ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾಧಿಕಾರಿ ಸಂತೋಷ್.ಶ್ರೀ ಮಲಿಯಮ್ಮ ದೇವಸ್ಥಾನ ಜೀರ್ಣೋದ್ಧಾರಕ್ಕೆ 1.50 ಅನುದಾನ ಮಂಜೂರು.
ಹೂಡೇಂ ಮೇ.1

ಕೂಡ್ಲಿಗಿ ಖಾನಹೊಸಹಳ್ಳಿ ಹೋಬಳಿಯಲ್ಲಿ ಬರುವ ತಾಲೂಕಿನ ಹೂಡೇಂ ಗ್ರಾಮದಲ್ಲಿ ಪರಮಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ತಾಲೂಕಿನ ಹೂಡೇಂ ಗ್ರಾಮದ ಶ್ರೀ ಮಲಿಯಮ್ಮ ದೇವಸ್ಥಾನದ ಜೀರ್ಣೋದ್ಧಾರಕ್ಕೆ 1.50 ಲಕ್ಷ ರೂ ಅನುದಾನ ಮಂಜೂರು ಮಾಡಿದ್ದಾರೆ. ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ತಾಯಕನಹಳ್ಳಿ ವಲಯದ ಹೂಡೇಂ ಕ್ಷೇತ್ರದ ಯೋಜನಾಧಿಕಾರಿ ಸಂತೋಷ್ ಇವರ ಮುಖಾಂತರ ಶ್ರೀ ಮಲಿಯಮ್ಮ ದೇವಸ್ಥಾನದ ಸಮಿತಿಯ ಜರಗು ಬೋರಯ್ಯ ಅವರ ಕಡೆ 1.50 ಲಕ್ಷ ರೂ.ನ ಡಿಡಿಯನ್ನು ವಿತರಿಸಿದರು. ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಪುರಾತನ ದೇವಸ್ಥಾನಗಳ ಕಟ್ಟಡದ ಜೀರ್ಣೋದ್ಧಾರಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಸಂಸ್ಥೆಯು ಸಮುದಾಯದ ಅಭಿವೃದ್ಧಿ, ಸ್ವಸಹಾಯ ಸಂಘಗಳ ಮೂಲಕ ಸಾಲ ವಿತರಣೆ, ಕೃಷಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಗ್ರಾಮೀಣರ ಬದುಕನ್ನು ಕಟ್ಟಿಕೊಡುತ್ತಾ ಬಂದಿದೆ ಎಂದು ಹೇಳಿದರು. ಈ ವೇಳೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಮೇಲ್ವಿಚಾರಕರಾದ ರಂಗನಾಥ್, ಸ್ಥಳೀಯ ಸೇವಾ ಪ್ರತಿನಿಧಿ ಲಕ್ಷ್ಮೀದೇವಿ ಹಾಗೂ ಶ್ರೀ ಮಲಿಯಮ್ಮ ದೇವಸ್ಥಾನ ಕಮ್ಮಟಿದಾರರಾದ ಮಂಜಣ್ಣ, ಶ್ರೀನಿವಾಸ್, ತಿಪ್ಪೇಸ್ವಾಮಿ ಸೇರಿದಂತೆ ಸ್ವ ಸಹಾಯ ಸಂಘದ ಸದಸ್ಯರು, ದೇವಸ್ಥಾನದ ಪದಾಧಿಕಾರಿಗಳು ಹಾಗೂ ಊರಿನ ಮುಖಂಡರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು : ರಾಘವೇಂದ್ರ. ಸಾಲುಮನಿ. ಕೂಡ್ಲಿಗಿ