ಶಕೀಲ್ ಬೇಗ್ ಅಭಿಮಾನಿಗಳಿಂದ – ಸ್ವಾಭಿಮಾನಿ ಸಮಾವೇಶಕ್ಕೆ ಬೆಂಬಲ.
ಮಾನ್ವಿ ಅ.05

ಮಾನ್ವಿ ಪಟ್ಟಣದಲ್ಲಿ ನಡೆಯುವ ಮುಖ್ಯಮಂತ್ರಿ ಸಿದ್ದರಾಮಯ್ಯರ ಸ್ವಾಭಿಮಾನಿ ಸಮಾವೇಶಕ್ಕೆ ಪುರಸಭೆ ಮಾಜಿ ಸದಸ್ಯ ಶಕೀಲ್ ಬೇಗ್ ಅಭಿಮಾನಿ ಬಳಗ ದಿಂದ ಮೆರವಣಿಗೆ ನಡೆಸಿತು.

ರಾಯಚೂರು ಜಿಲ್ಲೆಯ ಪ್ರಭಾವಿ ನಾಯಕ ಸಚಿವ ಎನ್.ಎಸ್ ಬೋಸರಾಜು ಹಾಗೂ ಪುತ್ರ ರವಿ ಭೋಸರಾಜು ಶಾಸಕ ಹಂಪಯ್ಯ ನಾಯಕರಿಗೆ ಜನ ಬೆಂಬಲ ತೋರಿಸುವ ಸಲುವಾಗಿ ಡಿಜೆ ಮೂಲಕ ಆಟೋಗಳ ಸಂಘದವರು ಸಾಥ್ ಕೊಟ್ಟರು.

ಶಕೀಲ್ ಬೇಗ್ ಮಾತನಾಡಿ ನಾವು ಮೊದಲಿನಿಂದಲೂ ಕಾಂಗ್ರೆಸ್ ಬೆಂಬಲಿತರು, ನಮ್ಮ ವಾರ್ಡ್ ನಿಂದ ಸಾವಿರಾರು ಜನರು ತೆರಳುತ್ತ ಅವರಿಗೆ ಬೆಂಬಲ ಸೂಚಿಸುತ್ತೇವೆ ಎಂದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ