ಬದುಕಿನ ಅರ್ಥ ನಾನಾರ್ಥ……!

ಶಿಕ್ಷಕ ಹೇಳುತ್ತಾನೆ ಬದುಕು ಎಂದರೆ ಪಾಠ.
ವಿದ್ಯಾರ್ಥಿ ಹೇಳುತ್ತಾನೆ ಬದುಕು ಎಂದರೆ ಕಲಿಕೆ.
ಬಿಕ್ಷುಕ ಹೇಳುತ್ತಾನೆ ಬದುಕು ಎಂದರೆ ಒಂದು ಹೊತ್ತಿನ ಊಟ.ರೈತ ಹೇಳುತ್ತಾನೆ ಬದುಕು ಎಂದರೆ ಒಂದು ಉತ್ತಮ ಬೆಳೆ.
ಕಲಾವಿದ ಹೇಳುತ್ತಾನೆ ಬದುಕು ಎಂದರೆ ಒಂದು ಉತ್ತಮ ಪ್ರದರ್ಶನ.
ಶ್ರಮಿಕ ಹೇಳುತ್ತಾನೆ ಬದುಕು ಎಂದರೆ ಒಂದು ಹೊತ್ತಿನ ನಿದ್ದೆ.ಅನಾಥ ಹೇಳುತ್ತಾನೆ ಬದುಕು ಎಂದರೆ ಒಂದೊಳ್ಳೆಯ ಆಸರೆ.
ನೃತ್ಯಪಟು ಹೇಳುತ್ತಾನೆ ಬದುಕು ಎಂದರೆ ಒಂದು ಉತ್ತಮ ವೇದಿಕೆ.
ಸಾಹಿತಿ ಹೇಳುತ್ತಾನೆ ಬದುಕು ಎಂದರೆ ಒಂದು ಉತ್ತಮ ಬರಹ.ಸ್ವಾರ್ಥಿ ಹೇಳುತ್ತಾನೆ ಬದುಕು ಎಂದರೆ ಮೋಸ.
ವೈದ್ಯ ಹೇಳುತ್ತಾನೆ ಬದುಕು ಎಂದರೆ ಒಂದು ಜೀವ.
ಸೈನಿಕ ಹೇಳುತ್ತಾನೆ ಬದುಕು ಎಂದರೆ ದೇಶ.ಸ್ಪರ್ಧಾಳು ಹೇಳುತ್ತಾನೆ ಬದುಕು ಎಂದರೆ ಗೆಲುವು.
ಪ್ರಾಮಾಣಿಕ ಹೇಳುತ್ತಾನೆ ಬದುಕು ಎಂದರೆ ಸತ್ಯ.
ಸ್ನೇಹಿತ ಹೇಳುತ್ತಾನೆ ಬದುಕು ಎಂದರೆ ಗೆಳೆಯರು.
ರಚನೆ:ಮುತ್ತು.ಯ.ವಡ್ಡರ (ಶಿಕ್ಷಕರು) ಬಾಗಲಕೋಟ