‘ಯುವಕರ ಸ್ಪೂರ್ತಿಯ ಚಿಲುಮೆ “ರತನ್ ಟಾಟಾ”…..

ಯುವಕರ ಸ್ಪೂರ್ತಿಯ ಚಿಲುಮೆ ರತನ್
ಟಾಟಾ
ಸರಳತೆಯ ಸಾಹುಕಾರ ರತನ್ ಟಾಟಾ
ಬಡವರ ಬಂಧು ಕಲಿಯುಗದ ಕರ್ಣ ರತನ್
ಟಾಟಾ
ಕೋಟ್ಯಾಂತರ ಭಾರತೀಯರಿಗೆ ರೋಲ್
ಮಾಡೆಲ್ ರತನ್ ಟಾಟಾ.
ಕಾಸಿದ್ದರೆ ಅಷ್ಟೇ ಸಿರಿವಂತರು
ಅಂದು ಕೊಂಡಿತ್ತು ಸಮಾಜ
ಹೃದಯ ಶ್ರೀಮಂತಿಕೆಯ ಅಸಲಿ ಅರ್ಥವನ್ನು
ತೋರಿಸಿದ ಮನುಜ
ದೇಶದ ಪ್ರಮುಖ ಉದ್ಯಮಗಳಲ್ಲಿ ಪ್ರಮುಖ
ದಿಗ್ಗಜ
ಪಯಣ ಮುಗಿಸಿದ ವಿಶ್ವದ ಖ್ಯಾತ ದಿಗ್ಗಜ.
ಭಾರತ ದೇಶ ಕಂಡ ಅದ್ವಿತೀಯ ಉದ್ಯಮಿ
ನವ ಉದ್ಯಮಗಳಿಗೆ ಆದರ್ಶ ಪ್ರಾಯರಾಗಿದ್ದ
ಪ್ರಸಿದ್ಧ ಕೈಗಾರಿಕೋದ್ಯಮಿ
ದೇಶಕ್ಕೆ ಕಷ್ಟ ಅಂತ ಬಂದಾಗ ತನ್ನ
ಸರ್ವಸ್ವವನ್ನು ದಾನ ಮಾಡಿದ ರಾಷ್ಟ್ರಪ್ರೇಮಿ
ದೇವರಂತ ಮನುಷ್ಯ ಭಾರತದ ಹೆಮ್ಮೆಯ
ರಾಷ್ಟ್ರ ಪ್ರೇಮಿ.
ಭಾರತ ಮಾತೆಯ ಹೆಮ್ಮೆಯ ಪುತ್ರರಿವರು
ಭಾರತದ ಟಾಟಾ ಸಮೂಹದ ದೊರೆಯಿವರು
ಭಾರತದ ಅನರ್ಘ್ಯ ನಕ್ಷತ್ರಯಿವರು
ಭಾರತದ ಖ್ಯಾತ ಉದ್ಯಮಿ ಭಾರತದ
ಕಣ್ಮಣಿಯಿವರು.
ಕು. ಜ್ಯೋತಿ ಆನಂದ ಚಂದುಕರ
ಬಾಗಲಕೋಟ