“ವಿಶ್ವ ಯೋಗ ದಿನ”…..

ಇಂದು ವಿಶ್ವದೆಲ್ಲಡೆ ಯೋಗ ದಿನ
ಋಷಿ ಪತಂಜಲಿ ನೀಡಿರುವ ಅಮೂಲ್ಯ ಜ್ಞಾನ
ಯೋಗ ಮಾಡಿರಿ ತಪ್ಪದೇ ಪ್ರತಿದಿನ
ಸೀಮಿತವಾಗದಿರಲಿ ಯೋಗ ಕೇವಲ ಈ
ದಿನನೆನಪಿರಲಿ ನಾಣ್ಣುಡಿ ಆರೋಗ್ಯವೇ ಭಾಗ್ಯ
ರೋಗದಿ ದೂರವಿರಲು ಯೋಗವೇ ಸೌಭಾಗ್ಯ
ದೇಹಕ್ಕೆ ಯೋಗವಿರದಿದ್ದರೆ ಬದುಕು
ದೌರ್ಭಾಗ್ಯ
ಯೋಗದಿಂದ ಯೋಗಿಯಾಗಿ ಸಮಾಜಕ್ಕಾಗಿ
ಯೋಗ್ಯ
ವಿಶ್ವ ಯೋಗ ದಿನ ಜೂನ್ ಇಪ್ಪತ್ತೊಂದು
ಬೇಕಾಗಿದೆ ಯೋಗವು ಸದೃಢ ದೇಹಕ್ಕಿಂದು
ದೇಹದ ಕೊಬ್ಬು ಕರಗಿಸಲು ಯೋಗ ಸದಾ
ಮುಂದು
ಭಾರತೀಯ ದಿವ್ಯ ಯೋಗಪಟುಗಳಿಗೆ
ನಮಸ್ಕಾರವಿಂದು
ದಿನಕ್ಕೊಮ್ಮೆ ನಿಗದಿತ ಸಮಯಕ್ಕಿರಲಿ ಯೋಗ
ದೂರ ಸರಿಯುವುದು ಬರುವ ರೋಗ
ನಿಲ್ಲಲಿ ಜಂಕ್ ಫುಡ್ ಗಳನ್ನ ತಿನ್ನುವಲ್ಲಿ ವೇಗ
ಯೋಗವು ಉತ್ತಮ ಆರೋಗ್ಯದ ಒಂದು
ಭಾಗ
ಬೆಳಗಿನ ಜಾವಕ್ಕಿರಲಿ ಸೂರ್ಯ ನಮಸ್ಕಾರ
ಅನುಲೋಮ ವಿಲೋಮ ದೇಹಕ್ಕೆ
ಉಪಯೋಗಕರ
ಪ್ರಾಮಾಣಿಕ ಯೋಗದಿ ಜೀವನ ಆರೋಗ್ಯಕರ
ವಸುದೈವ ಕುಟುಂಬಕಂ ಎನ್ನುವ ಸಂದೇಶ
ಸಾರ
ಶ್ರೀ ಮುತ್ತು ಯ.ವಡ್ಡರ (ಶಿಕ್ಷಕರು) HPS
ಹಿರೇಮಳಗಾವಿ 9845568484

