ದಲಿತ ಭೂಮಿ ವಸತಿ ಹಕ್ಕಿಗಾಗಿ – ಧರಣಿ ಪ್ರತಿಭಟನೆ.

ಆಲಮೇಲ ಜು.19

ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ತಹಶಿಲ್ದಾರರು ಕಛೇರಿ ಮುಂದೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತಾಲೂಕು ಸಮಿತಿ ಆಲಮೇಲ್ ದಲಿತರ ಭೂಮಿ ವಸತಿ ಹಕ್ಕಿಗಾಗಿ ಮತ್ತು ಇತರೆ ಹಕ್ಕೊತ್ತಾಯಗಳಿಗೆ ಆಗ್ರಹಿಸಿ ಪ್ರತಿಭಟನೆ ಧರಣಿ ಕರ್ನಾಟಕ ರಾಜ್ಯದಾದ್ಯಂತ ತಹಸೀಲ್ದಾರ್ ಕಚೇರಿ ಎದುರುಗಡೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರವಾದ ದಲಿತರ ಭೂಮಿ ವಸತಿ ಹಕ್ಕಿಗಾಗಿ ಮತ್ತು ಇತರ ಹಕ್ಕೋತ್ತಾಯಗಳಿಗೆ ಆಗ್ರಹಿಸಿ ಪ್ರತಿಭಟನೆ ಧರಣಿಯಲ್ಲಿ ಡಿಎಸ್ಎಸ್ ಜಿಲ್ಲಾ ಅಧ್ಯಕ್ಷರಾದ ಶಿವುಕುಮಾರ್ ಮೇಲಿನಮನಿ ಮಾತನಾಡಿ ಸರ್ಕಾರ ಜಮೀನು ಉಳುಮೆ ಮಾಡುತ್ತಿರುವ ರೈತರಿಗೆ ಹಕ್ಕುಪತ್ರ ನೀಡಬೇಕು ಎಂದು ಹೇಳಿದರು. ಹಾಗೂ ತಾಲೂಕು ತಹಶಿಲ್ದಾರರ ಕಛೇರಿಯ ಶಿರಸ್ತೆದಾರರಾದ ಪಿ.ಎಸ್ ಮುಖಿಹಾಳ ಇವರಿಗೆ ಮನವಿ ನೀಡಿದರು ಡಿಎಸ್ಎಸ್ ಅಧ್ಯಕ್ಷರಾದ ಶಶಿಧರ ನಾಯ್ಕೋಡಿ ನೇತ್ರತ್ವದಲ್ಲಿ ಧರಣಿಯನ್ನು ನಡೆಸಲಾಯಿತು. ಡಿ.ಎಸ್.ಎಸ್ ಸಂಚಾಲಕರು ಸಂಜು ಮೇಲಿಮನಿ ಮುತ್ತು ಎಂಟಮನ, ಸಲೀಮ್ ತಾಂಬುಳಿ ರಾಜು ಮೇತ್ರಿ, ಮತ್ತು ಡಿ.ಎಸ್‌.ಎಸ್ ಸರ್ವ ಸದಸ್ಯರು ಹಾಗೂ ಪೊಲೀಸ್ ಠಾಣೆಯ ಎ.ಎಸ್.ಐ ಬಿ.ಎಸ್ ದುರ್ಲೆಕರ ಅವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ,ದೇವರ ಹಿಪ್ಪರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button