ಕಾನಾ ಹೊಸಹಳ್ಳಿ ವೈಭವ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶೇ 98.24 ಫಲಿತಾಂಶ.
ಕಾನಾ ಹೊಸಹಳ್ಳಿ ಮೇ.10

ಕೂಡ್ಲಿಗಿ ತಾಲೂಕಿನ ಕಾನ ಹೊಸಹಳ್ಳಿ ವೈಭವ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 2023 24 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಎಸ್ ಆದರ್ಶ 625 ಕ್ಕೆ 614 ಅಂಕಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಹಾಗೂ ದ್ವಿತೀಯ ಸ್ಥಾನ ಎಸ್.ವಿ ಹರ್ಷ 625 ಕ್ಕೆ 598 ಅಂಕ ಗಳಿಸಿದ್ದಾರೆ, ತೃತೀಯ ಸ್ಥಾನ ಅಂಬಿಕಾ ಟಿ 625 ಕ್ಕೆ 590 ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ಸ್ಥಾನದಲ್ಲಿದ್ದಾರೆ. 2023 24 ನೇ ಸಾಲಿನ ವೈಭವ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಕುಳಿತು ವಿದ್ಯಾರ್ಥಿಗಳ ಸಂಖ್ಯೆ 81 ಇದರಲ್ಲಿ 76 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಪ್ರಾಂಶುಪಾಲರು ತಿಳಿಸಿದರು. ಇದೇ ಸಂದರ್ಭದಲ್ಲಿ ವೈಭವ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಸವಿತಾ ಮುರುಳಿಧರ. ಮುರಳಿದರೆ ಗಜೇಂದ್ರಗಡ. ಸೇರಿದಂತೆ ಇವರ ಸಾಧನೆಗೆ ಶಾಲಾ ರಕ್ಷಕ-ಶಿಕ್ಷಕ ಸಂಘ, ಶಾಲಾ ವ್ಯವಸ್ಥಾಪಕರು, ಅಧ್ಯಾಪಕ-ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದರು.
ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ.