ನರೇಗಾ ಕಾಮಕಾರಿ ಸ್ಥಳದಲ್ಲಿ ಮತದಾನ ಪ್ರತಿಜ್ಞಾವಿಧಿ ಬೋಧನೆ.
ತಿಮ್ಮಲಾಪೂರ ( ಏ. 27 ) :

ಇದಕ್ಕೂ ಮುನ್ನ ಮಾನ್ಯ ಜಿಪಂ ಸಿಇಒ ಸದಾಶಿವಪ್ರಭು ಅವರು ಅವರು ಕೊಟ್ಟೂರು ತಾಲೂಕು ಕಂದಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಮ್ಮಲಾಪುರ ಗ್ರಾಮದ ಅರಣ್ಯ ಪ್ರದೇಶದಲ್ಲಿ ನರೇಗಾದಡಿ ಕೈಗೊಂಡಿದ್ದ ನೀರು ಮತ್ತು ಮಣ್ಣು ಸಂರಕ್ಷಣಾ ಕಾಮಗಾರಿ ಸ್ಥಳದಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಮತದಾನ ಮಾಡಬೇಕು. ಯಾವುದೇ ಕಾರಣಕ್ಕೂ ಮತದಾನದಿಂದ ದೂರ ಉಳಿಯಬಾರದು. ಮತದಾನ ಮಾಡುವುದು ಪ್ರತಿಯೊಬ್ಬ ಮತದಾರನ ಕರ್ತವ್ಯ ಎಂದು ಹೇಳಿದರು. ಕಾಮಗಾರಿ ಸ್ಥಳದಲ್ಲಿ ಇದ್ದ 210 ನರೇಗಾ ಕೂಲಿಕಾರರಿಗೆ ಮತದಾನದ ಪ್ರತಿಜ್ಞಾವಿಧಿ ಬೋಧಿಸಿದರು.
ತಾಲೂಕ ವರದಿಗಾರರು : ಪ್ರದೀಪ್.ಕುಮಾರ್.C. ಕೊಟ್ಟೂರು.