ಡಿ.ಎಸ್.ಎಸ್ ನೂತನ ತಾಲೂಕ – ಅಧ್ಯಕ್ಷರಾಗಿ ಬಿ.ಶಿವರಾಜ್.
ಕೊಟ್ಟೂರು ಡಿ.29

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನೂತನ ತಾಲೂಕು ಸಂಚಾಲಕರಾಗಿ ಬಿ ಶಿವರಾಜ್ ರವರನ್ನು ಜಿಲ್ಲಾ ಸಂಚಾಲಕರಾದ ಎಸ್ ದುರುಗೇಶ್ ರವರು ಆದೇಶ ಪತ್ರ ನೀಡುವುದರ ಮೂಲಕ ಆಯ್ಕೆ ಮಾಡಲಾಯಿತು. ಶ್ರೀಯುತರು ಸವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಹಾಗೂ ದಸಂಸ ಸಂಸ್ಥಾಪಕ ಪ್ರೊ. ಬಿ ಕೃಷ್ಣಪ್ಪನವರ ತತ್ವ ಸಿದ್ಧಾಂತ, ಆಶಯಗಳಿಗೆ ಬದ್ಧರಾಗಿ ಅವಕಾಶ ವಂಚಿತ ಸಮುದಾಯಗಳ ಪರವಾಗಿ, ಸವಿಧಾನಾತ್ಮಕವಾದ ಮೂಲಭೂತ ಸೌಕರ್ಯಗಳನ್ನು ಕೊಡಿಸಲು, ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಲು ಸಂಘಟನೆಯನ್ನು ಬಲಿಷ್ಠ ಗೊಳಿಸಿ ತಾವುಗಳು ಸಕ್ರಿಯವಾಗಿ ಇರಬೇಕೆಂದು ಆದೇಶ ನೀಡಿದರು.

ಈ ಸಂದರ್ಭದಲ್ಲಿ ಈ ಹಿಂದೆ ಸಂಘಟನೆಗೆ ದುಡಿದ ತಾಲೂಕು ಸಂಚಾಲಕರಾದ ತಗ್ಗಿನಕೇರಿ ಹನುಮಂತಪ್ಪ ವಕೀಲರನ್ನು ಜಿಲ್ಲಾ ಸಮಿತಿಗೆ ಆಯ್ಕೆ ಮಾಡಲಾಯಿತು. ನೂತನ ತಾಲೂಕು ಸಂಘಟನಾ ಸಂಚಾಲಕರನ್ನಾಗಿ ಕೊಟ್ರೇಶ್ ಬೇವೂರು ದೂಪದಳ್ಳಿ ಚಿದಾನಂದಪ್ಪ ಕೆ ಕೊಲಾರಪ್ಪ ಬಿ ಕೆಂಚಪ್ಪ ದೇವರಮನೆ ಸಿದ್ದಲಿಂಗಪ್ಪ ಮಾಗಳಿದುರ್ಗೇಶ್ ಭೀಮಪ್ಪ ಅಲಬೂರು ಮಂಜುನಾಥ ಮತ್ತಿತರರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ತೆಗ್ಗಿನಕೇರಿ ಕೊಟ್ರೇಶ್ ಕಂದಗಲ್ಲು ಪರಶುರಾಮ್ ಬಿ.ಡಿ ಗುದ್ದಿ ದುರ್ಗೇಶ್ ಹನುಮೇಶ್ ತಾಲೂಕಿನ ಎಲ್ಲಾ ದಲಿತ ಸಂಘಟನಾಕಾರರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್ ಕುಮಾರ್ ಸಿ ಕೊಟ್ಟೂರು

