ಕನ್ನಡ ನಾಡು ನುಡಿಗೆ ಸಜ್ಜಾಗಿ.
ದೇವರ ಹಿಪ್ಪರಗಿ ಅ.10

೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಪಟ್ಟಣಕ್ಕೆ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆಗೆ ಅದ್ದೂರಿಯಿಂದ ಸ್ವಾಗತಿಸಿದರು. ಪಟ್ಟಣದ ಅಂಬೇಡ್ಕರ್ ವೃತ್ತಕ್ಕೆ ಬುಧವಾರ ಸಂಜೆ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆಗೆ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತಿ ಹಾಗೂ ಪಟ್ಟಣ ಪಂಚಾಯತಿ, ಕನ್ನಡ ಸಾಹಿತ್ಯ ಪರಿಷತ್ತ ಜಯ ಕರ್ನಾಟಕ ದಲಿತ ಸಂಘಟನೆ, ಕರ್ನಾಟಕ ರಕ್ಷಣೆ ವೇದಿಕೆ, ಶರಣ ಸಾಹಿತ್ಯ ಪರಿಷತ್ತ ಶಿಕ್ಷಕರು ಸಂಘ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ರಥ ಯಾತ್ರೆಯನ್ನ ಸ್ವಾಗತಿಸಿ ಭುವನೇಶ್ವರಿ ಪ್ರತಿಮೆಗೆ ಪೂಜೆ ಸಲ್ಲಿಸಿದ್ದರು, ಕನ್ನಡ ಸಾಹಿತ್ಯ ಪರಿಷತ್ತ ಜಿಲ್ಲಾಧ್ಯಕ್ಷರಾದ ಹಾಸಿಂಪೀರ ವಾಲಿಕಾರ ಮಾತನಾಡಿ ಕನ್ನಡ ನೆಲ ಜಲ ನಾಡು ನುಡಿ ಭಾಷೆ ಜಾಗೃತಿಗಾಗಿ ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜನರಲ್ಲಿ ಕನ್ನಡ ಅಭಿಮಾನಿವನ್ನು ಮೂಡಿಸುವ ಅಂಗವಾಗಿ ರಾಜ್ಯಧ್ಯಂತ ಕನ್ನಡ ಜ್ಯೋತಿ ರಥಯಾತ್ರೆ ಸಂಚರಿಸುತ್ತದೆ ಎಂದು ಹೇಳಿದರು, ತಾಲ್ಲೂಕು ತಹಶಿಲ್ದಾರರಾದ ಪ್ರಕಾಶ ಸಿಂದಗಿ, ಅನುಗ್ರಹ ಕಣ್ಣಿನ ಆಸ್ಪತ್ರೆಯ ನೇತ್ರತಜ್ಞರಾದ ಪ್ರಭುಗೌಡ ಲಿಂಗದಳ್ಳಿ, ಚಬನೂರ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷರಾದ ಜಿ.ಬಿ ಬಿರಾದಾರ, ಸಿಂದಗಿ ತಾಲ್ಲೂಕಿನ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಅಶೋಕ ತೆಲ್ಲೊರ ಮಾತನಾಡಿದ್ದರು,

ಕನ್ನಡ ರಥ ಮೊಹರೆ ಹಣಮಂತ್ರಾಯ ವೃತ್ತ ದವರಿಗೆ ಮೆರವಣಿಗೆ ಮೂಲಕ ಬಿಳ್ಳೋಡಲಾಯಿತು, ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ ಕಾರ್ಯ ನಿರ್ವಾಹಕರಾದ ಭಾರತಿ ಚೆಲವಯ್ಯ,ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಗಳಾದ ಎನ್.ಎಸ್ ಬಾಗಲಕೋಟ, ಸಿಂದಗಿ ತಾಲ್ಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ.ಬಿ ಯಡ್ರಾಮಿ, ನಿವೃತ್ತಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಕೆ ಕುದರಿ ತಾಲ್ಲೂಕು ಶಿಕ್ಷಕರು ಸಂಘದ ಅಧ್ಯಕ್ಷರಾದ ಎ.ಎಚ್ ವಾಲಿಕಾರ ಪಿ.ಜಿ ಹಿರೇಮಠ, ಎಸ್.ಎಸ್ ಸಾತಿಹಾಳ ಸಂಗಪ್ಪ ತಡವಲ್ ಸಂಗನಗೌಡ ಬಿರಾದಾರ, ರೆಹಮಾನ್ ಕಣಿಕಾಲ ರಾಘ ಗುಡಿಮನಿ ಸಿದ್ದು ಮೇಲಿನಮನಿ ಮುರ್ತುಜಾ ತಾಂಬೊಳಿ ಶಿವರಾಜ್ ತಳವಾರ, ಸೇರಿದಂತೆ ವಿವಿಧ ಸಂಘಟನೆಯವರು, ಕನ್ನಡ ಅಭಿಮಾನಿಗಳು, ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ