ಬದುಕೇ ಬಣ್ಣದ ಲೋಕ.
ಬದುಕೇ ಬಣ್ಣದ ಲೋಕ ಒಬ್ಬೊಬ್ಬರದು ವಿಚಿತ್ರ ಮುಖ ಅರಿತು ಬದುಕು ನೀನೇ ಸಾಧಕ ಸನ್ಮಾರ್ಗದಿ ನಡೆ ಜೀವನ ಸಾರ್ಥಕ..
ಕತ್ತಲಲ್ಲಿ ಹುಡುಕಬೇಕಿದೆ ಬೆಳಕನ್ನು ಇಂದು ನೋವಲ್ಲಿ ಇಲ್ಲ ನಮ್ಮೊಂದಿಗೆ ಮುಂದು ಹಿ0ದು ಒಂಟಿ ಎಂದು ಚಿಂತಿಸಬೇಡ ನಡೆ ಮುಂದು ನೆನಪಿಡು ಯಾರಿಲ್ಲ ನಿನ್ನ ಜೊತೆ ಎಂದೆಂದು…
ನೀನು ನಡೆದದ್ದೇ ದಾರಿಯಾಗಲಿ ಬದುಕು ಬಣ್ಣದ ಚಿತ್ತಾರವಾಗಲಿ ಎಂತದ್ದೇ ಕತ್ತಲು ಕಾರ್ಮೋಡದಲಿ ಜ್ಯೋತಿಯ ಬೆಳಕು ನಿನಗಿರಲಿ..
ನಿನ್ನ ಬೆನ್ನು ನಿನಗೆ ಕಾಣದಿರುವಾಗ ಏಕೆ ಚಿಂತಿಸುವೆ ಜನರು ಹಿಂದೆ ಮಾತನಾಡುವಾಗ ಹಿತಶತ್ರುಗಳು ಬರುವರು ಜೀವನದಲ್ಲಿ ಅವಾಗವಾಗ ನೋಡಿ ನಾಚುವರು ಅವರೇ ಖುಷಿಯಿಂದ ಬದುಕುವಾಗ..
ತಿರುವು ಮುರಿವಿನ ಬದುಕಿನಲಿ ಧೈರ್ಯವೊಂದೇ ಜೊತೆಗಿರಲಿ ಅಂಧಕಾರದ ಇರುಳಿನಲಿ ಜ್ಞಾನದ ಬೆಳಕು ಸದಾ ಬೆಳಗುತಿರಲಿ….
ರಚನೆ : ಶ್ರೀಮುತ್ತು.ಯ.ವಡ್ಡರ (ಶಿಕ್ಷಕರು)….