ಮಾ.26 ರಿಂದ ಗ್ರಾಮ ದೇವತೆಗಳ ಜಾತ್ರಾ – ಮಹೋತ್ಸವ ಪ್ರಾರಂಭ.
ಜಕ್ಕಲಿ ಮಾ.25

ನರೇಗಲ್ಲ ಸಮೀಪದ ಜಕ್ಕಲಿ ಗ್ರಾಮದಲ್ಲಿ ಪ್ರತಿ ಮೂರು ವರ್ಷಕ್ಮೊಮ್ಮೆ ಜರುಗುವ ಗ್ರಾಮ ದೇವತೆಯರ ಜಾತ್ರಾ ಮಹೋತ್ಸವದ ಅಂಗವಾಗಿ ಮಾ. 26 ರಿಂದ 30 ರ ವರೆಗೆ 5. ದಿನ ಗಳವರೆಗೆ ವಿವಿಧ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಮಾ. 26 ರ ಬುಧವಾರ ಬೆಳಿಗ್ಗೆ 9 ಗಂಟೆಗೆ ಶ್ರೀ ಅನ್ನದಾನೇಶ್ವರ ಮಠದ ಆವರಣದಿಂದ ಸುಮಂಗಲಿಯರ ಕುಂಭ ಸಕಲ ವಾದ್ಯ ವೈಭವಗಳೊಂದಿಗೆ ದ್ಯಾಮಮ್ಮ ದೇವಿ ಹಾಗೂ ದುರ್ಗಮ್ಮ ದೇವಿ ಗ್ರಾಮ ದೇವತೆಯರನ್ನು ವಿಜೃಂಭಣೆಯ ಮೆರವಣಿಗೆ ಮೂಲಕ ಗ್ರಾಮ ಚಾವಡಿ ಮುಂಭಾಗದಲ್ಲಿರುವ ಗ್ರಾಮ ದೇವತೆಯರ ಮಂಟಪಕ್ಕೆ ಕರೆ ತಂದು ಪ್ರತಿಷ್ಠಾಪನೆ ಮಾಡಲಾಗುವುದು. ಅಂದು ರಾತ್ರಿ 10 ಕ್ಕೆ ಶ್ರೀಭುವನೇಶ್ವರಿ ರಂಗ ಮಂಟಪದಲ್ಲಿ ಶ್ರೀಲಕ್ಷ್ಮೀ ದೇವಿ ಶ್ರೀಬನಶಂಕರಿ ದೇವಿ ಬಯಲಾಟ ಸಂಘ ಇವರಿಂದ “ಕಿರಾತಾರ್ಜುನರ ಕಾಳಗ ಅರ್ಥಾತ್ ಪಾಶು ಪಷಾಸ್ತ್ರ ಪಡೆದ ಪಾರ್ಥ” ಎಂಬ ಸುಂದರ ಬಯಲಾಟ ಅಭಿನಯಿಸಲ್ಪಡುವುದು.ಮಾ. 27 ರ ಗುರುವಾರ ಬೆಳಿಗ್ಗೆ 6 ಗಂಟೆಯಿಂದ ಜಕ್ಕಲಿ ಗ್ರಾಮದ ಸೀಮೆಗೆ ಹಾಲು ಎರೆಯುವ ಕಾರ್ಯಕ್ರಮ ನಡೆಯಲಿದೆ.

ಮಾ. 28 ರ ಶುಕ್ರವಾರ ಬೆಳಿಗ್ಗೆ 8 ಗಂಟೆಯಿಂದ ಗ್ರಾಮ ದೇವತೆಗಳಿಗೆ ಸುಮಂಗಲಿಯರಿಂದ ಹಣ್ಣು, ಕಾಯಿ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಮಾ. 29 ರ ಶನಿವಾರ ಬೆಳಿಗ್ಗೆ 8 ಗಂಟೆಯಿಂದ ಸುಮಂಗಲೆಯರಿಂದ ಗ್ರಾಮ ದೇವತೆಯರಿಗೆ ಬಿತ್ತುವ ಬೀಜಗಳಿಂದ ಉಡಿ ತುಂಬುವುದು ಕಾರ್ಯಕ್ರಮ ನಡೆಯಲಿದೆ. ಹಾಗೂ ಮಧ್ಯಾಹ್ನ 12 ಗಂಟೆಗೆ ಅನ್ನ ಸಂತರ್ಪಣೆ ನಡೆಯಲಿದೆ. ಮಾ. 30 ರ ರವಿವಾರ ಮಧ್ಯಾಹ್ನ 3. ಕ್ಕೆ ಸಕಲ ವಾದ್ಯ ವೈಭವದೊಂದಿಗೆ ಮೆರವಣಿಗೆ ಮೂಲಕ ಗ್ರಾಮ ದೇವತೆಯರ ಮಂಟಪದಿಂದ ದ್ಯಾಮಮ್ಮದೇವಿ ಹಾಗೂ ದುರಗಮ್ಮ ದೇವಿಯರ ದೇವಸ್ಥಾನಕ್ಕೆ ಮರಳಲಿದೆ. ಅಂದು ಸಂಜೆ 5. ಕ್ಕೆ ಪ್ರಸಿದ್ದ ಪೈಲವಾನರಿಂದ ಕುಸ್ತಿ ಪ್ರದರ್ಶನ ನಡೆಯಲಿದೆ. ಭಕ್ತಾದಿಗಳು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದೇವಿಯರ ಕೃಪೆಗೆ ಪಾತ್ರ ರಾಗಬೇಕೆಂದು ಗ್ರಾಮ ದೇವತೆಯರ ಜಾತ್ರಾ ಕಮೀಟಿ ಗ್ರಾಮದ ಸದ್ಭಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ