ಬದುಕಿನ ಸಕಲ ತಲ್ಲಣಗಳಿಗೆ ದಿವ್ಯೌಷಧಿ ಶ್ರೀಮದ್ ಭಗವದ್ಗೀತೆ ಅಧ್ಯಯನ – ಪುಷ್ಪಲತಾ ವಿಜಯ್.

ಚಳ್ಳಕೆರೆ ಜೂ.21

ಮಾನವ ಬದುಕಿನ ಸಕಲ ತಲ್ಲಣಗಳಿಗೆ ದಿವ್ಯೌಷಧಿ ಶ್ರೀಮದ್ ಭಗವದ್ಗೀತೆಯ ಅಧ್ಯಯನ ಎಂದು ಚಳ್ಳಕೆರೆಯ ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸದಸ್ಯೆ ಹಾಗೂ ನಿವೃತ್ತ ಶಿಕ್ಷಕಿ ಶ್ರೀಮತಿ ಪುಷ್ಪಲತಾ ವಿಜಯ್ ತಿಳಿಸಿದರು.

ತ್ಯಾಗರಾಜ ನಗರದ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು “ಶ್ರೀಮದ್ ಭಗವದ್ಗೀತೆಯ ಹದಿನೈದನೇ ಅಧ್ಯಾಯ ಪುರುಷೋತ್ತಮ ಯೋಗ” ದ ಮೊದಲ ಶ್ಲೋಕವನ್ನು ಹೇಳಿ ಕೊಟ್ಟು ಅರ್ಥ ವಿವರಣೆ ನೀಡುತ್ತ ಅವರು ಮಾತನಾಡಿದರು.

ಶ್ರೀಮತಿ ಪುಷ್ಪಲತಾ ವಿಜಯ್ ಅವರಿಂದ ಶ್ರೀಮದ್ ಭಗವದ್ಗೀತೆಯ 15ನೇ ಅಧ್ಯಾಯ ಪುರುಷೋತ್ತಮ ಯೋಗದ ಮೊದಲ ಶ್ಲೋಕದ ಅರ್ಥ ವಿವರಣೆ

ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರ ವರೆಗೆ ಪ್ರತಿಯೊಬ್ಬರೂ ಓದಲೇ ಬೇಕಾದ ಪುಸ್ತಕ ಎಂದರೆ ‘ಶ್ರೀಮದ್ ಭಗವದ್ಗೀತೆ’. ಇದು ಮಾನವ ಸ್ತರದ ಎಲ್ಲಾ ವ್ಯಕ್ತಿಗಳಿಗೂ ಸೂಕ್ತ ಮಾರ್ಗದರ್ಶನ ನೀಡುತ್ತದೆ. ಇದು ಸಾರ್ಥಕ ಬದುಕಿಗೆ ದಾರಿದೀಪ ಎಂದು ಭಗವದ್ಗೀತೆಯ ವಿಶೇಷತೆಗಳ ಬಗ್ಗೆ ಅವರು ವಿವರಿಸಿದರು.

ಸತ್ಸಂಗ ಸಭೆಯಲ್ಲಿ ನಂಜಮ್ಮ, ಎಚ್ ಲಕ್ಷ್ಮೀದೇವಮ್ಮ, ಎಂ ಲಕ್ಷ್ಮೀದೇವಮ್ಮ, ಸುವರ್ಣಮ್ಮ, ಅನುಸೂಯ, ರಾಘವೇಂದ್ರ, ಯತೀಶ್ ಎಂ ಸಿದ್ದಾಪುರ, ಗೀತಾ ಪ್ರಕಾಶ್, ಗೀತಾ ಸುಂದರೇಶ್, ಸರಸ್ವತಿ ನಾಗರಾಜ್, ಸರ್ವಮಂಗಳಾ, ಪ್ರೇಮಾ, ಸೌಮ್ಯ, ಸಿರಿಚಂದನ, ಶೋಭಾ, ತಿಪ್ಪಮ್ಮ ಪಾಲ್ಗೊಂಡಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button