ಹಿಂಗಾರು ರಾಗಿ ಖರೀದಿ ಕೇಂದ್ರ ಸ್ಥಾಪಿಸುವಂತೆ ರೈತರಿಂದ ಆಗ್ರಹ ಮೂಲಕ ಮನವಿ
ಕೊಟ್ಟೂರು ಏ.25

ಹಿಂಗಾರು ರಾಗಿ ಕರಿಸುವ ಬಗ್ಗೆ ಎಂ ಕುಮಾರಸ್ವಾಮಿ ತಹಸೀಲ್ದಾರರಿಗೆ ಮನವಿ
ಕೊಟ್ಟೂರು ತಾಲೂಕು ಸುತ್ತಮುತ್ತಲಿನ ಗ್ರಾಮಗಳಲ್ಲಿ ಅತಿ ಹೆಚ್ಚು ರೈತಾಪಿ ಕುಟುಂಬಗಳಿಂದ ಕೂಡಿದ್ದು.ಸುಮಾರು ಸಾವಿರ ಎಕರೆಗೆ ಹೆಚ್ಚು ರಾಗಿ ಬೆಳೆಯುತ್ತಾರೆ ಆ ರಾಗಿ ಬೆಳೆಯನ್ನು ಖರೀದಿ ಕೇಂದ್ರದ ಮೂಲಕ ಖರೀದಿ ಮಾಡಬೇಕೆಂದು ರಾಂಪುರ ಚಿರಬಿ,ಗಂಗಮ್ಮನಹಳ್ಳಿ, ಕೋಡಿಹಳ್ಳಿ, ಸುಟ್ಟು ಕೋಡಿಹಳ್ಳಿ, ಬೋರನಹಳ್ಳಿ, ಸಿರಿನಾಯಕನಹಳ್ಳಿ, ಜಗಟಗೇರಿ, ಹಿರೇವಡ್ಡರಲ್ಲಿ ಹರಕನಾಳು ರೈತರ ಆಗ್ರಹವಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಮತ್ತು ಭರ್ಮಲಿಂಗಪ್ಪ ಕೋಡಿಹಳ್ಳಿ ತಿಮ್ಮಪ್ಪ ಟಿ ಹನುಮನಹಳ್ಳಿ ರಾಮಣ್ಣ ಬಸವರಾಜ ರಮೇಶ ಸುತ್ತಮುತ್ತಲಿನ ರೈತರು ತಹಸಿಲ್ದಾರರಿಗೆ ಮನವಿ ಮಾಡಿಕೊಂಡರು. .
ತಾಲೂಕ ವರದಿಗಾರರು : ಪ್ರದೀಪ್.ಕುಮಾರ್.ಕೊಟ್ಟೂರು