ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಸ್ವಾಭಿಮಾನಿ ಸಮಾವೇಶಕ್ಕೆ – ರಾಜಾ ಸುಭಾಶ್ಚಂದ್ರ ನಾಯಕ ಬಳಗದಿಂದ ಬೆಂಬಲ.
ಮಾನ್ವಿ ಅ.05

ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ನಡೆಯುವ ಮುಖ್ಯಮಂತ್ರಿ ಸಿದ್ದರಾಮಯ್ಯರ ಸ್ವಾಭಿಮಾನಿ ಸಮಾವೇಶಕ್ಕೆ ರಾಜಾ ಸುಭಾಶ್ಚಂದ್ರ ನಾಯಕರ ಬಳಗದ ಸಾವಿರಾರು ಜನರ ಸೈನ್ಯವೇ ಮೆರವಣಿಗೆ ನಡೆಸಿತು.

ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಸಚಿವ ಎನ್.ಎಸ್ ಬೋಸರಾಜು ಅವರ ಸೈನ್ಯ ಏನೆಂದು ತೋರಿಸಲು ಕಾರ್ಯಕರ್ತರ ಸಮೂಹವನ್ನೆ ಕಂಡು ವಿರೋಧ ಪಕ್ಷಗಳಿಗೆ ಒಂದು ರೀತಿಯಲ್ಲಿ ಭಯ ಶುರುವಾಗಿದೆ ಎಂದು ಅಲ್ಲಲ್ಲಿ ಗುಸು ಗುಸು ಚರ್ಚೆ ನಡೆಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧ ಪಕ್ಷದವರು ಆರೋಪಿಸುವುದಕ್ಕೆ ಆ ದೇವರ ಆಶೀರ್ವಾದ ದಿಂದ ಪಾರಾಗಿ ಹೊರ ಬರಲಿ ಎಂದು ಸುಭಾಶ್ಚಂದ್ರ ನಾಯಕ ತಿಳಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ