ಕೂಡ್ಲಿಗಿ ಬಿಜೆಪಿ ಪರ ಪ್ರಚಾರ ಅಭಿಮಾನಿಗಳ ಹರ್ಷೋದ್ಗಾರ. ಸುದೀಪ್ (ರೋಡ್ ಶೋ) ಮೌನ ಮೆರವಣಿಗೆ.
ಕೂಡ್ಲಿಗಿ ( ಏ. 27 ) :

ವಿಜಯನಗರ ಜಿಲ್ಲೆ ಕೂಡ್ಲಿಗಿ: ಪಟ್ಟಣದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಲೋಕೇಶ್. ವಿ. ನಾಯಕ ಹಾಗೂ ಮುಖಂಡರೊಂದಿಗೆ, ಚಿತ್ರ ನಟ ಕಿಚ್ಚ ಸುದೀಪ್ ತೆರೆದ ವಾಹನದಲ್ಲಿ ಸಂಚರಿಸಿದರು. ಪಟ್ಟಣದ ಶ್ರೀರಾಮಲಿಂಗೇಶ್ವರ ದೇವಸ್ಥಾನದಲ್ಲಿ,ದೇವರ ದರ್ಶನ ಪಡೆದು ಪಕ್ಷದ ಅಭ್ಯರ್ಥಿ ಲೋಕೇಶ. ವಿ. ನಾಯಕ ಹಾಗೂ ಪಕ್ಷದ ಮುಖಂಡರೊಂದಿಗೆ. ತೆರೆದ ವಾಹನದಲ್ಲಿ ಪಟ್ಟಣದ ಹೊಸಪೇಟೆ ರಸ್ತೆಯ ಮೂಲಕ, ಮದಕರಿ ವೃತ್ತದ ವರೆಗೆ ಅಭಿಮಾನಿಗಳ ಹರ್ಷೋಧ್ಗಾರಗಳೊಂದಿಗೆ ಮೆರವಣಿಗೆಯಲ್ಲಿ ತೆರಳಿದರು. ನಂತರ ಲೋಕೇಶ. ವಿ. ನಾಯಕರನ್ನು ತೋರಿಸಿ, ಅಭಿಮಾನಿಗಳತ್ತ ಕೈಮಾಡಿ ನಂತರ ಕೈ ಮುಗಿದರು. ಸಮಯಕ್ಕೆ ಸರಿಯಾಗಿ ಆಗಮಿಸದೆ ಕೂಡ್ಲಿಗಿ ತಾಲೂಕಿನ ಅಭಿಮಾನಿಗಳಿಗೆ ಬಿಜೆಪಿ ಪರ ಮತಯಾಚನೆ ಬಗ್ಗೆ ಮಾತನಾಡದೆ ,ಅವರು ಒಟ್ಟಾರೆ ಎಲ್ಲಿಯೂ ಮಾತನಾಡಲಿಲ್ಲ, ಯಾವುದೇ ರೀತಿ ಭಾಷಣ ಸಹ ಮಾಡಲಿಲ್ಲ ಎಲ್ಲಿಯೂ ತುಟಿ ಪಿಟಿಕ್ ಎನ್ನದೇ ಮೌನವಾಗಿದ್ದರು.

ಬಿಜೆಪಿ ಅಭ್ಯರ್ಥಿ ಲೋಕೇಶ. ವಿ. ನಾಯಕರೊಂದಿಗೆ, ತೆರೆದ ವಾಹನದಲ್ಲಿ ಸುದೀಪ್ ರ ಬಿಜೆಪಿಯ ಪರ ಮತಯಾಚನೆಗೆ ಪ್ರಚಾರಕ್ಕೆ ಬಂದ ನಟ ಮೌನ ಮೆರವಣಿಗೆ (ರೋಡ್ ಶೋ) ಜರುಗಿತು.ಹಾಗೂ ಯಾವ ಸಂದೇಶವು ಅಭಿಮಾನಿಗಳಿಗೆ ತಿಳಿಯಂದಂತೆ ಭಾಷಣದ ಮೂಲಕ ಬಿಜೆಪಿ ಪಕ್ಷದ ಕುರಿತು ಮತ ಹಾಕುವಂತೆ ತಿಳಿಯದಂತಾಯಿತು,ಜನಗಳು ತುಂಬಾ ಉತ್ಸಹದಿಂದ ಹಳ್ಳಿಗಳಿಂದ ಹಾಗೂ ಬೇರೆ ಬೇರೆ ಕಡೆಯಿಂದ ಬಂದಾ ಅಭಿಮಾನಿಗಳಿಗೆ ಗೊಂದಲದ ಸ್ಥಿತಿಯಂತೆ ಕಂಡುಬಂದಿದೆ ಎಂದು ಅಭಿಮಾನಿಗಳು ತಿಳಿಸುತ್ತಾರೆ,ಹಾಗೂ ಕೂಡ್ಲಿಗಿಗೆ ಬಂದಿರುವುದಕ್ಕೆ ಕಿಚ್ಚ ಸುದೀಪನ್ನು ಕಣ್ಣಾರೆ ನೋಡಿ ತುಂಬಾ ಸಂತೋಷನವಾಯಿತು, ಎಂದು ಹಲವಾರು ಅಭಿಮಾನಿಗಳು ತಿಳಿದರು,ಅಭ್ಯರ್ಥಿ ಲೋಕೇಶ. ವಿ. ನಾಯಕ, ಪಕ್ಷದ ಪ್ರಮುಖ ಮುಖಂಡರು, ವಿವಿದ ಪ್ರಮುಖ ಜನಪ್ರತಿನಿಧಿಗಳು ಇದ್ದರು. ಅಸಂಖ್ಯಾತ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ನಾಗರೀಕರು ಇದ್ದರು. ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶಪ್ಪ ವಿ. ಮಲ್ಲಾಪುರ ನಿರ್ಧೇಶನದಲ್ಲಿ, ಸಿಪಿಐ ವಂತ ಅಸೋದೆ ನೇತೃತ್ವದಲ್ಲಿ ಪಿಎಸ್ಐ ಧನುಂಜಯ ಕುಮಾರ. ವಿವಿದ ಪೊಲೀಸ್ ಠಾಣೆಗಳ ಅಧಿಕಾರಿಗಳು, ಮತ್ತು ಸಿಬ್ಬಂದಿಯವರಿಂದ ಬಿಗಿ ಬಂದೋ ಬಸ್ತು ಏರ್ಪಡಿಸಲಾಗಿತ್ತು. ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿದೆಡೆಯಿಂದ, ಸುದೀಪ್ ರೊಡ್ ಶೋನಲ್ಲಿ ಅಸಂಖ್ಯಾತ ಅಭಿಮಾನಿಗಳು ಹರ್ಷೋಧ್ಗಾರ ಮುಗಿಲು ಮುಟ್ಟಿತು.
ಜಿಲ್ಲಾ ವರದಿಗಾರರು : ರಾಘವೇಂದ್ರ. ಸಾಲುಮನೆ. ಕೂಡ್ಲಿಗಿ