ಶಿವಮೊಗ್ಗ ಜಿಲ್ಲಾ ಸಂಚಾಲಕರಾಗಿ ಹರಮಘಟ್ಟ ರಂಗಪ್ಪ ಆಯ್ಕೆ – ಡಿ.ಆರ್.ಪಾಂಡುರಂಗ ಸ್ವಾಮಿ.

ಬೆಂಗಳೂರು ಜೂನ್.1

ಬಾಬಾಸಾಹೇಬ್ ಡಾಕ್ಟರ್ ಬಿಆರ್ ಅಂಬೇಡ್ಕರ್ ಮತ್ತು ಮಹಾತ್ಮ ಪ್ರೊಫೆಸರ್ ಬಿ ಕೃಷ್ಣಪ್ಪ ರವರ ಕನಸನ್ನು ನನಸು ಮಾಡುವ ಉದ್ದೇಶ ಕ ದ ಸಂ ಸ ದಾಗಿದೆ ಎಂದು ರಾಜ್ಯ ಸಂಚಾಲಕರಾದ ಡಿ ಆರ್ ಪಾಂಡುರಂಗ ಸ್ವಾಮಿ ರವರು ಬೆಂಗಳೂರಿನ ಹೋಟೆಲ್ ಕಪಿಲಾ ರೆಸಿಡೆನ್ಸಿಯಲ್ಲಿ ನಡೆದ ರಾಜ್ಯ ಸಮಿತಿ ಸಭೆಯಲ್ಲಿ ಹೇಳಿದರು. ಶಿವಮೊಗ್ಗದಲ್ಲಿ ಹರಮಘಟ್ಟ ರಂಗಪ್ಪ ರವರ ನೇತೃತ್ವದಲ್ಲಿ ಶೋಷಿತರ ಪರವಾಗಿ ಹೋರಾಟಗಳನ್ನು ರೂಪಿಸಲಿ, ನಮ್ಮ ಸಂಘಟನೆಯೂ ಬೇರೆ ಬೇರೆ ಇತರೆ ದಲಿತ ಸಂಘಟನೆಗಳಿಗಿಂತ ಭಿನ್ನವಾದ ನಿಲುವನ್ನು, ವಿಶೇಷತೆಗಳನ್ನು ಹೊಂದಿದೆ. ಸಾಮಾನ್ಯ ಜನರ ಕೆಲಸ ಮಾಡಲು ಯಾವ ಸಂಘಟನೆಗಳು ತಯಾರಿಲ್ಲ, ಎಲ್ಲಾ ಸಂಘಟನೆಗಳು ಸ್ವಾರ್ಥಿಗಳಾಗಿವೆ. ಜನಸಾಮಾನ್ಯರಿಂದ ಅಂತರವನ್ನು ಹೊಂದಿದ್ದಾರೆ. ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತಿಲ್ಲ. ಶೋಷಿತ ಕಟ್ಟ ಕಡೆಯ ಸಮುದಾಯಗಳ ಪರವಾಗಿ ಕೆಲಸವನ್ನು ಮಾಡಲು ಶಿವಮೊಗ್ಗ ಜಿಲ್ಲೆಯಲ್ಲಿ ಸಂಘಟನೆ ಚುರುಕುಗೊಳಿಸುವ ಉದ್ದೇಶದಿಂದ ಹರಮಘಟ್ಟ ರಂಗಪ್ಪ ರವರನ್ನು ಜಿಲ್ಲಾ ಸಂಚಾಲಕರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು. ರಾಜ್ಯ ಸಂಘಟನಾ ಸಂಚಾಲಕರಾದ ಕೊಡಿಗಲ್ ರಮೇಶ್ ರವರು ಮಾತನಾಡಿ ಡಿಆರ್ ಪಾಂಡುರಂಗ ಸ್ವಾಮಿ ರವರ ನೇತೃತ್ವದ ದಲಿತ ಸಂಘರ್ಷ ಸಮಿತಿ ರಾಜ್ಯದಲ್ಲಿ ಉತ್ತಮವಾದ ನಾಯಕತ್ವ ಹೊಂದಿದೆ. ಇದೀಗ ಶಿವಮೊಗ್ಗ ಜಿಲ್ಲೆಯಲ್ಲಿಯು ಸಹ ಹರಮಘಟ್ಟ ರಂಗಪ್ಪ ರವರನ್ನು ಜಿಲ್ಲಾ ಸಂಚಾಲಕರನ್ನಾಗಿ ಆಯ್ಕೆ ಮಾಡಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಬಲವಾದ ಸಂಘಟನೆ ಯಾಗುವ ನಿರೀಕ್ಷೆ ಹೊಂದಿದ್ದೇವೆ ಪ್ರತಿ ವರ್ಷದಂತೆ ಕ ದ ಸಂ ಸ ರಾಜ್ಯ ಸಮಿತಿಯು ಸರಳ ಸಾಮೂಹಿಕ ವಿವಾಹವನ್ನು ಏರ್ಪಡಿಸಿ ಸಮಾಜದಲ್ಲಿ ಮದುವೆಯಿಂದ ಸಾಲದ ಸುಲಿಗೆ ಪೋಷಕರು ಸಿಲುಕದಂತೆ ವಧುವರರಿಗೆ ಆರ್ಥಿಕ ಸಹಕಾರವನ್ನು ನೀಡುತ್ತಿದ್ದೇವೆ. ಆದ್ದರಿಂದ ಪ್ರತಿ ಜಿಲ್ಲೆಯಿಂದ ಕನಿಷ್ಠ 25ರಿಂದ 50 ಜೋಡಿಗಳನ್ನು ನೋಂದಾಯಿಸಿ ಕರೆದುಕೊಂಡು ಬನ್ನಿರಿ. ಆಗಸ್ಟ್ 26 ಮತ್ತು 27ರಂದು ಸರಳ ಸಾಮೂಹಿಕ ವಿವಾಹ ನಡೆಯಲಿದೆ ಎಂದು ಹೇಳಿದರು. ರಾಜ್ಯ ಸಂಘಟನಾ ಸಂಚಾಲಕರಾದ ತರೀಕೆರೆ ಎನ್ ವೆಂಕಟೇಶ್ ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಎಳೆದು ತಂದ ವಿಮೋಚನ ರಥವನ್ನು ಮಹಾತ್ಮ ಪ್ರೊ ಬಿ ಕೃಷ್ಣಪ್ಪ ಎಳೆದು ತಂದಿರುವ ಈ ರಥವನ್ನು ನಾವೆಲ್ಲರೂ ಸಹ ರಕ್ತದ ಕಣಕಣದಲ್ಲಿಯೂ ಶಕ್ತಿ ತುಂಬಿಕೊಂಡು ಪ್ರಾಮಾಣಿಕವಾಗಿ ಸಂಘಟನೆಯನ್ನು ಮಾಡೋಣ. ರಾಜ್ಯಾದ್ಯಂತ ಬಲವಾದ ಸಂಘಟನೆಯನ್ನು ಕಟ್ಟೋಣವೆಂದು ಹೇಳಿದರು. ಇನ್ನೋರ್ವ ರಾಜ್ಯ ಸಂಘಟನಾ ಸಂಚಾಲಕರಾದ ಟಿ ಎಂ ಅಂಜಯ್ಯ ಮಾತನಾಡಿ ಸಂಘಟನೆಯನ್ನು ರಾಜ್ಯಾದ್ಯಂತ ಎಲ್ಲಾ ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಶಾಖೆಗಳನ್ನು ಸಂಘಟಿಸಬೇಕು ಬಲಪಡಿಸಬೇಕು. ರಾಜಕೀಯ ಶಕ್ತಿಯಾಗಿ ಪರಿವರ್ತಿಸಬೇಕು ಎಂದು ಹೇಳಿದರು. ನೂತನ ಶಿವಮೊಗ್ಗ ಜಿಲ್ಲಾ ಸಂಚಾಲಕರಾದ ಹರಮಘಟ್ಟ ರಂಗಪ್ಪ ಮಾತನಾಡಿ ಕಳೆದ 25 ವರ್ಷಗಳಿಂದ ಸಂಘಟನೆಯಲ್ಲಿ ತೊಡಗಿಸಿಕೊಂಡು ಅನೇಕ ಹೋರಾಟಗಳನ್ನು ಮಾಡುತ್ತಾ ಶೋಷಿತರ ಪರ ಧ್ವನಿಯಾಗಿ ಕೆಲಸ ಮಾಡಿ ಹೋರಾಟದಿಂದ ಸೆರೆಮನೆ ವಾಸದೊಂದಿಗೆ ಅನೇಕ ಕೇಸುಗಳು ನನ್ನ ಮೇಲೆ ದಾಖಲಾಗಿವೆ. ಪಾಂಡುರಂಗ ಸ್ವಾಮಿ ರವರು ನನ್ನ ಹೋರಾಟಗಳಿಗೆ ನ್ಯಾಯ ಬದ್ಧ ಸ್ಥಾನ ನೀಡಿ ಜಿಲ್ಲಾ ಸಂಚಾಲಕರಾಗಿ ಆಯ್ಕೆ ಮಾಡಿರುತ್ತಾರೆ ಅವರಿಗೆ ಅಭಿನಂದನೆಗಳು. ರಾಜ್ಯ ಸಮಿತಿಯ ಎಲ್ಲಾ ಹೋರಾಟಗಳಿಗೂ ಕಾರ್ಯಕ್ರಮಗಳಿಗೂ ನನ್ನ ಸಹಕಾರ ಎಂದೆಂದಿಗೂ ಇರುತ್ತದೆ ಎಂದು ಹೇಳಿದರು. ಕಲ್ಬುರ್ಗಿ ಜಿಲ್ಲಾ ಸಂಚಾಲಕ ಭೀಮಶಂಕರ್ ಕದಂ ಮಾತನಾಡಿ ಗುಲ್ಬರ್ಗ ಜಿಲ್ಲೆಯಲ್ಲಿ ಹಲವಾರು ದಲಿತ ಪರ ಹೋರಾಟಗಳನ್ನು ಮಾಡಿ, ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಲು ಒತ್ತಾಯಿಸಿ ಹೋರಾಟ ಮಾಡಿರುತ್ತೇನೆ, ಬಾಬಾ ಸಾಹೇಬ್ ಡಾ. ಬಿಆರ್ ಅಂಬೇಡ್ಕರ್ ಮತ್ತು ಪ್ರೊ ಬಿ ಕೃಷ್ಣಪ್ಪರವರ ಹೋರಾಟದ ಹಾದಿಯಲ್ಲಿ ಸಂಘಟನೆ ಮಾಡುತ್ತಾ ನಡೆಯುತ್ತಿದ್ದೇನೆ. ರಾಜ್ಯ ಸಮಿತಿ ಗುಲ್ಬರ್ಗಾ ಜಿಲ್ಲೆಯಲ್ಲಿ ರಾಜ್ಯಮಟ್ಟದ ವಿಚಾರ ಸಂಕೀರ್ಣ ಮತ್ತು ಕಾರ್ಯಗಾರ ನಡೆಸುವ ಜವಾಬ್ದಾರಿಯನ್ನು ನನಗೆ ಕೊಟ್ಟಿದ್ದಾರೆ. ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಕ್ರಮ ವಹಿಸುತ್ತೇನೆ ಎಂದು ಹೇಳಿದರು. ಸಭೆಯಲ್ಲಿ ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷರಾದ ದುರ್ಗಾ ದಾಸ್ ನೌಕರರ ಸಂಘದ ರಾಜ್ಯ ಅಧ್ಯಕ್ಷರಾದ ಕರಿಸಿದ್ದಯ್ಯ ಮಹಿಳಾ ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕಿಯಾದ ಪಿ ವಿಜಯಲಕ್ಷ್ಮಿ ಗೋಪಾಲ್. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೂತನ ಜಿಲ್ಲಾ ಸಂಚಾಲಕಿಯಾಗಿ ಆಯ್ಕೆಯಾಗಿರುವ ಯಲಹಂಕದ ಶಿಲ್ಪಾ ಭಾನುಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button