🚨🔥ಮಹಾ ಬ್ರೇಕಿಂಗ್ ನ್ಯೂಸ್🔥🚨 🛑 ಸತ್ಯದ ಸಮರಕ್ಕೆ ಬೆದರಿದ ‘ನಕಲಿ ಟ್ರ್ಯಾಪ್’ ವೀರ ಮಾಜಿ ಉಡುಪಿ ಲೋಕಾಯುಕ್ತ ಪ್ರಭಾರ DySP ಮಂಜುನಾಥ್! ‘ರಾಮನಗರ ನ್ಯೂಸ್’ ವರದಿಗೆ ಹೆದರಿ ಸೋತು, ಶಸ್ತ್ರತ್ಯಾಗ ಮಾಡಿ – ರಾಜೀಗಾಗಿ ಮಂಡಿಯೂರಿದ ಹೇಡಿಯ ನಡೆ!!💥

ಉಡುಪಿ/ರಾಮನಗರ ಜೂ.20

ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮ ರಂಗದ ಸತ್ಯದ ಧ್ವನಿಯನ್ನು ಹತ್ತಿಕ್ಕಲು ಮತ್ತು ತನ್ನ ಕರಾಳ ಮುಖವಾಡವನ್ನು ಮುಚ್ಚಿಡಲು ಹೊರಟ ಅಧಿಕಾರಶಾಹಿಗೆ ಕೊನೆಗೂ ಕಾನೂನು ಕಣದಲ್ಲಿ ತೀವ್ರ ಮುಖಭಂಗವಾಗಿದೆ! ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನ ಗಂಗೊಳ್ಳಿ ಗ್ರಾಮ ಪಂಚಾಯತ್ ಪಿಡಿಓ (PDO) ಹೆಚ್. ಉಮಾಶಂಕರ್ ಇವರ ವಿರುದ್ಧ ನಡೆಸಲಾದ ನಕಲಿ ಲೋಕಾಯುಕ್ತ ಟ್ರ್ಯಾಪ್ ಪ್ರಕರಣ ಹಾಗೂ ಅದರಲ್ಲಿ ಅಡಗಿದ್ದ ಅಪಾರ ಹಣದ ಬೇಡಿಕೆಯ ಮಹಾ ಹಗರಣವನ್ನು ದಾಖಲೆ ಸಮೇತ ಎಳೆಎಳೆಯಾಗಿ ಬಿಚ್ಚಿಟ್ಟಿದ್ದ ಮಾಧ್ಯಮಗಳ ಧೀರ ಹೋರಾಟಕ್ಕೆ ಕೊನೆಗೂ ಜಯ ಸಿಗುವ ಕಾಲ ಹತ್ತಿರ ಬಂದಿದೆ. ಸತ್ಯದ ತನಿಖಾ ವರದಿಗಳಿಂದ ಹತಾಶರಾಗಿ ಮಾಧ್ಯಮಗಳ ವಿರುದ್ಧ ದರ್ಪದಿಂದ ಕಾನೂನು ಸಮರ ಸಾರಿದ್ದ ಹಿಂದಿನ ಉಡುಪಿ ಲೋಕಾಯುಕ್ತ ಪ್ರಭಾರ ಡಿವೈಎಸ್ಪಿ ಮಂಜುನಾಥ್, ಈಗ ಕಾನೂನು ಕಣದಲ್ಲಿ ತಾವೇ ಹೆಣೆದ ಜಾಲದಲ್ಲಿ ಸಿಲುಕಿ, ಯುದ್ಧದಲ್ಲಿ ಸೋತು ಶಸ್ತ್ರತ್ಯಾಗ ಮಾಡಿ ನ್ಯಾಯಾಲಯದ ಮುಂದೆ ರಾಜಿ ಸಂಧಾನಕ್ಕೆ ಮುಖ ಮಾಡಿರುವುದು ಅತ್ಯಂತ ನಾಚಿಕೆಗೇಡಿನ ವಿಚಾರವಾಗಿದೆ!

ನಕಲಿ ಟ್ರ್ಯಾಪ್ ಮತ್ತು ಅಪಾರ ಹಣದ ಬೇಡಿಕೆಯ ಕರಾಳ ಮುಖ ಬಯಲು ಮಾಡಿದ್ದ ಉಪ ಸಂಪಾದಕಿ ಆರತಿ ಗಿಳಿಯಾರು…!

ಗಂಗೊಳ್ಳಿ ಗ್ರಾಮ ಪಂಚಾಯತ್ ಪಿಡಿಓ ಹೆಚ್. ಉಮಾಶಂಕರ್ ಇವರನ್ನು ಸಂಚು ರೂಪಿಸಿ ಸಿಲುಕಿಸಲು ನಡೆದ ನಕಲಿ ಲೋಕಾಯುಕ್ತ ಕಾರ್ಯಾಚರಣೆಯ ಹಿಂದೆ, ಅಂದಿನ ಉಡುಪಿ ಲೋಕಾಯುಕ್ತ ಪ್ರಭಾರ ಡಿವೈಎಸ್ಪಿ ಮಂಜುನಾಥ್ ಅಪಾರ ಪ್ರಮಾಣದ ಲಂಚದ ಹಣದ ಬೇಡಿಕೆ ಇಟ್ಟಿದ್ದ ಆಘಾತಕಾರಿ ಮತ್ತು ನೈಜ ಸತ್ಯವನ್ನು ‘ರಾಮನಗರ ನ್ಯೂಸ್’ ದಿನಪತ್ರಿಕೆಯ ಉಪ ಸಂಪಾದಕರಾಗಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ “ಆರತಿ ಗಿಳಿಯಾರು” ಅವರು ಸಾರ್ವಜನಿಕ ಹಿತಾಸಕ್ತಿಯ ಅಡಿಯಲ್ಲಿ, ನಿಖರ ದಾಖಲೆಗಳ ಸಮೇತ ವರದಿ ಮಾಡಿದ್ದರು. ಈ ತನಿಖಾ ವರದಿಯನ್ನು ‘ರಾಮನಗರ ನ್ಯೂಸ್’ ದಿನ ಪತ್ರಿಕೆ ಹಾಗೂ ಇತರ ಪ್ರಮುಖ ದಿನ ಪತ್ರಿಕೆಗಳಲ್ಲಿ ಎಳೆ ಎಳೆಯಾಗಿ ಪ್ರಕಟಿಸಲಾಗಿತ್ತು.

ಈ ನೈಜ ಮತ್ತು ಸ್ಫೋಟಕ ವರದಿಗಳಿಂದ ಇಡೀ ಉಡುಪಿ ಲೋಕಾಯುಕ್ತ ಪೊಲೀಸರು ಹಾಗೂ ಭ್ರಷ್ಟ ಅಧಿಕಾರಿ ವಲಯವೇ ತಲ್ಲಣ ಗೊಂಡು ಹತಾಶೆಯ ಮಡುವಿಗೆ ಬಿದ್ದಿತ್ತು.

ಹತಾಶ ಅಧಿಕಾರಿಗಳ ಬೆದರಿಕೆಯ ಲೀಗಲ್ ನೋಟಿಸ್‌ಗೆ ಪತ್ರಿಕೆಯ ಸಿಂಹ ಸ್ವರೂಪದ ಪ್ರತ್ಯುತ್ತರ…!

ಪತ್ರಿಕೆಯಲ್ಲಿ ಪ್ರಕಟವಾದ ನೈಜ ವರದಿಯಿಂದ ಸಂಪೂರ್ಣವಾಗಿ ಹತಾಶರಾದ ಉಡುಪಿ ಲೋಕಾಯುಕ್ತ ಪೊಲೀಸರು ಮತ್ತು ಹಿಂದಿನ ಪ್ರಭಾರ ಲೋಕಾಯುಕ್ತ ಡಿವೈಎಸ್ಪಿ ಮಂಜುನಾಥ್, ಸತ್ಯವನ್ನು ಹತ್ತಿಕ್ಕಲು ಮತ್ತು ಪತ್ರಿಕೆಯ ಧ್ವನಿಯನ್ನು ಅಡಗಿಸಲು “ಮಾನನಷ್ಟ ಹಾಕುತ್ತೇನೆ” ಎಂದು ತಮ್ಮ ವಕೀಲರ ಮೂಲಕ ‘ರಾಮನಗರ ನ್ಯೂಸ್’ ದಿನ ಪತ್ರಿಕೆಯ ಸಂಪಾದಕರು, ಉಪ ಸಂಪಾದಕರಾದ ಆರತಿ ಗಿಳಿಯಾರು ಹಾಗೂ ಇತರ ಪತ್ರಿಕೆಯವರಿಗೆ ಲೀಗಲ್ ನೋಟಿಸ್ ನೀಡಿದ್ದರು.

ಆದರೆ, ಇದಕ್ಕೆ ಕಿಂಚಿತ್ತೂ ಧೃತಿಗೆಡದ ಸಂಪಾದಕರು ಮತ್ತು ಉಪ ಸಂಪಾದಕರು, ತಮ್ಮ ವಕೀಲರ ಮೂಲಕ ಕಾನೂನಾತ್ಮಕವಾಗಿ ಸಿಡಿಲಂತಹ ತಕ್ಕ ಪ್ರತ್ಯುತ್ತರವನ್ನು ನೀಡಿದ್ದರು.

ಮಂಜುನಾಥ್ ಅವರ ನಡೆ ಸಂಪೂರ್ಣ ಕಾನೂನು ಬಾಹಿರ:-

ಸದರಿ ನಕಲಿ ಲೋಕಾಯುಕ್ತ ಪ್ರಕರಣದ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಜೊತೆಗೆ ಇತರ ಲೋಕಾಯುಕ್ತ ಸಿಬ್ಬಂದಿ ಮತ್ತು ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಆದರೆ, ಅವರೆಲ್ಲರ ಪರವಾಗಿ ಲೋಕಾಯುಕ್ತ ಹಿಂದಿನ ಪ್ರಭಾರ ಡಿವೈಎಸ್ಪಿ ಮಂಜುನಾಥ್ ಅವರೇ ಲೀಗಲ್ ನೋಟಿಸ್ ನೀಡಿರುವುದು ಸಂಪೂರ್ಣ ಕಾನೂನುಬಾಹಿರ ಮತ್ತು ನಿಯಮಬಾಹಿರ ಎಂದು ಪತ್ರಿಕೆಯ ವಕೀಲರ ಮೂಲಕ ಸಮರ್ಪಕ ಪ್ರತ್ಯುತ್ತರ ನೀಡಿ ಮಂಜುನಾಥ್ ಅವರ ಕಾನೂನು ಅಸ್ತ್ರವನ್ನು ಧೂಳೀಪಟ ಮಾಡಲಾಗಿತ್ತು.

ನ್ಯಾಯಾಲಯದಲ್ಲಿ ದಾವೆ ಹೂಡಿದ ಒಂದೇ ತಿಂಗಳಲ್ಲಿ ಮಂಡಿಯೂರಿದ ಅಧಿಕಾರಿ…!

ಲೀಗಲ್ ನೋಟಿಸ್‌ಗೆ ಪತ್ರಿಕೆಯಿಂದ ತಕ್ಕ ಪ್ರತ್ಯುತ್ತರ ಹಾಗೂ ಶಾಸ್ತಿಯಾದ ನಂತರ ಮತ್ತಷ್ಟು ಹತಾಶೆ ಗೊಂಡ ಹಿಂದಿನ ಪ್ರಭಾರ ಲೋಕಾಯುಕ್ತ ಡಿವೈಎಸ್ಪಿ ಮಂಜುನಾಥ್, ಉಡುಪಿಯ ಪ್ರಿನ್ಸಿಪಾಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ (JMFC) ನ್ಯಾಯಾಲಯ ಉಡುಪಿ ಇಲ್ಲಿ ಕಳೆದ ಏಪ್ರಿಲ್ 2026 ರಂದು ಪತ್ರಿಕೆಯ ಸಂಪಾದಕರು ಹಾಗೂ ಉಪ ಸಂಪಾದಕರಾದ ಆರತಿ ಗಿಳಿಯಾರು ಇವರನ್ನು ಪ್ರತಿ ವಾದಿಯನ್ನಾಗಿ ಮಾಡಿ ಮೂಲ ದಾವೆಯನ್ನು ಹೂಡಿದ್ದರು.

ಆದರೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮದ ಧೀರ ನಿಲುವಿಗೆ ಮತ್ತು ಕಾನೂನಿನ ಬಲಕ್ಕೆ ಬೆದರಿದ ಈ ಅಧಿಕಾರಿ, ದಾವೆ ಹೂಡಿದ ಕೇವಲ ಒಂದೇ ತಿಂಗಳಿನಲ್ಲಿ ತಾನು ಹೆಣೆದ ಜಾಲದಲ್ಲಿ ತಾನೇ ಸಿಲುಕಿ, ಪ್ರಕರಣವನ್ನು ಹೇಗಾದರೂ ಮಾಡಿ ತಣ್ಣಗಾಗಿಸಲು ಮತ್ತು ರಾಜಿ ಮಾಡಿ ಕೊಳ್ಳುವ ಸಲುವಾಗಿ ನ್ಯಾಯಾಲಯದ “ಮಧ್ಯಸ್ಥಿಕೆ ಕೇಂದ್ರದ (Mediation Centre)” ಮೊರೆ ಹೋಗಿದ್ದಾರೆ!

ಯುದ್ಧದಲ್ಲಿ ಸೋತು:-

ಶಸ್ತ್ರ ತ್ಯಾಗ ಮಾಡಿ ರಾಜಿ ಸಂಧಾನಕ್ಕೆ ಮಂಡಿಯೂರಿ ನಿಂತ ನಾಚಿಕೆಗೇಡಿನ ನಡೆ…!

ಪತ್ರಿಕೆಯು ರಾಜಿ ಪ್ರಸ್ತಾಪ ಮಾಡಿಲ್ಲ:-

ಇಲ್ಲಿ ಅತ್ಯಂತ ಪ್ರಮುಖವಾದ ಸಂಗತಿಯೆಂದರೆ, ಪತ್ರಿಕಾ ಸಂಪಾದಕರು ಮತ್ತು ಪತ್ರಿಕೆಯ ಪ್ರತಿನಿಧಿಗಳು ಮಂಜುನಾಥ್ ಜೊತೆ ರಾಜಿ ಮಾಡಿಕೊಳ್ಳುವಂತೆ ಯಾವುದೇ ರೀತಿಯ ಚರ್ಚೆ ನಡೆಸಿರುವುದಿಲ್ಲ ಮತ್ತು ಯಾವುದೇ ಮನವಿಯನ್ನೂ ಮಾಡಿಲ್ಲ!

ಕೋರ್ಟ್‌ನಿಂದ ಮಧ್ಯಸ್ಥಿಕೆ ನೋಟಿಸ್ ಜಾರಿ:-

ಆದರೂ, ನ್ಯಾಯಾಲಯದ ಮಧ್ಯಸ್ಥಿಕೆ ಕೇಂದ್ರದಿಂದ ಈಗ ಪ್ರತಿವಾದಿ ಸಂಖ್ಯೆ 3 ಆಗಿರುವ ಉಪ ಸಂಪಾದಕಿ ಆರತಿ ಗಿಳಿಯಾರು ಅವರಿಗೆ ನೋಟಿಸ್ ನೀಡಲಾಗಿದ್ದು, ಮುಂಬರುವ “ಜುಲೈ 15, 2026i ರಂದು ಮಧ್ಯಾಹ್ನ 3:00 ಗಂಟೆಗೆ” ಉಡುಪಿಯ ಮಧ್ಯಸ್ಥಿಕೆ ಕೇಂದ್ರದಲ್ಲಿ ಹಾಜರಾಗಲು ಸೂಚಿಸಲಾಗಿದೆ. ದರ್ಪದಿಂದ ದಾವೆ ಹೂಡಿ, ಈಗ ಕಾನೂನು ಕಣದಲ್ಲಿ ಸತ್ಯದ ಎದುರು ನಿಲ್ಲಲಾಗದೆ ಯುದ್ಧದಲ್ಲಿ ಸೋತು ಶಸ್ತ್ರ ತ್ಯಾಗ ಮಾಡಿ, ಮಂಡಿಯೂರಿ ರಾಜಿ ಮಾಡಿಕೊಳ್ಳಲು ಸ್ವತಃ ಡಿವೈಎಸ್ಪಿi ಮಂಜುನಾಥ್ ಅವರೇ ಮುಂದೆ ಬಂದಿರುವುದು ಅವರ ಹೇಡಿತನ ಹಾಗೂ ನಾಚಿಕೆಗೇಡಿನ ತನವನ್ನು ಜಗಜಾಹೀರು ಮಾಡಿದೆ!

ನಾಲ್ಕನೇ ಅಂಗದ ಮಹಾ ಗೆಲುವು:-

ಸತ್ಯದ ನಡೆಗೆ ಯಾವುದೇ ರಾಜಿ ಇಲ್ಲ ಸಂವಿಧಾನ ನಮಗೆ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯ, ಸಾರ್ವಜನಿಕರ ಹಿತಾಸಕ್ತಿ ಮತ್ತು ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಹತ್ತಿಕ್ಕಲು ಹೊರಟ ಅಧಿಕಾರಶಾಹಿಗೆ ಇದು ಸಾರ್ವಜನಿಕರು ಮತ್ತು ಕಾನೂನು ಕಲಿಸಿದ ಐತಿಹಾಸಿಕ ಪಾಠವಾಗಿದೆ. “ನಾವು ಯಾವುದೇ ಕಾರಣಕ್ಕೂ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಮಣಿಯುವುದಿಲ್ಲ, ಅಧಿಕಾರಿಗಳ ದರ್ಪಕ್ಕೆ ಹೆದರಿ ರಾಜಿ ಮಾಡಿಕೊಳ್ಳುವುದೂ ಇಲ್ಲ. ನ್ಯಾಯಾಲಯದಲ್ಲಿ ಈ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಿದ್ದೇವೆ” ಎಂದು ‘ರಾಮನಗರ ನ್ಯೂಸ್’ ಸಂಪಾದಕೀಯ ಮಂಡಳಿ ತನ್ನ ದೃಢ ಸಂಕಲ್ಪವನ್ನು ಪುನರುಚ್ಚರಿಸಿದೆ.

ವರದಿ:ಆರತಿ.ಗಿಳಿಯಾರು.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button