ರಂಜಿತಾ ಕೊಲೆಗಾರನಿಗೆ ಗಲ್ಲು ಶಿಕ್ಷೆ ನೀಡಬೇಕು – ಡಿ.ಎಸ್.ಎಸ್ ರಾಜ್ಯ ಸಂಚಾಲಕರು ತರೀಕೆರೆ.ಎನ್ ವೆಂಕಟೇಶ್ ಅವರಿಂದ ಆಗ್ರಹ.
ಚಿಕ್ಕಮಗಳೂರು ಮೇ.11

ಶೋಷಿತರ ಆದಿವಾಸಿಗಳ ಪರವಾಗಿ ಧ್ವನಿ ಎತ್ತಿ ಹೋರಾಟ ಮಾಡಿದ ಪತ್ರಕೋದ್ಯಮಿ ವಿದ್ಯಾರ್ಥಿನಿ ರಂಜಿತಾಳನ್ನು ಕೊಲೆ ಮಾಡಿದವರನ್ನು ಗಲ್ಲಿಗೆ ಏರಿಸಬೇಕು ಎಂದು ಮಹಾತ್ಮ ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ತರೀಕೆರೆ ಎನ್ ವೆಂಕಟೇಶ್ ಹೇಳಿದರು.
ಅವರು ಚಿಕ್ಕಮಗಳೂರಿನ ಅಜಾದ್ ಪಾರ್ಕ್ ನಲ್ಲಿ ಏರ್ಪಡಿಸಿದ್ದ ರಂಜಿತಾ ಕೊಲೆ ಖಂಡಿಸಿ ಮತ್ತು ಕೊಡುಗು ಜಿಲ್ಲೆಯಲ್ಲಿ ದಲಿತರ ಆದಿವಾಸಿಗಳ ಶೋಷಣೆ ನಿಲ್ಲಲಿ ಎಂದು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ರಾಜ್ಯದಲ್ಲಿ ಮಹಿಳೆಯರ ಮತ್ತು ಯುವತಿಯರನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗುತ್ತಿದೆ. ರಂಜಿತಾ ರವರ ಕೊಲೆಯನ್ನು ಸಿ.ಬಿ.ಐ ತನಿಖೆಗೆ ಒಪ್ಪಿಸಬೇಕು. ಕೊಡಗಿನ ಕಾಫಿ ತೋಟಗಳ ಲೈನ್ ಮನೆಗಳಲ್ಲಿ ವಾಸ ಮಾಡುತ್ತಿರುವ ಕಾರ್ಮಿಕರ ಶೋಷಣೆ ನಿಲ್ಲಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿಯಾದ ಎಂ.ವಿ ಭವಾನಿ ಮಾತನಾಡಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ ಸರ್ಕಾರವು ಈ ಕುರಿತು ಗಂಭೀರವಾಗಿ ಕ್ರಮ ಕೈಗೊಳ್ಳಬೇಕು, ರಂಜಿತ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಮತ್ತು ಕುಟುಂಬದವರಿಗೆ ಸರ್ಕಾರಿ ನೌಕರಿಯನ್ನು ನೀಡಬೇಕು, ಕನಿಷ್ಠ ನಾಲ್ಕ ಎಕರೆ ಜಮೀನು ಮಂಜೂರಿ ಮಾಡಿ ಕೊಡಬೇಕು ಎಂದು ಹೇಳಿದರು.
ಜಿಲ್ಲಾ ಸಂಚಾಲಕರಾದ ಭೀಮಯ್ಯ ಮಾತನಾಡಿ ದಲಿತ ಮಹಿಳೆಯರ ಮೇಲೆ ಅತ್ಯಾಚಾರ ಕೊಲೆಗಳು ನಡೆದಾಗ ಈ ಕುರಿತು ಎಲ್ಲಾ ಪ್ರಗತಿಪರ ಸಂಘಟನೆಗಳು ಮಹಿಳಾ ಸಂಘಟನೆಗಳು ಧ್ವನಿಯೆತ್ತ ಬೇಕು ಎಂದು ಹೇಳಿದರು. ಜಿಲ್ಲಾ ಸಂಘಟನಾ ಸಂಚಾಲಕರಾದ ಉದ್ದೆಬೂರನಹಳ್ಳಿ ಯು.ಸಿ ರಮೇಶ್ ಪ್ರತಿಭಟನೆಗೆ ಚಾಲನೆ ನೀಡಿದರು.
ಜಿಲ್ಲಾ ಸಂಘಟನಾ ಸಂಚಾಲಕರಾದ ಜಗದೀಶ್ ಬ್ಯಾಡರಹಳ್ಳಿ, ಬೀರೂರು ಕುಮಾರ್, ಕಳಸ ಕೃಷ್ಣ, ತ್ಯಾಗದಕಟ್ಟೆ ರಾಘವೇಂದ್ರ, ಎನ್ ಆರ್ ಪುರ ಅಬ್ದುಲ್ ರಹಮಾನ್, ಶಿವಕುಮಾರ್ ಹಲಸುಮನೆ, ರಾಜ್ಯ ಸಮಿತಿ ಸದಸ್ಯರಾದ ರಾಜೇಶ್ ಮಹಿಳಾ ಒಕ್ಕೂಟದ ಜಿಲ್ಲಾ ಸಂಚಾಲಕಿಯಾದ ಸವಿತಾ ಹವ್ವಳ್ಳಿ,ಎನ್ ಆರ್ ಪುರ ತಾಲೂಕು ಸಂಚಾಲಕರಾದ ಸಿಜು, ತರೀಕೆರೆ ಸಂಚಾಲಕರಾದ ಸಿದ್ದಪ್ಪ, ರಂಗಸ್ವಾಮಿ,ತಿಮ್ಮಪ್ಪ ಮೀನ್ ಕ್ಯಾಂಪ್ ರವಿ, ವಾಸಂತಿ ಮುಂತಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು . ಮೆರವಣಿಗೆ ಮೂಲಕ ಸಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್.ವೆಂಕಟೇಶ್ ತರೀಕೆರೆ ಚಿಕ್ಕಮಗಳೂರು
