ಮಹಾತ್ಮ ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತ ಡಿ.ಎಸ್.ಎಸ್ ಮುಖಂಡರಿಂದ – ಅಪರ ಜಿಲ್ಲಾಧಿಕಾರಿ ಮುಖಾಂತರ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಬಾಗಲಕೋಟೆ ಮೇ.11

ಮಹಾತ್ಮ ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತ ಡಿ.ಎಸ್.ಎಸ್ ಮುಖಂಡರಿಂದ ಅಪರ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದ ಸಂದರ್ಭ

ರಾಜ್ಯದಲ್ಲಿ ದಲಿತರ ಮೇಲೆ ನಿರಂತರ ದೌರ್ಜನ್ಯಗಳು, ಅತ್ಯಾಚಾರ, ಕೊಲೆಗಳು ನಡೆಯುತ್ತಿದೆ. ಕೊಡುಗು ಜಿಲ್ಲೆಯ ಅದಿವಾಸಿಗಳು ಸ್ವಂತ ಮನೆ ನಿವೇಶನಗಳು ಇಲ್ಲದೆ ಜೀವನ ಪರ್ಯಂತ ಎಸ್ಟೇಟ್ ಮಾಲೀಕರ ಲೈನ್ ಮನೆಗಳಲ್ಲಿ ಜೀತ ದಾಳುಗಳಂತೆ ಶೋಷಣೆಗೆ ಒಳಗಾದಂತ ಧ್ವನಿ ಇಲ್ಲದವರಿಗೆ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದ.

ರಂಜಿತಾ ಎಂಬ ವಿದ್ಯಾರ್ಥಿನಿ ದಿನಾಂಕ 9-12-2024 ರಂದು ಪೊನ್ನಂಪೇಟೆ ತಾಲೂಕು. ಹೈಸೊಣ್ಣೂರು ಕಾಲೋನಿಯ 70 ಕುಟುಂಬಗಳಿಗೆ ನಿವೇಶನ ರಹಿತ ದಲಿತರು ವಾಸವಾಗಿರುವ ೫ ಎಕರೆ ಸರ್ಕಾರಿ ಜಮೀನನ್ನು ದಲಿತರಿಗೆ ಮನೆ ನಿವೇಶನ ಮಂಜೂರು ಮಾಡಿ ಕೊಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಭೂಮಿಗಾಗಿ ಹೋರಾಟ, ಕಾಲ್ನಡಿಗೆ ಜಾಥಾದಲ್ಲಿ ಭಾಗವಹಿಸಿದ್ದರು.

ಇದಕ್ಕೂ ಮೊದಲು ಅದಿವಾಸಿ ಸಂಘಟನೆ ಸುಂಟಿಕೊಪ್ಪ ಗ್ರಾಮದಿಂದ ಪೊನ್ನಂಪೇಟೆ ವರಿಗೂ ಆದಿವಾಸಿಗಳ ಮನೆ ನಿವೇಶನ ರಹಿತ ಎಸ್ಟೇಟ್ ಲೈನ್ ಮನೆಗಳಲ್ಲಿ ವಾಸವಿದ್ದು ಜೀತದಾಳುಗಳಂತೆ ದುಡಿಯುತ್ತಿದ್ದ ಕೂಲಿ ಕಾರ್ಮಿಕರಿಗೆ ನ್ಯಾಯ ರಕ್ಷಣೆ ಮತ್ತು ಮೂಲಭೂತ ಸೌಕರ್ಯಗಳಿಗಾಗಿ ಕಾಲ್ನಡಿಗೆ ಜಾಥಾ ಮಾಡಿದ ಹೋರಾಟದಲ್ಲಿ ಭಾಗವಹಿಸಿದ್ದು, ಬಡ ಜನ ನೊಂದವರ ಧ್ವನಿ ಯಾಗಿದ್ದರು. ಕೊಡಗಿನ ಕೆಲವು ಪಟ್ಟ ಭದ್ರಾ ಭೂ ಮಾಲೀಕರಿಂದ ಇವರಿಗೆ ಜೀವ ಬೆದರಿಕೆ ಇತ್ತು.

ಪೊನ್ನಂಪೇಟೆ ತಾಲೂಕಿನ ಉದಿಕೆರೆ ಬೆಳ್ಳೂರು ಗ್ರಾಮದ ರಾಣಿ ಗಣೇಶ್ ದಂಪತಿಗಳ ಮಗಳು ಪತ್ರಿಕೋದ್ಯಮ ವಿದ್ಯಾರ್ಥಿನಿ ರಂಜಿತಾಳನ್ನು ಕೊಲೆ ಮಾಡುವ ಉದ್ದೇಶದಿಂದ ಟಿ.ಶೆಟ್ರಿರಿ ಗ್ರಾಮ ಸವರ್ಣೀಯ ಜಾತಿಗೆ ಸೇರಿದ ಅಯ್ಯಪ್ಪ ಎಂಬುವನು ದಿನಾಂಕ:-31-03-2026 ರಂದು ರಂಜಿತಾಳನ್ನು ಪುಸಲಾಯಿಸಿ ಬೆಂಗಳೂರಿನ ಕೊಡತಿ ಗ್ರಾಮದ ಮನೆಯಲ್ಲಿ ಕರೆದು ಕೊಂಡು ಹೋಗಿ ಅತ್ಯಾಚಾರ ಮಾಡಿ ಕುತ್ತಿಗೆಗೆ ವೈರ್ ಬಿಗಿದು ಕೊಲೆ ಮಾಡಿರುತ್ತಾನೆ. ಆದ್ದರಿಂದ ರಂಜಿತಾಳ ಕೊಲೆಯು ವ್ಯವಸ್ಥಿತ ಪಿತೂರಿಯಾಗಿದ್ದು. ಈ ಕೊಲೆ ಪ್ರಕರಣವನ್ನು ಕರ್ನಾಟಕ ಸರ್ಕಾರ ಸಿ.ಬಿ.ಐ ತನಿಖೆಗೆ ಒಪ್ಪಿಸಿ ಪಿತೂರಿ ಮಾಡಿರುವ ಭೂ ಮಾಲೀಕರ ವಿರುದ್ಧವು ಕ್ರಮ ಆಗಬೇಕು.

ಪ್ರೀತಿ ಪ್ರೇಮದ ಹೆಸರಿನಲ್ಲಿ ದಲಿತ ಹೆಣ್ಣು ಮಕ್ಕಳನ್ನು ಜಾತಿ ಕಾರಣದಿಂದ ಯಾವುದೇ ಭಯ ಭೀತಿ ಇಲ್ಲದೆ ಕೊಲೆ ಮಾಡಲಾಗುತ್ತಿದೆ ಇಂಥ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸ ಬೇಕು.ಮತ್ತು ಕೊಲೆಯಾದ ರಂಜಿತಾಳ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಬೇಕು,

ಅವರ ಕುಟುಂಬಕ್ಕೆ ಸರ್ಕಾರಿ ನೌಕರಿ ನೀಡಬೇಕು ಮತ್ತು ಕನಿಷ್ಠ ನಾಲ್ಕು ಎಕರೆ ಜಮೀನು ಮಂಜೂರಿ ಮಾಡಿ ಕೊಡಬೇಕು ಶುಂಠಿಕೊಪ್ಪ ಹೋಬಳಿ ಕಂಬಿಬಾಳೆ ಹತ್ತೂರು – ನಲ್ಲೂರು ಗ್ರಾಮದಲ್ಲಿರುವ ಸುಜಾತ ಎಸ್ಟೇಟ್ ಮಾಲೀಕ ಮೋಹನ್ ದಾಸ್ ರವರ ಕೋಟದಲ್ಲಿ ಮರದ ಕಪತ್ ಮಾಡುವ ಕೆಲಸಕ್ಕೆ ಹೋಗಿದ್ದ ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲ್ಲೂಕಿನ ಚಂಚುನಕಟ್ಟೆ ಹೊಸೂರು ಗ್ರಾಮದ ಪರಿಶಿಷ್ಟ ಜಾತಿಯ ಆನಂದ ಕುಮಾರ್ ಮರದಿಂದ ಬಿದ್ದು ಸ್ಟೈನಲ್ ಕಾರ್ಡ ಕಟ್ಟಾಗಿ ಜೀವನ್ಮರಣ ಸ್ಥಿತಿಯಲ್ಲಿರುತ್ತಾರೆ, ಇವರಿಗೆ ಪರಿಹಾರ ಕೊಡಿಸಬೇಕು,

ಚಿಕಿತ್ಸಾ ವೆಚ್ಚ ಭರಿಸಬೇಕು ಮತ್ತು ಮಾಲೀನಕ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ತರೀಕೆರೆ ಎಸ್ ವೆಂಕಟೇಶ್ ನೇತೃತ್ವದ ಮಹಾತ್ಮ ಪ್ರೋಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ಕರ್ನಾಟಕ ದಲಿತ ಮಹಿಳಾ ಒಕ್ಕೂಟ ರಾಜ್ಯ ಸಮಿತಿ ದಿನಾಂಕ 11-05-2026 ರಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುತ್ತಿದ್ದೇವೆ.

ಬೇಡಿಕೆಗಳು:-

1. ಕೊಲೆಯಾದ ರಂಜಿತಾ ರವರ ಕುಟುಂಬಕ್ಕೆ ಸರ್ಕಾರದಿಂದ ಕನಿಷ್ಠ ರೂ. 10.00 ಲಕ್ಷ ಪರಿಹಾರ ಹಣ

2. ಕೊಲೆಯಾದ ರಂಜಿತಾ ರವರ ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಬೇಕು ಮತ್ತು ಕನಿಷ್ಠ

4 ಎಕರೆ ಜಮೀನು ಮಂಜೂರು ಮಾಡಿಸಿ ಕೊಡಬೇಕು

3. ಕೊಲೆ ಪ್ರಕರಣವನ್ನು ಸಿ.ಬಿ.ಐ ಗೆ ಒಪ್ಪಿಸಿ ಕೊಲೆಗೆ ಪಿತೂರಿ ಮಾಡಿರುವ ಭೂ ಮಾಲೀಕರ ವಿರುದ್ಧ ಕ್ರಮ ಆಗಬೇಕು.

4. ಶುಂಠಿಕೊಪ್ಪ ಹೋಬಳಿ ಕಂಬಿಬಾಳೆ ಹತ್ತೂರು – ನಲ್ಲೂರು ಗ್ರಾಮದಲ್ಲಿರುವ ಸಜಾತ ಎಸ್ಟೇಟ್ ಮಾಲೀಕ ಮೋಹನ್ ದಾಸ್ ರವರ ತೋಟದಲ್ಲಿ ಮರದ ಕಪಕ್ ಮಾಡುವ ಕೆಲಸಕ್ಕೆ ಹೋಗಿದ್ದ ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲ್ಲೂಕಿನ ಚಂಚುನಕಟ್ಟೆ ಹೊಸೂರು ಗ್ರಾಮದ ಪರಿಶಿಷ್ಟ ಜಾತಿಯ ಆನಂದ ಕುಮಾರ್ ಮರದಿಂದ ಬಿದ್ದು ಸ್ಟೈನಲ್ ಕಾರ್ಡ ಕಟ್ಟಾಗಿ ಜೀವನ್ಮರಣ ಸ್ಥಿತಿಯಲ್ಲಿರುತ್ತಾರೆ, ಇವರಿಗೆ ಪರಿಹಾರ ಕೊಡಿಸಬೇಕು, ಚಿಕಿತ್ಸಾ ವೆಚ್ಚ ಭರಿಸಬೇಕು ಮತ್ತು ಮಾಲೀಕನ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು.

5. ಕೊಡಗು ಜಿಲ್ಲಾಯಾದ್ಯಂತ ಎಸ್ಟೇಟ್ ಗಳ ಲೈನ್ ಮನೆಗಳಲ್ಲಿ ಜೀತದಾಳುಗಳಂತೆ ವಾಸ ಮಾಡುತ್ತಿರುವ ಬಗ್ಗೆ ಸರ್ಕಾರ ತನಿಖೆ ಮಾಡಿಸಿ ನಿವೇಶನ ರಹಿತ ಕೂಲಿ ಕಾರ್ಮಿಕರಿಗೆ ಮನೆ ನಿವೇಶನಗಳನ್ನು ಮಂಜೂರು ಮಾಡಿ ಕೊಡಬೇಕು.

6. ಜಿಲ್ಲಾದ್ಯಂತ ಇರುವ ಸರ್ಕಾರಿ ಜಮೀನುಗಳಲ್ಲಿ ದಲಿತರಿಗೆ ಶೇ.50% ಮೀಸಲಿಟ್ಟು ಭೂ ರಹಿತ ದಲಿತರಿಗೆ

7. ಜಿಲ್ಲೆಯಲ್ಲಿ ಡಾ, ಬಿ.ಆರ್ ಅಂಬೇಡ್ಕರ್ ಅಧ್ಯಯನ ಪೀಠ ಮತ್ತು ಡಾ, ಬಾಬು ಜಗಜೀವನರಾಮ್ ಅಧ್ಯಯನ ಪೀಠ ಹಾಗೂ ಬುದ್ಧ ವಿಹಾರ ನಿರ್ಮಾಣಕ್ಕೆ ಕನಿಷ್ಠ 10 ಎಕರೆ ಜಮೀನು ಮಂಜೂರಿ ಮಾಡಿ ಕೊಡಬೇಕು ಎಂದು ಅಪರ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿ ಯವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಹಾತ್ಮ ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ಮಾರುತಿ.ಬಿ ಹೊಸಮನಿ, ಹಾಗೂ ಬೆಳಗಾವಿ ವಿಭಾಗೀಯ ಸಂಚಾಲಕರು ಹನಮಂತ.ಎಚ್ ಹಿರೇಮನಿ, ಜಿಲ್ಲಾ ಸಂಘಟನಾ ಸಂಚಾಲಕರಾದ ಲಕ್ಷ್ಮಣ್.ಎಸ್ ಹಾದಿಮನಿ, ಜಿಲ್ಲಾ ಸಂಘಟನಾ ಸಂಚಾಲಕರಾದ ಪರಸಪ್ಪ. ದುರುಗಪ್ಪ ಮಾದರ. ಜಿಲ್ಲಾ ಸಂಘಟನಾ ಸಂಚಾಲಕರಾದ ಯಮನಪ್ಪ ಭಜಂತ್ರಿ, ಹುನಗುಂದ ತಾಲೂಕ ಸಂಘಟನಾ ಸಂಚಾಲಕರಾದ ಭರಮಪ್ಪ ಫಕೀರಪ್ಪ ಮಾದರ. ಹಾಗೂ ಮುಧೋಳ ತಾಲೂಕ ಸಂಚಾಲಕರಾದ ಮಲೆಪ್ಪ.ರಾಣಪ್ಪ. ತಳಿಗೇರಿ ಉಪಸ್ಥಿತರಿದ್ದರು ಎಂದು ಡಿ.ಎಸ್.ಎಸ್ ಜಿಲ್ಲಾ ‌ಸಂಚಾಲಕರಾದ ಯಮನಪ್ಪ.ಸಿ ಹಲಗಿ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button