“ಅಂಚೆಗೆ ಹೋಗದ ಪತ್ರ” ಚಿತ್ರದ ‘ಕಣ್ಣಂಚಲೇ ಪ್ರೀತಿ’ – ಹಾಡು ಬಿಡುಗಡೆ.

ಬೆಳಗಾವಿ ಏ.17

ನವಗ್ರಹ ಮತ್ತು ವರ್ಚಸ್ ಸಹಯೋಗದಲ್ಲಿ ಬೆಳಗಾವಿ ಹುಡುಗರ “ಅಂಚೆಗೆ ಹೋಗದ ಪತ್ರ” ಚಿತ್ರದ ಎರಡನೇ ಹಾಡು “ಕಣ್ಣಂಚಲೇ ಪ್ರೀತಿ ಶುರುವಾಯಿತು” ಬಿಡುಗಡೆ ಯಾಗಿ ಇದೀಗ ಯೂಟ್ಯೂಬ್ ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ.

ಈ ಹಾಡಿಗೆ ಖ್ಯಾತ ಗಾಯಕ ಪಂಚಮ ಜೀವ ಧ್ವನಿಯಾಗಿದ್ದು, ಎಸ್.ಕೆ.ಎಸ್ ಅವರ ಸಾಹಿತ್ಯ ಹಾಡಿನ ಭಾವವನ್ನು ಮತ್ತಷ್ಟು ಮನ ಮುಟ್ಟುವಂತೆ ಮಾಡಿದೆ. ಸಂಪೂರ್ಣ ಉತ್ತರ ಕರ್ನಾಟಕದ ಪ್ರತಿಭೆಗಳ ಒಕ್ಕೂಟದಲ್ಲಿ ನಿರ್ಮಾಣವಾಗಿರುವ, ಉತ್ತರ ಕರ್ನಾಟಕದಲ್ಲೇ ಸಂಪೂರ್ಣ ಚಿತ್ರೀಕರಣವಾದ ಈ ಚಿತ್ರದಲ್ಲಿ ಪ್ರವೀಣ ಸುತಾರ ನಾಯಕನಾಗಿ ಮತ್ತು ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

ನಾಯಕಿಯಾಗಿ ಸಹನಾ ಪ್ರಕಾಶ ಜೊತೆಗೆ “ರಕ್ಕಸಪುರದೊಳ” ಖ್ಯಾತಿಯ ಸೌಮ್ಯ ಅಮರಪೂರಕರ್ ಮತ್ತು “ಮಹಾನಟಿ ರನ್ನರ್ ಆಫ್” ವರ್ಷಾ ದಿಗ್ರೆಜೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿ ಕೊಂಡಿದ್ದಾರೆ.

ಚಿತ್ರಕ್ಕೆ ದಿವಾಕರ ಎಂ ಅವರ ಸಂಗೀತ, ಮಂಜು ಬಸವರಾಜ ಛಾಯಾಗ್ರಹಣ, ಸಂಕಲನ ಶಿವ ಗಂಗಾಧರ ರಂಜಿತ ಪಾಂಡೆ ವಿ.ಎಫ್.ಎಕ್ಸ್, ಪತ್ರಿಕಾ ಸಂಪರ್ಕ ಡಾ, ಪ್ರಭು ಗಂಜಿಹಾಳ, ಡಾ, ವೀರೇಶ ಹಂಡಿಗಿ ನಿರ್ವಹಿಸಿದ್ದು, ಸಹ ನಿರ್ದೇಶಕರಾಗಿ ವೀಣಾ ಮತ್ತು ವಿಶಾಲ ಕೆಲಸ ಮಾಡಿದ್ದು, ಪ್ರವೀಣ ತಾನಾಜಿ ಸುತಾರ, ಮಂಜುನಾಥ ಹುಲಮನಿ, ವರ್ಚಸ್ ಮತ್ತು ಪರದಿಶೆ ನಿರ್ಮಾಪಕರಾಗಿದ್ದಾರೆ.

ಚಿತ್ರದ ಎಲ್ಲಾ ಕಾರ್ಯಗಳೂ ಮುಗಿದು ಬಿಡುಗಡೆಗೆ ಸಿದ್ದವಾಗಿದ್ದು, ಮೇ ತಿಂಗಳ ಕೊನೆ ವಾರದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ನಿರ್ದೇಶಕ ಪ್ರವೀಣ ಸುತಾರ ತಿಳಿಸಿದ್ದಾರೆ.

ರಾಜ್ಯ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಡಾ, ಪ್ರಭು ಗಂಜಿಹಾಳ ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button