ಸಾವಳಗಿ ಶ್ರೀ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವ ೧೬೦ ಮುತ್ತೈದಿಯರ – ಉಡಿ ತುಂಬವ ಕಾರ್ಯಕ್ರಮ.
ಆಲಮೇಲ ಆ.20

ಆಲಮೇಲ ಪಟ್ಟಣದಲ್ಲಿ ಶ್ರಾವಣ ಮಾಸದ ಅಂಗವಾಗಿ ಶ್ರೀ ಸಾವಳಗಿ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವ ಶ್ರೀ ಗುಡ್ಡಾಪುರದ ಮಹಾ ಶಿವಶರಣೆ ಶ್ರೀ ದಾನಮ್ಮ ದೇವಿಯ ಪುರಾಣವನ್ನು ಆಲಮೇಲದ ವಿರಕ್ತ ಮಠದ ಶ್ರೀ ಮ.ನಿ.ಪ್ರ ಮಲ್ಲಿಭೋಮ್ಮ ಸ್ವಾಮೀಜಿ ಇವರ ಅಮೃತವಾಣಿ ಯಿಂದ ಹಾಗು ಈರಣ್ಣ ಕಲಶಟ್ಟಿ ತಂಡದವರಿಂದ ಸಂಗೀತ ಸೇವೆ ಸಲ್ಲಿಸಿದರು ೧೧ ದಿನಗಳ ವರೆಗೆ ಶಿವಲಿಂಗೇಶ್ವರ ಮಠದ ಪ್ರಧಾನ ಆರ್ಚಕರಾದ ಶ್ರೀ . ಚೆನ್ನಯ್ಯ ಸ್ವಾಮೀ ಸಾರಂಗಮಠ ಇವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಸಾಗಿ ಬಂದವು ಶ್ರೀ ದಾನಮ್ಮ ದೇವಿಯ ಪುರಾಣವನ್ನು ದಿನಾಂಕ 21.8.2025 ವರೆಗೆ ನಡೆಯುವುದು ಇಂದು ಶ್ರೀ ಗುಡ್ಡಾಪುರದ ದಾನಮ್ಮ ದೇವಿ ಪುರಾಣದ ನಿಮಿತ್ತವಾಗಿ ೧೬೦ ಮುತ್ತೈದೆಯರಿಗೆ ಉಡಿ ತುಂಬುವೆ ಕಾರ್ಯಕ್ರಮದಲ್ಲಿ ಶಿವ ಭಕ್ತರಾದ ಶೋಭಾ ರಸ್ತಾಪುರಮಠ ಗೀತಾ ಒಣಕುದರಿ ಭಾಗ್ಯ ಜ್ಯೋತಿ ಸಾರಂಗಮಠ ಅಕ್ಕಮಹಾದೇವಿ ಕುರಬತಹಳ್ಳಿ ಈರಮ್ಮ ಮಠ ಶೋಭಾ ಅಫಜಲಪುರ ಕಾರ್ಯಕ್ರಮವನ್ನು ಜಿಟಿ ಜಿಟಿ ಮಳೆರಾಯ ಸುರಿಯುತ್ತಿದ್ದರು ಸಂಭ್ರಮ ದಿಂದ ನೆರವೇರಿಸಿದರು.

ಶಿವ ಭಕ್ತರಾದ ಲಕ್ಮಣ ದತ್ತು ಆಲೋಣಿ ಪರಿವಾರ ಮುತ್ತೈದಿ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ದಂಡಿ ಹುಮಾಲೆ ಉಡಿಕಿ ಸಾಮಗ್ರಿಗಳು ಕರಿಗಡುಬ ತುಪ್ಪ ಹಾಗು ನಾನ ತರಹದ ಪ್ರಸಾದ ವ್ಯವಸ್ಥೆ ಏರ್ಪಡಿಸಿದರು. ಸರ್ವರ ಭಕ್ತರಾದ ಲಕ್ಷ್ಮಿಬಾಯಿ ಕುಂಬಾರ ಸುಮಿತ್ರಾ ಕುಂಬಾರ ಶ್ರೀದೇವಿ ಹಳಿಮನಿ ಸುವರ್ಣ ಮಠ ಸೇವೆ ಸಲ್ಲಿಸಿದ್ದರು. ಕಾರ್ಯಕ್ರಮದಲ್ಲಿ ಗುರು ಕುಂಬಾರ ವಿದ್ಯಾಧರ ರಸ್ತಾಪುರಮಠ ಗೋಲ್ಲಾಳ ಉಪ್ಪಿನ ದತ್ತು ಆಲೋಣಿ ಆರ್ಚಕರಾದ ಚೆನ್ನಯ್ಯ ಸಾರಂಗ ಮಠ ಲಕ್ಮಣ ಆಲೋಣಿ ಶಂಕರ ಹಳಿಮನಿ ರಮೇಶ ಅಫಜಲಪುರ ಸಾಗರ ಆಲೋಣಿ ಸೋಮಶೇಖರ ಮಠ ಪ.ಪಂ ಸದಸ್ಯರಾದ ಚಂದು ಹಳಿಮನಿ ಗುಣಾದಾರ ಒಣಕುದರಿ ಅಂಭೋಜಿ ಆಲೋಣಿ ಗುರು ಕಲಶೆಟ್ಟಿ ಮಾಹಾಂತ ಹಳಿಮನಿ ಹಂಪಣ್ಣ ಹಡಪದ ಆನೀಲ ಶಿಂದೆ ಸಂತೋಷ ಆಮರಗೊಂಡ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ.ಹಿರೇಮಠ.ಅಲಮೇಲ