ಪುರ ಸಭೆಗೆ ಮುತ್ತಿಗೆ ಹಾಕಿ ಮುಖ್ಯಾಧಿಕಾರಿ – ವಿರುದ್ಧ ಆಕ್ರೋಶ.
ಮಾನ್ವಿ ಅ.10

ಮಾನ್ವಿಯಲ್ಲಿ ದಿನಕ್ಕೊಂದು ಸಮಸ್ಯೆ ಬಟಾ ಬಯಲಾಗುತ್ತಿದ್ದು, ಪುರಸಭೆ ಕಚೇರಿಯ ಆಡಳಿತ ಹದಗೆಟ್ಟಿದ್ದರಿಂದ 20 ನೆ. ವಾರ್ಡ್ ನಿವಾಸಿಗಳು ನಮಗೆ ನ್ಯಾಯಬೇಕು ಎಂದು ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಮಾನ್ವಿ ಪಟ್ಟಣದ 20 ನೆ. ವಾರ್ಡಿನ ಬಹುತೇಕ ಜನರು ಕೂಲಿ ಕಾರ್ಮಿಕರಾಗಿದ್ದು, ಆದರೆ ಈ ವಾರ್ಡ್ ನಲ್ಲಿ ಪುರಸಭೆ ಮುಖ್ಯಾಧಿಕಾರಿ ಗಂಗಾಧರಪ್ಪ ಮನೆಗೊಂದು ಶೌಚಾಲಯ ಕಟ್ಟಿಸಿ ಕೊಡದ ಕಾರಣ ಬಹಿರ್ದೆಸೆಯನ್ನು ನೆಚ್ಚುವಂತಾಗಿದೆ.

ಮಾನ್ವಿ ಜನತೆಗೆ ಬಂದ ಸ್ವಚ್ಛ ಭಾರತ ಯೋಜನೆಯ ಹಣ ಯಾರ ಪಾಲಾಗಿದೆ, ನಮಗೆ ಮನೆಗೊಂದು ಶೌಚಾಲಯ ಕಟ್ಟಿಸಿ ಕೊಡದ ಕಾರಣ ಬಹಿರ್ದೆಸೆ ಶೌಚಾಲಯ ಮಾಡುತ್ತಿದ್ದೇವೆ. ಆದರೆ ವ್ಯಕ್ತಿಯೊಬ್ಬ ಶೌಚಾಲಯ ಮಾಡಬಾರದು ಎಂದು ಅಡ್ಡಿ ಪಡಿಸಿದ್ದು, ನಮಗೆ ನ್ಯಾಯಬೇಕು ಎಂದು ಮಹಿಳೆಯರು ಒತ್ತಾಯಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ