಮತ್ತು ಡಿಎಸ್ ಸುರೇಶರವರಿಂದ ಬೇಸತ್ತ ಮುಖಂಡರುಗಳು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಹೇಳಿದರು. ಪಕ್ಷಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ಎಲ್ಲರಿಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಯು ಫಾರೂಕ್ ರವರು ಪಕ್ಷದ ಶಾಲು ಹಾಕಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪುರಸಭಾ ಮಾಜಿ ಅಧ್ಯಕ್ಷರಾದ ಪ್ರಕಾಶ್ ವರ್ಮಾ, ಧರ್ಮರಾಜ್, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಲಿಂಗದಹಳ್ಳಿ ರವಿ, ಮಾಜಿ ಶಾಸಕರಾದ ದಿವಂಗತ ಬಿ ಆರ್ ನೀಲಕಂಠಪ್ಪರವರ ಪುತ್ರ ರವಿಕುಮಾರ್. ಗಿರಿರಾಜ, ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷರಾದ ಪರಶುರಾಮ್, ಗೌರೀಶ, ಎಂಟಿ ಗಂಗಾಧರ, ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ