ವಿಧಾನ ಸಭಾ ಮತ ಕ್ಷೇತ್ರದ ಸರ್ವ ಕಾಂಗ್ರೆಸ್ ಪಕ್ಷದ – ಪ್ರೀತಿಯ ಕಾರ್ಯಕರ್ತ ಬಂಧುಗಳೇ.

ದೇವರ ಹಿಪ್ಪರಗಿ ಫೆ.08

ಮುಂಬರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳು ನಮ್ಮ ಪಕ್ಷದ ಭವಿಷ್ಯವನ್ನು ರೂಪಿಸುವ ಮಹತ್ವದ ಹೋರಾಟವಾಗಿದೆ.

ಈ ಹೋರಾಟದಲ್ಲಿ ಪ್ರತಿಯೊಬ್ಬ ಕಾರ್ಯಕರ್ತನ ಶಕ್ತಿ, ಸಂಘಟನೆ ಮತ್ತು ತ್ಯಾಗವೇ ನಮ್ಮ ಗೆಲುವಿನ ಆಧಾರಈ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆ ಬಲಪಡಿಸುವುದು, ಚುನಾವಣಾ ತಂತ್ರ ರೂಪಿಸುವುದು ಹಾಗೂ ಕಾರ್ಯಕರ್ತರಿಗೆ ದಿಕ್ಕು ನೀಡುವ ಉದ್ದೇಶದಿಂದಚುನಾವಣೆ ಪೂರ್ವಭಾವಿ ಸಭೆಯನ್ನು ಮಾನ್ಯ ವಿಧಾನ ಪರಿಷತ್ ಶಾಸಕರಾದ ಶ್ರೀ, ಸುನೀಲಗೌಡ ಪಾಟೀಲ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದೆ.

👉 ಈ ಮಹತ್ವದ ಸಭೆಗೆ ಮತ ಕ್ಷೇತ್ರದ ಎಲ್ಲಾ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಎಲ್ಲಾ ಘಟಕದ ಪದಾಧಿಕಾರಿಗಳು, ಬೂತ್ ಮಟ್ಟದ ಕಾರ್ಯಕರ್ತರು ಹಾಗೂ ಯುವ ಕಾಂಗ್ರೆಸ್–ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಕಡ್ಡಾಯವಾಗಿ ಹಾಜರಾಗ ಬೇಕಾಗಿ ವಿನಂತಿ.

ನಿಮ್ಮ ಹಾಜರಾತಿಯೇ ಪಕ್ಷದ ಶಕ್ತಿ,ನಿಮ್ಮ ಏಕತೆಯೇ ಕಾಂಗ್ರೆಸ್‌ನ ಗೆಲುವು.

ಸ್ಥಳ:ದೇವರ ಹಿಪ್ಪರಗಿ ಪ್ರವಾಸಿ ಮಂದಿರ ದಿನಾಂಕ:09-02-2026 ಸಮಯ:ಬೆಳಿಗ್ಗೆ 11:00 ಗಂಟೆ

ನಾವೆಲ್ಲರೂ ಒಟ್ಟಾಗಿ ಸಂಘಟಿತರಾಗಿ ಜನಪರ ಆಡಳಿತಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರೋಣ.

ಇದಕ್ಕೆ ನಿಮ್ಮ ಅಮೂಲ್ಯ ಸಮಯವನ್ನು ಮೀಸಲಿಟ್ಟು ಸಭೆಯಲ್ಲಿ ಭಾಗವಹಿಸ ಬೇಕಾಗಿ ವಿನಂತಿ.

ಇಂತಿ ನಿಮ್ಮಪ್ರಭುಗೌಡ ಬ ಲಿಂಗದಳ್ಳಿ (ಚಬನೂರ)ಕೆ.ಪಿ.ಸಿ.ಸಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಉಸ್ತುವಾರಿಗಳು ದೇವರ ಹಿಪ್ಪರಗಿ ವಿಧಾನ ಸಭಾ ಮತ ಕ್ಷೇತ್ರ ಬಂದು ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಯಶಸ್ವಿ ಗೊಳಿಸಬೇಕೆಂದು ತಮ್ಮಲ್ಲಿ ಕೋರಿಕೆ ಯಾಗಿದೆ ಎಂದು ವರದಿಯಾಗಿದೆ.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್‌ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ ದೇವರ ಹಿಪ್ಪರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button