🚨BREAKING NEWS🚨 🌟ರಮೇಶ್ ಕಾಂಚನ್ ನೇತೃತ್ವದಲ್ಲಿ ರಾಹುಲ್ ಗಾಂಧಿ ಜನ್ಮ ದಿನಾಚರಣೆ🌟
ಉಡುಪಿ ಜೂ.20

ಸಾಮಾಜಿಕ ನ್ಯಾಯದ ಪರ ಹೋರಾಡುವ ಹಾಗೂ ಜನರ ನೋವಿಗೆ ಸ್ಪಂದಿಸುವ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರಾದ ಶ್ರೀ ರಾಹುಲ್ ಗಾಂಧಿ ಅವರ ಜನ್ಮ ದಿನದ ಅಂಗವಾಗಿ, ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಜೂನ್ 19 ರಂದು ಉಡುಪಿಯ ಕಾಂಗ್ರೆಸ್ ಭವನದಲ್ಲಿ ಅತ್ಯಂತ ಅರ್ಥಪೂರ್ಣ ಮತ್ತು ಜನಪರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ರಾಹುಲ್ ಗಾಂಧಿಯವರ ಹುಟ್ಟು ಹಬ್ಬವನ್ನು ಕೇವಲ ಆಚರಣೆಗೆ ಸೀಮಿತ ಗೊಳಿಸದೆ, ಸಮಾಜದ ಅಶಕ್ತರಿಗೆ ನೆರವಾಗುವ ಮೂಲಕ ಅರ್ಥ ಪೂರ್ಣವಾಗಿ ಆಚರಿಸುವುದರೊಂದಿಗೆ ನಾಯಕರಿಗೆ ಜನ್ಮ ದಿನದ ಶುಭಾಶಯಗಳನ್ನು ಅತ್ಯಂತ ಹಾರ್ದಿಕವಾಗಿ ಕೋರಲಾಯಿತು.

ಕೇವಲ ಚುನಾವಣೆ ಅಥವಾ ಮತದಾನದ ಸಂದರ್ಭದಲ್ಲಿ ಮಾತ್ರವಲ್ಲದೆ, ಇಂತಹ ವಿಶೇಷ ದಿನಗಳಲ್ಲೂ ಸಮಾಜದ ಹಿಂದುಳಿದ ಹಾಗೂ ಅಶಕ್ತ ವರ್ಗದವರನ್ನು ನೆನಪಿಸಿ ಕೊಂಡು ಅವರಿಗೆ ಸಹಾಯ ಹಸ್ತ ನೀಡಿ, ನೆರವಾಗುವಲ್ಲಿ ಯಶಸ್ವಿ ಕಂಡಿರುವ ಉಡುಪಿ ಬ್ಲಾಕ್ ಕಾಂಗ್ರೆಸ್‌ನ ಈ ಅಪೂರ್ವ ಕಾರ್ಯ ವೈಖರಿಗೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

ಈ ವಿಶೇಷ ಚೇತನರಿಗೆ ಸಹಾಯಕ ಸಾಧನಗಳು ಹಾಗೂ ಪೌಷ್ಟಿಕ ಆಹಾರ ಕಿಟ್ ವಿತರಣಾ ಕಾರ್ಯಕ್ರಮವನ್ನು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರ ನೇತೃತ್ವದಲ್ಲಿ ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಆರಂಭದಲ್ಲಿ ಸತೀಶ್ ಕೊಡವೂರು ಅವರು ಎಲ್ಲರನ್ನೂ ಹಾರ್ದಿಕವಾಗಿ ಸ್ವಾಗತಿಸಿದರು. ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಅವರು ಜಂಟಿಯಾಗಿ ದೀಪ ಬೆಳಗಿಸಿ ಈ ಜನಪರ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.

🔹 75 ಮಂದಿ ವಿಶೇಷ ಚೇತನರಿಗೆ ವಿವಿಧ ಸವಲತ್ತುಗಳ ವಿತರಣೆ:-
ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಅವರ ನೇತೃತ್ವ ಹಾಗೂ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಒಟ್ಟು 75 ಮಂದಿ ಅರ್ಹ ವಿಶೇಷ ಚೇತನರ (ವಿಕಲ ಚೇತನರ) ಆರೋಗ್ಯ ರಕ್ಷಣೆಗಾಗಿ ಪೌಷ್ಟಿಕ ಆಹಾರದ ಕಿಟ್‌ಗಳು ಹಾಗೂ ಅವರ ದೈನಂದಿನ ಜೀವನಕ್ಕೆ ಅನುಕೂಲವಾಗುವ ಕೆಳಗಿನ ಸಹಾಯಕ ಸಾಧನಗಳನ್ನು ಅತ್ಯಂತ ವ್ಯವಸ್ಥಿತವಾಗಿ ಉಚಿತವಾಗಿ ವಿತರಿಸಲಾಯಿತು.

🦻ಶ್ರವಣ ಸಾಧನಗಳು (Hearing Aid)
♿ ಕಮೋಡ್ ವೀಲ್ ಚೇರ್‌ಗಳು (Commode Wheel Chair)
🛏️ ವಾಟರ್ ಬೆಡ್‌ಗಳು (Water Bed)
🚶♂️ ವಾಕರ್‌ಗಳು (Walker)

🦯 ವಾಕಿಂಗ್ ಸ್ಟಿಕ್‌ಗಳು (Walking Stick) ಹಾಗೂ ಕ್ರಚ್ಸ್‌ಗಳು (Crutches)
🔹ರಾಹುಲ್ ಗಾಂಧಿ ದೇಶದ ಭವಿಷ್ಯದ ನಾಯಕ:-
ಅಶೋಕ್ ಕುಮಾರ್ ಕೊಡವೂರುಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಮುಖವಾಗಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅವರು, “ರಾಹುಲ್ ಗಾಂಧಿಯವರು ದೇಶದ ಭವಿಷ್ಯದ ನಾಯಕರಾಗಿದ್ದಾರೆ.

ಅವರು ಎಷ್ಟೇ ಟೀಕೆಗಳನ್ನು ಎದುರಿಸಿದರೂ ಧೃತಿಗೆಡದೆ ಸಾಮಾಜಿಕ ನ್ಯಾಯದ ಪರವಾಗಿ ಧ್ವನಿ ಎತ್ತುತ್ತಿದ್ದಾರೆ. ವಿರೋಧ ಪಕ್ಷದವರಾದ ಬಿಜೆಪಿ ಇತ್ಯಾದಿ ನಾಯಕರು ಕೋಟ್ಯಂತರ ರೂಪಾಯಿ ಖರ್ಚು ಮಾಡಿ, ಸಾವಿರಾರು ಯುವಕರನ್ನು ಕೆಲಸಕ್ಕೆ ಬಳಸಿಕೊಂಡು ರಾಹುಲ್ ಗಾಂಧಿ ಅವರ ಬಗ್ಗೆ ಜನರ ಅಭಿಪ್ರಾಯವನ್ನು ಕೆಡಿಸತಕ್ಕಂತ, ಅವರನ್ನು ಒಬ್ಬ ‘ಪಪ್ಪು’ ಅಂತ ಮಾಡಲಿಕ್ಕೆ ನಿರಂತರವಾಗಿ ಅಪಪ್ರಚಾರದ ಕುಟಿಲ ನೀತಿ ಹೆಣೆದರೂ, ಅವರು ಯಾವುದಕ್ಕೂ ಹೆದರದೆ, ಧೃತಿಗೆಡದೆ ಎಲ್ಲವನ್ನೂ ಅತ್ಯಂತ ಸಮರ್ಥವಾಗಿ ಎದುರಿಸಿ ನಿಂತಿದ್ದಾರೆ.
ಅವರ ಬಾಲ್ಯ ಅತ್ಯಂತ ಕಷ್ಟದ್ದಾಗಿತ್ತು. ಚಿಕ್ಕ ವಯಸ್ಸಿನಲ್ಲೇ ತನ್ನ ಪ್ರೀತಿಯ ಅಜ್ಜಿ ಇಂದಿರಾ ಗಾಂಧಿ ಹಾಗೂ ತರುವಾಯ ಅತ್ಯಂತ ಪ್ರೀತಿಯ ತಂದೆ ರಾಜೀವ್ ಗಾಂಧಿ ಅವರನ್ನು ವಿದ್ವಂಸಕ ಕೃತ್ಯಗಳಿಂದ ಕಳೆದುಕೊಂಡ ದುಃಖದಲ್ಲೂ, ಇಡೀ ದೇಶದಲ್ಲಿ ಅಲ್ಲೋಲಕ ಲ್ಲೋಲ ಉಂಟಾಗಿದ್ದ ವಾತಾವರಣವನ್ನು ಕಣ್ಣಾರೆ ಕಂಡು ಅನುಭವಿಸಿ ದೇಶ ಸೇವೆಗೆ ನಿಂತ ಹಾದಿ ಅನನ್ಯವಾದದ್ದು. ಮಹಾತ್ಮಾ ಗಾಂಧೀಜಿಯವರು ಈ ದೇಶಕ್ಕೆ ಬಂದಾಗ ಹೇಗೆ ಮೂಲೆ ಮೂಲೆಗೆ ಸಂಚಾರ ಮಾಡಿ ಜನರ ಕಷ್ಟ ಸುಖ ಏನಂತ ಅರಿತು ರಾಜಕೀಯದ ಒಂದು ನಾಣ್ಯವನ್ನು ಉರುಳಿಸಿದ್ದರೋ.

ಅವರ ನಂತರ ದೇಶದಾದ್ಯಂತ ಸುಮಾರು 4,000 ಕಿಲೋ ಮೀಟರ್‌ಗಿಂತಲೂ ಹೆಚ್ಚು ಪಾದಯಾತ್ರೆ (ಭಾರತ್ ಜೋಡೋ ಯಾತ್ರೆ) ನಡೆಸಿ, ಇಡೀ ರಾಷ್ಟ್ರಕ್ಕೆ ಪ್ರಯಾಣ ಮಾಡಿ ಬೇರೆ ಬೇರೆ ವಿಧ ವಿಧದ ಸಂಸ್ಕೃತಿಯ, ಬೇರೆ ಬೇರೆ ಭಾಷೆಯ ಹಾಗೂ ಬೇರೆ ಬೇರೆ ವಯೋ ಮಾನದ ಜನರ ಕಷ್ಟಗಳನ್ನು ಪ್ರತ್ಯಕ್ಷವಾಗಿ ಭೇಟಿಯಾಗಿ ಆಲಿಸಿದ ಏಕೈಕ ಯುವ ನಾಯಕ ಸನ್ಮಾನ್ಯ ರಾಹುಲ್ ಗಾಂಧಿ. ಇಡೀ ರಾಷ್ಟ್ರದಲ್ಲಿ ಎಲ್ಲಿಯಾದರೂ ಒಂದು ಪೈಸೆ ಖರ್ಚು ಮಾಡದೆ ಜನ ಸ್ವಯಂವಾಗಿ ಹೊಗಳ ತಕ್ಕಂತ ವ್ಯಕ್ತಿ ಇದ್ದರೆ ಅದು ರಾಹುಲ್ ಗಾಂಧಿ ಮಾತ್ರ. ಇದು ಅವರ ಕಠಿಣ ಪರಿಶ್ರಮ.
ಇತ್ತೀಚಿನ ನೀಟ್ (NEET) ಪರೀಕ್ಷೆಯ ಭ್ರಷ್ಟಾಚಾರದ ಕುರಿತು, ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಹಾಳಾಗುತ್ತಿರುವ ಮತ್ತು ಬಡವರ ಮಕ್ಕಳ ಭವಿಷ್ಯವನ್ನು ಹಾಳು ಮಾಡತಕ್ಕಂತ ದಂಧೆಯ ವಿರುದ್ಧ ಅವರು ಯುವ ಜನರ ಧ್ವನಿಯಾಗಿ ಸಂಸತ್ತು ಮತ್ತು ಹೊರಗೆ ಹೋರಾಡುತ್ತಿದ್ದಾರೆ.

ಇಂತಹ ಮಾನವೀಯ ಹೃದಯದ ನಾಯಕರ ಹುಟ್ಟು ಹಬ್ಬವನ್ನು ಕೇವಲ ಕೇಕ್ ಕತ್ತರಿಸುವುದಕ್ಕೆ ಸೀಮಿತ ಮಾಡದೆ, ವಿಶೇಷ ಚೇತನರಿಗೆ ನೆರವಾಗುವ ಮೂಲಕ ಅರ್ಥ ಪೂರ್ಣವಾಗಿ ಆಚರಿಸುತ್ತಿರುವುದು ಅತ್ಯಂತ ಶ್ಲಾಘನೀಯ” ಎಂದರು.
🔹ಬಡವರ ಅಭಿವೃದ್ಧಿಯೇ ಕಾಂಗ್ರೆಸ್ ಧ್ಯೇಯ:-
ಪ್ರಸಾದ್ ರಾಜ್ ಕಾಂಚನ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಅವರು, “ದೇಶದ ಪ್ರಗತಿಗೆ ಕಾಂಗ್ರೆಸ್ ಪಕ್ಷದ ಕೊಡುಗೆ ಹಿರಿದಾಗಿದೆ. ನಮಗೆ ಸ್ವಾತಂತ್ರ್ಯ ಸಿಗುವಾಗ ದೇಶದಲ್ಲಿ ಕೇವಲ 3% ಜನರಿಗೆ ಮಾತ್ರ ವಿದ್ಯಾಭ್ಯಾಸ ಇತ್ತು, ಇನ್ನುಳಿದ 97% ಜನರಿಗೆ ಏನು ಎಜುಕೇಶನ್ ಇರಲಿಲ್ಲ. ಭಾರತದಲ್ಲಿ ಯಾವುದೇ ಒಂದು ಸೂಜಿ, ಗುಂಡು ಸೂಜಿ ಆಗುವಂತ ಕಾರ್ಖಾನೆ ಕೂಡ ಇರಲಿಲ್ಲ.

ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ದೂರದೃಷ್ಟಿಯಲ್ಲಿ ಒಂದು ದೊಡ್ಡ ಫೌಂಡೇಶನ್ ಹಾಕಿ ಬಲವಾದ ಅಡಿಪಾಯ ಹಾಕಿದ್ದರಿಂದಲೇ ಇಂದು ಭಾರತ ದೇಶ ಪ್ರಪಂಚದಲ್ಲಿ ಒಂದು ಉನ್ನತ ಶ್ರೇಣಿಯಲ್ಲಿ ತಲುಪಲು ಕಾರಣ.
ಇದಕ್ಕೆಲ್ಲ ಮುಖ್ಯ ಕಾರಣ ದೂರ ದೃಷ್ಟಿಯಲ್ಲಿ ದೇಶದ ಆಡಳಿತವನ್ನು ಮಾಡಿದ ಕಾಂಗ್ರೆಸ್ ಪಕ್ಷದ ಪ್ರಧಾನಿಗಳು. ಅವರದೇ ಕುಟುಂಬದಲ್ಲಿ ಬಂದಂತ ಉನ್ನತ ನಾಯಕ ಇವತ್ತು ರಾಹುಲ್ ಗಾಂಧಿ ಅವರ ಹುಟ್ಟುಹಬ್ಬವನ್ನು ನಾವು ಆಚರಿಸುತ್ತಿದ್ದೇವೆ.

ನನ್ನ ವಿಧಾನ ಸಭಾ ಕ್ಷೇತ್ರದಲ್ಲಿ ಉಡುಪಿ ಬ್ಲಾಕ್ ಮತ್ತು ಬ್ರಹ್ಮಾವರ ಬ್ಲಾಕ್ ಎರಡರಲ್ಲೂ ಅತ್ಯಂತ ಉನ್ನತ ಶ್ರೇಣಿಯಲ್ಲಿ ಯಾರೆಲ್ಲ ಅರ್ಹರಿದ್ದಾರೆ ಅವರಿಗೆ ಸಹಾಯ ಮಾಡಲಾಗುತ್ತಿದೆ. ವಿರೋಧ ಪಕ್ಷಗಳು ಕಳೆದ 12 ವರ್ಷಗಳಿಂದ ಅಧಿಕಾರದಲ್ಲಿದ್ದು, ದೇಶದ ಸೇರಿದ ಎಲ್ಲ ರಾಜ್ಯದಲ್ಲಿ ಐದು ರಾಜ್ಯ ಬಿಟ್ಟು ಅವರೇ ಆಡಳಿತದಲ್ಲಿದ್ದಾರೆ.
ಆದರೆ ಅವರು ಯಾರು ಬಡವರ ಏಳಿಗೆಗೆ ಕೆಲಸ ಮಾಡುತ್ತಿಲ್ಲ. ವಿರೋಧ ಪಕ್ಷದವರು ಕೆಲಸ ಮಾಡುವುದು ಬಡವರ ಹಣ ದೋಚಿ ಶ್ರೀಮಂತರ ಸಾಲ ತೀರಿಸಲಿಕ್ಕೆ ಮತ್ತು ಶ್ರೀಮಂತರ ಹೇಳಿಗೆಗೆ. ಆದರೆ ಕಾಂಗ್ರೆಸ್ ಪಕ್ಷದ ಮುಖ್ಯ ಪ್ರಣಾಳಿಕೆಯೇ ಬಡವರ ಏಳಿಗೆಯಾಗಿದೆ.

ಇಂದು ಇಲ್ಲಿ ವಿತರಿಸಲಾಗುತ್ತಿರುವ ಸವಲತ್ತುಗಳಿಗೆ ಸರ್ಕಾರದ ಯಾವುದೇ ಹಣ ಅಥವಾ ನಿಧಿಯನ್ನು ಬಳಸಿಲ್ಲ, ಬದಲಿಗೆ ನಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಸ್ವಂತ ಶ್ರಮದಿಂದ ಏನು ದುಡಿಯುತ್ತಾರೆ ಆ ಹಣದಿಂದ ಇದನ್ನು ಕೊಡಲಾಗುತ್ತಿದೆ.
ಬಡವರು ಕಾಂಗ್ರೆಸ್ ಪಕ್ಷವನ್ನು ಹಿಡಿಯುವಂತ ಕೆಲಸ ಮಾಡಬೇಕು ಮತ್ತು ಕೈಜೋಡಿಸಿ ಬೆಂಬಲಿಸ ಬೇಕು. ನಾವು ಇನ್ನು ಕಾಂಗ್ರೆಸ್ ಪಕ್ಷವನ್ನು ದೂರ ಇಟ್ಟರೆ ಬಡವರು ಬಡವರಾಗಿಯೇ ಉಳಿಯುತ್ತಾರೆ, ಶ್ರೀಮಂತರು ಶ್ರೀಮಂತರಾಗಿಯೇi ಉಳಿಯುತ್ತಾರೆ.

ರಾಹುಲ್ ಗಾಂಧಿಯವರು ಒಂದು ಪ್ರಜ್ಞಾವಂತ ಮತ್ತು ಇಂಟೆಲಿಜೆಂಟ್ ಲೀಡರ್ ಆಗಿ ನಮ್ಮ ದೇಶದಲ್ಲಿ ಪರಿವರ್ತನೆ ತರುತ್ತಿದ್ದಾರೆ. ಬರುವ ಚುನಾವಣೆಯಲ್ಲಿ ರಾಹುಲ್ ಗಾಂಧಿಯವರನ್ನು ಪ್ರಧಾನಿ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ” ಎಂದು ಕರೆ ನೀಡಿದರು.
🔹ರಾಜಕೀಯ ವಿದ್ಯಮಾನಗಳ ಗಂಭೀರ ಚರ್ಚೆ ಮತ್ತು ಪ್ರಮುಖ ಗಣ್ಯರ ಉಪಸ್ಥಿತಿ:-
ಕಾರ್ಯಕ್ರಮದ ಭಾಷಣದುದ್ದಕ್ಕೂ ದೇಶದ ಪ್ರಸ್ತುತ ರಾಜಕೀಯ ವಿದ್ಯಮಾನಗಳು, ಎನ್‌ಡಿಎ (NDA) ಗ್ರೂಪ್ ಬಲ ಮತ್ತು ಇತ್ತೀಚಿನ ಸಭೆಗಳಲ್ಲಿ ಅಖಿಲೇಶ್ ಯಾದವ್, ಮಮತಾ ಬ್ಯಾನರ್ಜಿ ಹಾಗೂ ಡಿಎಂಕೆ ನಾಯಕರೊಂದಿಗೆ ನಡೆದ ಚರ್ಚೆಗಳು, ರಾಜ್ಯಗಳನ್ನು ಕುಟಿಲ ನೀತಿಯಲ್ಲಿ ವಿಭಾಗ ಮಾಡುತ್ತಿರುವ ವಿರೋಧ ಪಕ್ಷದ ಧೋರಣೆ ಹಾಗೂ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಬೇಕಾದರೆ ನಾವೆಲ್ಲರೂ ಒಗ್ಗಟ್ಟಾಗದಿದ್ದರೆ ಮುಂದಿನ ಸಭೆಯಲ್ಲಿ ಮಾತನಾಡುವ ಹಕ್ಕನ್ನು ಕಳೆದು ಕೊಳ್ಳುತ್ತೇವೆ ಎನ್ನುವ ಗಂಭೀರ ವಿಚಾರಗಳನ್ನು ಪ್ರಸ್ತಾಪಿಸಲಾಯಿತು.

ಈ ಮಹತ್ವದ ಕಾರ್ಯಕ್ರಮದ ವೇದಿಕೆಯಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಎಂ.ಎ ಗಫೂರ್, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಹರಿಪ್ರಸಾದ್ ರೈ, ಪ್ರಖ್ಯಾತ್ ಶೆಟ್ಟಿ, ಕೇಶವ ಕೋಟ್ಯಾನ್, ನರಸಿಂಹಮೂರ್ತಿ, ಸದಾನಂದ ಕಾಂಚನ್, ಹಬೀಬ್ ಅಲಿ, ಕುಶಾಲ್ ಶೆಟ್ಟಿ, ಮಹಾಬಲ ಕುಂದರ್, ಪ್ರಶಾಂತ್ ಜತ್ತನ್ನ, ಜ್ಯೋತಿ ಹೆಬ್ಬಾರ್ ಸೇರಿದಂತೆ ಉಡುಪಿ ಬ್ಲಾಕ್ ಕಾಂಗ್ರೆಸ್‌ನ ಹಲವಾರು ಪ್ರಮುಖ ಮುಖಂಡರು, ವಿವಿಧ ಪದಾಧಿಕಾರಿಗಳು ಮತ್ತು ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.
ವರದಿ:ಆರತಿ.ಗಿಳಿಯಾರು.ಉಡುಪಿ

