🚨 ಬ್ರೇಕಿಂಗ್ ನ್ಯೂಸ್: ರಾಜ್ಯ ಮಟ್ಟದ ವರದಿ! 🚨🔥 ಉಡುಪಿ ಸಾಸ್ತಾನ ಟೋಲ್‌ನಲ್ಲಿ ಮಹಾ ಹಗರಣ ಪತ್ರಕರ್ತರಿಗೆ ‘ಉಚಿತ ಟೋಲ್ ಪಾಸ್’ ವಂಚನೆ! – ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ..! 🔥

ಉಡುಪಿ/ಬೆಂಗಳೂರು ನ.11

ರಾಜ್ಯದ ವಿವಿಧ ಟೋಲ್‌ಗಳಲ್ಲಿ ವೃತ್ತಿಪರ ಪತ್ರಕರ್ತರಿಗೆ ನೀಡಬೇಕಾದ ಕಾನೂನುಬದ್ಧ ಉಚಿತ ಟೋಲ್ ಪಾಸ್ ಸೌಲಭ್ಯವನ್ನು ಮೊಟಕುಗೊಳಿಸಿ, ಟೋಲ್ ಶುಲ್ಕ ವಸೂಲಿ ಮಾಡುತ್ತಿರುವ ರಾಜ್ಯ ಸರ್ಕಾರದ ನಿರ್ಲಕ್ಷ್ಯದ ಧೋರಣೆ ಇದೀಗ ರಾಜ್ಯ ಮಟ್ಟದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವಿಶೇಷವಾಗಿ ಉಡುಪಿ ಜಿಲ್ಲೆಯ ಸಾಸ್ತಾನ ಟೋಲ್‌ನಲ್ಲಿ ವರದಿಗಾರರನ್ನು ಬಿಡದೆ ಟೋಲ್ ವಸೂಲಿ ಮಾಡುತ್ತಿರುವುದು ಸರ್ಕಾರದ ಅನ್ಯಾಯ ಮತ್ತು ದುರಾಡಳಿತದ ವ್ಯವಸ್ಥೆಯ ಪ್ರತೀಕವಾಗಿದೆ ಎಂದು ವೃತ್ತಿಪರರು ಗುಡುಗಿದ್ದಾರೆ. ಇದು ಸರ್ಕಾರವೇ ನೀಡಿದ ಸವಲತ್ತಿನ ನಿರ್ವಹಣೆಯಲ್ಲಿ ಮಾಡಿರುವ ‘ಕೈಗೆ ಏಟುಕದ’ ವಂಚನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

📰 ಪತ್ರಕರ್ತರ ಪ್ರಮುಖ ಆಗ್ರಹಗಳು ಮತ್ತು ಕಾನೂನಾತ್ಮಕ ಒತ್ತಾಯ ವೃತ್ತಿಪರ ಪತ್ರಕರ್ತರ ಸಂಘಗಳು ರಾಜ್ಯ ಸರ್ಕಾರಕ್ಕೆ ಮೂರು ಪ್ರಮುಖ ಮತ್ತು ಕಟ್ಟುನಿಟ್ಟಾದ ಆಗ್ರಹಗಳನ್ನು ಮುಂದಿಟ್ಟಿವೆ.

ಆರ್‌ಎನ್‌ಐ (RNI) ಮಾನ್ಯತೆ ಪಡೆದವರಿಗೆ ಮಾತ್ರ

ಆದ್ಯತೆ:-

ರಾಜ್ಯ ಸರ್ಕಾರವು ತನ್ನ ಆದೇಶಗಳಲ್ಲಿ ನಿರ್ದಿಷ್ಟ ಪಡಿಸಿದಂತೆ, RNI (Registrar of Newspapers for India) ಯಿಂದ ಕಾನೂನು ಬದ್ಧ ಮಾನ್ಯತೆ ಪಡೆದ ಪತ್ರಿಕೆಗಳು ಹಾಗೂ ಪ್ರತಿಷ್ಠಿತ ಸುದ್ದಿ ವಾಹಿನಿಗಳ ವರದಿಗಾರರಿಗೆ ಮಾತ್ರವೇ ಟೋಲ್ ವಿನಾಯಿತಿಯನ್ನು ನೀಡಬೇಕು.

ಅನಧಿಕೃತ ಅಥವಾ ಸ್ಥಳೀಯ ಪತ್ರಿಕೆಗಳ ನೆಪವೊಡ್ಡಿ ಅರ್ಹ ಪತ್ರಕರ್ತರಿಗೆ ವಿನಾಯಿತಿ ನಿರಾಕರಿಸುವುದು ಸಂಪೂರ್ಣ ಅನ್ಯಾಯ.

ಕೂಡಲೇ ಸ್ಪಷ್ಟ ಆದೇಶದ ಅಗತ್ಯ:-

ಟೋಲ್ ನಿರ್ವಹಣೆಯಲ್ಲಿನ ಗೊಂದಲ ನಿವಾರಿಸಲು, ರಾಜ್ಯ ಸರ್ಕಾರವು ಈ ವಿಚಾರದಲ್ಲಿ ಸ್ಪಷ್ಟವಾದ ಮತ್ತು ಕಟ್ಟುನಿಟ್ಟಾದ ಆದೇಶವನ್ನು ಹೊರಡಿಸಿ, ಅರ್ಹ ಪತ್ರಕರ್ತರಿಗೆ ಉಚಿತ ಟೋಲ್ ಪಾಸ್‌ಗಳನ್ನು ಕಡ್ಡಾಯಗೊಳಿಸಬೇಕು.

ಟೋಲ್ ವಸೂಲಿ:-

‘ಬಡವರ ರಕ್ತ ಹೀರುವ ತಂತ್ರ’?ಅರ್ಹ ವರದಿಗಾರರಿಂದಲೂ ಟೋಲ್ ವಸೂಲಿ ಮಾಡಲಾಗುತ್ತಿದ್ದು, ಇದು ‘ಬಡ ಮತ್ತು ಮಧ್ಯಮ ವರ್ಗದ ಪತ್ರಕರ್ತರ ರಕ್ತ ಹೀರುವ ತಂತ್ರವೇ?’ ಎಂಬ ಪ್ರಶ್ನೆ ಹುಟ್ಟುಹಾಕಿದೆ.

“ಅಕ್ರಮ ಮತ್ತು ಅನಧಿಕೃತ ಚಟುವಟಿಕೆಗಳನ್ನು ನಿಯಂತ್ರಿಸದೆ, ಕೇವಲ ಪತ್ರಕರ್ತರಿಗೆ ನಿರ್ವಹಣೆ ಮಾಡಿ ಬೊಕ್ಕಸ ತುಂಬಿಸಿ ಕೊಳ್ಳುವ ರಾಜ್ಯ ಸರ್ಕಾರದ ಈ ಧೋರಣೆ ಸರಿಯೇ?” ಎಂದು ಪತ್ರಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

🛣️ ಕಳಪೆ ರಸ್ತೆಗಳಿದ್ದರೂ ನಿಲ್ಲದ ‘ಗೋಲ್ಮಾಲ್ ಟೋಲ್ ನಿರ್ವಹಣೆ’

ಪತ್ರಕರ್ತರು ಮತ್ತು ಸಾರ್ವಜನಿಕ ವಲಯದಲ್ಲಿ ಟೋಲ್ ನೀತಿ ವಿರುದ್ಧ ಮತ್ತೊಂದು ದೊಡ್ಡ ವಿರೋಧ ವ್ಯಕ್ತವಾಗಿದೆ.

ರಾಜ್ಯಾದ್ಯಂತ ರಸ್ತೆಗಳು ಹದಗೆಟ್ಟಿದ್ದರೂ, ಹಲವೆಡೆ ಕಾಮಗಾರಿಗಳು ಕಳಪೆಯಾಗಿದ್ದರೂ, ಟೋಲ್ ವಸೂಲಿ ಮಾತ್ರ ಯಾವುದೇ ಕಾರಣಕ್ಕೂ ನಿಲ್ಲುತ್ತಿಲ್ಲ.ಉಡುಪಿ ಜಿಲ್ಲೆಯ ಎಲ್ಲೆಂದರಲ್ಲಿ ರಸ್ತೆಗಳು ಹದಗೆಟ್ಟಿದ್ದರೂ ಟೋಲ್ ವಸೂಲಿ ಮುಂದುವರಿದಿದೆ.

ಕಳಪೆ ರಸ್ತೆಗಳಿದ್ದರೂ ಟೋಲ್ ವಸೂಲಿ ಮಾಡುವುದು ‘ಗೋಲ್ಮಾಲ್ ಟೋಲ್ ನಿರ್ವಹಣೆ’ ಯಾಗಿದ್ದು, ಇದು ಸಾರ್ವಜನಿಕರಿಗೂ ಆಗುತ್ತಿರುವ ವಂಚನೆಯ ಒಂದು ಭಾಗ ಎಂದು ಆರೋಪಿಸಲಾಗಿದೆ. “ಈ ರೀತಿಯ ಟೋಲ್ ನಿರ್ವಹಣೆಯಲ್ಲಿ ಅದೆಷ್ಟೋ ‘ಗೋಲ್ಮಾಲ್ ಟೋಲ್ ಹಗರಣಗಳು’ ಇವೆ,” ಎಂದು ದೂರಲಾಗಿದೆ.

🚨 ಸರ್ಕಾರಕ್ಕೆ ಅಂತಿಮ ಎಚ್ಚರಿಕೆ:-

“ಬೀದಿಗಿಳಿದು ಉಗ್ರ ಹೋರಾಟ!”ಪತ್ರಕರ್ತರ ಸಂಘಗಳು ಸರ್ಕಾರದ ಈ ದುರಾಡಳಿತದ ವ್ಯವಸ್ಥೆಗೆ ಬಹಿರಂಗವಾಗಿ ದಿಕ್ಕಾರ ಕೂಗಿದ್ದು, ತಕ್ಷಣ ಸೂಕ್ತ ಆದೇಶ ಹೊರಡಿಸದಿದ್ದರೆ, “ಮುಂದಿನ ದಿನಗಳಲ್ಲಿ ಇದೇ ವಿಚಾರಕ್ಕೆ ಪತ್ರಕರ್ತರು ಬೀದಿಗಿಳಿದು ಉಗ್ರ ಹೋರಾಟ ಮಾಡುವುದರಲ್ಲಿ ಯಾವ ಅನುಮಾನವೂ ಇಲ್ಲ,” ಎಂದು ರಾಜ್ಯ ಮಟ್ಟದಲ್ಲಿ ಎಚ್ಚರಿಕೆ ನೀಡಿದ್ದಾರೆ. ಈ ವಿಷಯವನ್ನು ರಾಷ್ಟ್ರಮಟ್ಟದ ವರದಿಗೆ ಒಯ್ದು, ಸರ್ಕಾರಕ್ಕೆ ಬಿಸಿ ಮುಟ್ಟಿಸುವುದು ಖಚಿತ ಎಂದು ಘೋಷಿಸಲಾಗಿದೆ.

ವರದಿ:ಆರತಿ.ಗಿಳಿಯಾರು.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button