ಉತ್ತಮ ಸಮಾಜ ನಿರ್ಮಾಣಕ್ಕೆ ಯುವಕರು ತಂಬಾಕು ಕೆಟ್ಟ ಚಟಗಳಿಂದ ದೂರವಿರಿ.

ತರೀಕೆರೆ ಜೂನ್.1

ಮನೆಗೆ ಉತ್ತಮ ಪೋಷಕರಾಗಿ ಸಮಾಜಕ್ಕೆ ಉತ್ತಮ ಪ್ರಜೆಗಳಾಗಿ ಉತ್ತಮ ಸಮಾಜ ನಿರ್ಮಾಣಕ್ಕೆ ಯುವಕರು ತಂಬಾಕು ಇತರೆ ಕೆಟ್ಟ ಚಟಗಳಿಂದ ದೂರವಿರಬೇಕು ಎಂದು ಆರ್ ಶಿವಕುಮಾರ್ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಇಂದು ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿಕ್ಕಮಗಳೂರು,ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಮತ್ತು ತಾಲೂಕು ಸಾರ್ವಜನಿಕ ಆಸ್ಪತ್ರೆ ತರೀಕೆರೆ, ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಪುನೀತ್ ರಾಜಕುಮಾರ್ ಪ್ರತಿಮೆ ಬಳಿ ಏರ್ಪಡಿಸಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಹೇಳಿದರು. ಯುವಕರು ಸದೃಢ ಸಮಾಜಕ್ಕೆ ಉತ್ತಮ ಪ್ರಜೆಗಳಾಗಿ ಇರಬೇಕೆಂದರೆ ತಂಬಾಕು ಸೇವನೆಯಿಂದ ದೂರವಿರಬೇಕು, ಸಾರ್ವಜನಿಕರಲ್ಲಿ ಕಾನೂನು ಅರಿವು ಅಗತ್ಯವಾಗಿದೆ, ಮೂರು ಲಕ್ಷ ರೂ ಆದಾಯಕ್ಕಿಂತ ಕಡಿಮೆ ಆದಾಯ ಹೊಂದಿದವರಿಗೆ ನ್ಯಾಯ ಒದಗಿಸಿಕೊಡಲು ಉಚಿತ ಕಾನೂನು ನೆರವು ನೀಡುತ್ತೇವೆ ಇದರ ಸದುಪಯೋಗ ಮಾಡಿಕೊಳ್ಳಬೇಕು. ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕು ಆರೋಗ್ಯ ಅಧಿಕಾರಿ ಡಾ. ಚಂದ್ರಶೇಖರ್ ಮಾತನಾಡಿ 1987ರಿಂದ ತಂಬಾಕು ನಿಷೇಧದ ಬಗ್ಗೆ ವಿಶ್ವ ತಂಬಾಕು ರಹಿತ ದಿನಾಚರಣೆ ಮಾಡಲಾಗುತ್ತಿದೆ ತಂಬಾಕು ಸೇವನೆ ಯಲ್ಲಿ, ಸೇದುವ ತಂಬಾಕು, ಜಿಗಿಯುವ ತಂಬಾಕು, ಎಂದು ಎರಡು ವಿಧಗಳಿದ್ದು 40% ಪುರುಷರು 15% ಮಹಿಳೆಯರು ತಂಬಾಕು ಬಳಸುತ್ತಿದ್ದಾರೆ. 124 ದೇಶಗಳಲ್ಲಿ ತಂಬಾಕು ಬೆಳೆಯುತ್ತಿದ್ದಾರೆ, ಬಳಸುವವರಲ್ಲಿ ಚೀನಾ ಮೊದಲನೇ ಸ್ಥಾನದಲ್ಲಿದ್ದು ಭಾರತ ಎರಡನೇ ಸ್ಥಾನದಲ್ಲಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 300 ಮಿಲಿಯನ್ ಜನ ಆಹಾರವಿಲ್ಲದೆ ಬಳಲುತ್ತಿದ್ದಾರೆ ಆದ್ದರಿಂದ ತಂಬಾಕು ಬೆಳೆಯುವುದನ್ನು ಬಿಟ್ಟು ಆಹಾರ ಪದಾರ್ಥಗಳನ್ನು ಬೆಳೆಯಲು ಪ್ರೋತ್ಸಾಹಿಸಬೇಕು. ತಂಬಾಕು ಸೇವನೆಯಿಂದ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಅಸಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ ಆದ್ದರಿಂದ ತಂಬಾಕು ಬಳಸುವವರ ಮನ ಪರಿವರ್ತನೆ ಯೊಂದಿಗೆ ಅರಿವು ಮೂಡಿಸಬೇಕು. ತರೀಕೆರೆ ಸಾರ್ವಜನಿಕ ಆಸ್ಪತ್ರೆಯ ಆಯುಷ್ ವೈದ್ಯರಾದ ಡಾ. ಶ್ರೀನಿವಾಸ್ ರವರು ಕಳೆದ ಮೂರು ವರ್ಷಗಳಿಂದ ಸುಮಾರು 300 ಜನರಿಗೆ ಕೌನ್ಸಿಲಿಂಗ್ ಮಾಡಿ ಅರಿವು ಮೂಡಿಸಿ ಧೂಮಪಾನ ಮಾಡುವುದನ್ನು ಬಿಡಿಸಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ವೈದ್ಯಾಧಿಕಾರಿಯದ ಡಾ. ಟಿ ಎಂ ದೇವರಾಜ್ ಮಾತನಾಡಿ ಪ್ರಕೃತಿಯ ಮಡಿಲಿನಲ್ಲಿ ಎಲ್ಲವೂ ಸಿಗುತ್ತದೆ ಆದರೆ ಒಳ್ಳೆಯದನ್ನು ಬಳಸಬೇಕು ಪೋಷಕರು ಸರಿಯಾದ ಮಾರ್ಗದಲ್ಲಿ ನಡೆಯಬೇಕು ಹಾಗೆಯೇ ಕಿರಿಯರಿಗೆ ಉತ್ತಮ ಮಾರ್ಗದರ್ಶನ ನೀಡಬೇಕು. ತಂಬಾಕು ಸೇವನೆಯಲ್ಲಿ ಯುವಕರು ಹೆಚ್ಚಾಗಿ ಬಲಿಯಾಗುತ್ತಿದ್ದಾರೆ ಧೂಮಪಾನ ಮದ್ಯಪಾನ ಮಾಡುವುದರಿಂದ, ದುಡ್ಡು ಕೊಟ್ಟು ಕಾಯಿಲೆಗಳನ್ನು ತಂದುಕೊಳ್ಳುತ್ತಿದ್ದಾರೆ. ಚಿಕಿತ್ಸೆಗಾಗಿ ಲಕ್ಷಗಟ್ಟಲೆ ಹಣ ವ್ಯಯಿಸುತ್ತಿದ್ದಾರೆ. ಎಲ್ಲರೂ ಚಟಗಳಿಂದ ದೂರವಿದ್ದು ಉತ್ತಮ ಸಮಾಜವನ್ನು ಕಟ್ಟೋಣ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು. ತಂಬಾಕು ಸೇವನೆಯಿಂದ ಆಗುವ ತೊಂದರೆ ಕುರಿತು ಪ್ರತ್ಯಕ್ಷತೆಯನ್ನು ತೋರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪುರಸಭಾ ಮುಖ್ಯ ಅಧಿಕಾರಿ ಹೆಚ್ ಮಹಾಂತೇಶ್, ರೋಟರಿ ಸಂಸ್ಥೆಯ ಅಧ್ಯಕ್ಷರಾದ ದಯಾನಂದ್, ಹಾಗೂ ವಕೀಲರಾದ ಎಸ್ ಸುರೇಶ್ ಚಂದ್ರ ರವರು ಮಾತನಾಡಿದರು. ಡಾ. ಶ್ರೀನಿವಾಸ್ , ಡಾ. ಸಂತೋಷ್ ಕುಮಾರ್, ಡಾ. ಚನ್ನಬಸಪ್ಪ, ಡಾ. ಸಾದಿಕ್ ಅಹಮದ್, ಡಾ. ಮೋಹನ್ , ಡಾ. ನಾಗರಾಜ್ ಡಾ. ನಟರಾಜ್, ಡಾ. ಭಾಗ್ಯಲಕ್ಷ್ಮಿ, ಹಾಗೂ ಎನ್ ಸಿ ಡಿ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಸಿಬ್ಬಂದಿ, ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಗಳು, ಗ್ರೂಪ್ ಡಿ ಸಿಬ್ಬಂದಿ, ಉಪಸ್ಥಿತರಿದ್ದು ಕ್ಷ ಕಿರಣ ತಜ್ಞರಾದ ವೀಣಾ ಪ್ರಾರ್ಥಿಸಿ, ಡಾ. ಶ್ರೀನಿವಾಸ್ ಸ್ವಾಗತಿಸಿ, ಐಸಿಟಿಸಿ ಪ್ರಯೋಗಶಾಲಾ ತಂತ್ರಜ್ಞರಾದ ಓಂಕಾರ ಮೂರ್ತಿ ನಿರೂಪಿಸಿ ಡಾ. ಭಾಗ್ಯಲಕ್ಷ್ಮಿ ವಂದಿಸಿದರು.

ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button