131 ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರ – ವಿತರಣಾ ಕಾರ್ಯಕ್ರಮ.
ಕೊಟ್ಟೂರು ಸ.13

131 ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ಪಟ್ಟಣದ ಮುರಳ ಸಿದ್ದೇಶ್ವರ ಸಭಾಗಣದಲ್ಲಿ ಇಂದು ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆ ಬಿ.ಸಿ ಟ್ರಸ್ಟ್ (ರಿ) ಕೊಟ್ಟೂರು ಇವರ ವತಿಯಿಂದ ಪರಮ ಪೂಜ್ಯ ಡಾಕ್ಟರ್, ಡಿ.ವೀರೇಂದ್ರ ಹೆಗಡೆಯವರು ಮತ್ತು ಮಾತುಶ್ರೀ ಡಾಕ್ಟರ್, ಹೇಮಾವತಿ ವಿ ಹೆಗಡೆಯವರ ಕೃಪಾ ಆಶೀರ್ವಾದ ಗಳೊಂದಿಗೆ 131 ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯ ವೇತನದ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮವನ್ನು ಮಾನ್ಯ ತಹಸಿಲ್ದಾರ್ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಮುಖಂಡರು ಇವರ ನೇತೃತ್ವದಲ್ಲಿ ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕೊಟ್ಟೂರು ತಾಲೂಕು ದಂಡಾಧಿಕಾರಿ ಜಿ ಕೆ ಅಮರೇಶ್ ಅವರು ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಅರಿವಿನ ಮಹತ್ವ ತಿಳಿದಿರ ಬೇಕು ಅರಿವಿದ್ದರೆ ಗುರುವಿನ ಅವಶ್ಯಕತೆ ಇಲ್ಲ ಉಜ್ವಲ ಭವಿಷ್ಯಕ್ಕೆ ಜೀವನದಲ್ಲಿ ಶಿಕ್ಷಣ ತುಂಬಾ ಮಹತ್ವವಾದ ಶಕ್ತಿ ಎಂದು ಮಕ್ಕಳಿಗೆ ಕಿವಿ ಮಾತನ್ನು ಹೇಳಿದರು. ವಿಶ್ವ ಜ್ಞಾನಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಒಂದು ಮಾತು ಹೇಳುತ್ತಾರೆ ಶಿಕ್ಷಣ ಎಂಬುದು ಹುಲಿಯ ಹಾಲಿದ್ದಂತೆ ಇದನ್ನು ಕುಡಿದವರು ಗರ್ಜಿಸಲೇ ಬೇಕು ಎಂದು ಡಿ.ಎಸ್.ಎಸ್ ಮುಖಂಡ ಬದ್ದಿ ಮರಿಸ್ವಾಮಿ ಯವರು ಹೇಳಿದರು. ನಂತರ ಪಟ್ಟಣ ಪಂಚಾಯತಿ ಉಪಾಧ್ಯಕ್ಷರಾದ ಸಿದ್ದಯ್ಯನವರು ಮಕ್ಕಳಿಗೆ ವಿದ್ಯೆ ಅನ್ನೋದು ಯಾರ ಪಿತ್ರಾರ್ಜಿತ ಆಸ್ತಿಯು ಅಲ್ಲ ಅದು ಸಾಧಕರ ಸೊತ್ತೂ ಎಂದು ಹೇಳಿದರು. ಕನ್ನಡ ಸಾಹಿತಿ ಪರಿಷತ್ ಕೊಟ್ಟೂರು ತಾಲೂಕು ಅಧ್ಯಕ್ಷರಾದ ದೇವರು ಮನೆ ಕೊಟ್ರೇಶ್ ರವರು ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡಿರುವುದು ಬಹಳ ಮಹತ್ವವಾದ ಸಂಗತಿ ಈ ತರಹದ ಕಾರ್ಯಕ್ರಮವು ಧರ್ಮಸ್ಥಳ ಸಂಘದ ವತಿಯಿಂದ ನೆರವೇರಲಿ ಎಂದು ಹೇಳಿದರು. ಕಾರ್ಯಕ್ರಮದ ಕೊನೆಯ ಹಂತದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಕೊಟ್ಟೂರಿನ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಸರ್ವ ಸದಸ್ಯರು ಶಾಲಾ ಮಕ್ಕಳು ಹಾಗೂ ಅನೇಕ ಪೋಷಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್ .ಸಿ.ಕೊಟ್ಟೂರು