ಬೇಸಿಗೆ ರಜೆ ಮುಗಿದು,ಮತ್ತೆ ಶುರುವಾಗಿದೆ ಶಾಲೆ ಸುಡುವ ಬಿಸಿಲ ಕಳೆದು, ಕಲಿಯೋಣ ಕನ್ನಡ ಅಕ್ಷರಮಾಲೆ ಮೋಜು ಮಸ್ತಿಯ ತೊರೆದು, ಶಾಲೆಗೆ ತೆರೆಳಿ ಜೂನ್ ನಿಂದಲೆ ಶಾಲೆ ಸ್ವಚ್ಛವ ತೊಳೆದು,ವಿದ್ಯಾಭ್ಯಾಸ ಕಲಿಯೋಣ ಇಂದಿನಿಂದಲೇ..
ತೆರೆದಿದೆ ಶಾಲೆ ಬಾ ಮಗು ನೀ ಶಾಲೆಗೆ ಹೊಸ ಬಟ್ಟೆ ಹೊಸ ಪುಸ್ತಕ ಸಿದ್ಧಾರಾಗಿ ಕಲಿಕೆಗೆ ಆಟ ಪಾಠ ಮಧ್ಯಾಹ್ನದ ಬಿಸಿ ಊಟ ನಿಮಗೆ ಬರದಿರುವವರನ್ನ ತಪ್ಪಿಸದೆ ಕರೆದುಕೊಂಡು ಬಾ ತರಗತಿಗೆ..
ಜ್ಞಾನ ಭಂಡಾರದ ಗುರುವಿನ ಮಾರ್ಗದರ್ಶನದಿ ಅಮೂಲ್ಯ ಸ್ನೇಹಿತರ ಬಾಂಧವ್ಯದ ಗೆಳೆತನದಿ ಸರಸ್ವತಿಯ ಪ್ರಾರ್ಥಿಸು ಜ್ಞಾನವಗಳಿಸು ಈ ಕ್ಷಣದಿ ಪ್ರತಿ ಗುರುವಿಗೆ ವಿನಮ್ರನಾಗು ವಿನಯಶೀಲದಿ..
ನೆನಪಿರಲಿ ತಾಯಿಯೇ ಮೊದಲ ಗುರುವಿದ್ದಂತೆ ಕಲಿಸುವ ಗುರುವೇ ಎರಡನೆಯ ತಾಯಿ ಇದ್ದಂತೆ ಕಿರಿಯರಿಗೆ ದಾರಿದೀಪವಾಗು ಪ್ರಜ್ವಲಿಸುವ ದೀಪವಿದ್ದಂತೆ ಹಿರಿಯರಿಗೆ ಆತ್ಮೀಯನಾಗು ಪ್ರೀತಿಸುವ ಹೂವಂತೆ..
ಶ್ರೀ ಮುತ್ತು.ಯ.ವಡ್ಡರ (ಶಿಕ್ಷಕರು) ಬಾಗಲಕೋಟ Mob-9845568484
Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.