ಯಾದವ ನಗರ ಶಾಲೆಯ ಮಕ್ಕಳಿಗೆ ಕ್ರೀಡಾ – ಸಮವಸ್ತ್ರ ವಿತರಣೆ.
ಚಳ್ಳಕೆರೆ ಸೆ.08


ತಾಲೂಕಿನ ಗೋಪನಹಳ್ಳಿ ಸಮೀಪದ ಯಾದವ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹದಿನೈದು ಮಕ್ಕಳಿಗೆ ನಗರದ ಇನ್ನರ್ ವಿಲ್ ಕ್ಲಬ್ ಏಂಜಲ್ಸ್ ವತಿಯಿಂದ ಕ್ರೀಡಾ ಸಮವಸ್ತ್ರಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಇನ್ನರ್ ವಿಲ್ ಕ್ಲಬ್ ಅಧ್ಯಕ್ಷೆ ಅಪರ್ಣ ದೇವೇಂದ್ರಪ್ಪ, ಖಜಾಂಚಿ ಡಾ, ಕವಿತಾ ನಾಗೇಶ್, ಮುಖ್ಯ ಶಿಕ್ಷಕ ಮಲ್ಲಿಕಾರ್ಜುನಪ್ಪ, ಸಹ ಶಿಕ್ಷಕ ಚಿಕ್ಕಣ್ಣಾಚಾರಿ, ನಿವೃತ್ತ ಶಿಕ್ಷಕ ವೀರಗಟ್ಟಪ್ಪ, ಪತ್ರಕರ್ತ ಬೆಳಗೆರೆ ಸುರೇಶ್, ಸದಸ್ಯೆ ನಳಿನಬಾಬು, ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ, ಅಡಿಗೆ ಸಿಬ್ಬಂದಿ ಸುಜಾತಾ ರತ್ನಮ್ಮ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

