ಮುನ್ನಡೆಸುವ ಮಹಾಶಕ್ತಿ ಶ್ರೀಮಾತೆ ಶಾರದಾದೇವಿ – ಶ್ರೀಮತಿ ಜಿ.ಯಶೋಧಾ ಪ್ರಕಾಶ್ ಅಭಿಪ್ರಾಯ.
ಚಳ್ಳಕೆರೆ ಡಿ.12

ಶ್ರೀಮಾತೆ ಶಾರದಾದೇವಿಯವರು ರಾಮಕೃಷ್ಣ ಮಹಾ ಸಂಘವನ್ನು ಮುನ್ನಡೆಸುವ ಮಹಾ ಶಕ್ತಿಯಾಗಿದ್ದರು ಎಂದು ಚಳ್ಳಕೆರೆಯ ಶಿವ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಜಿ.ಯಶೋಧಾ ಪ್ರಕಾಶ್ ಅಭಿಪ್ರಾಯ ಪಟ್ಟರು.

ಶಿವ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಮಾಡುತ್ತ ಮಾತನಾಡುತ್ತಿದ್ದರು.

ಶ್ರೀರಾಮಕೃಷ್ಣರ ದಿವ್ಯ ಸಂದೇಶಗಳನ್ನು ಜನ ಸಾಮಾನ್ಯರಿಗೆ ಪ್ರಚಾರ ಮಾಡುವ ದೃಷ್ಟಿಯಿಂದ ಸ್ವಾಮಿ ವಿವೇಕಾನಂದ ರಿಂದ ಸ್ಥಾಪಿತವಾದ ಶ್ರೀರಾಮಕೃಷ್ಣ ಮಠ ಮತ್ತು ಮಿಷನ್ ನ ಮೂಲ ಶಕ್ತಿಯಾಗಿ ಸಂಘ ಜನನಿಯಾಗಿ ಶಾರದಾ ಮಾತೆಯವರ ಪ್ರಾರ್ಥನೆ ಕೆಲಸ ಮಾಡಿತ್ತು ಎಂದರು.

ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀದೇವಿಸ್ತುತಿ ಪಠಣ, ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ದ್ರಾಕ್ಷಾಯಣಿ, ಅನಿತಾ, ಸರಸ್ವತಿ, ಶಾಂತಮ್ಮ, ರಶ್ಮಿ ರಮೇಶ್, ವಿಜಯಲಕ್ಷ್ಮೀ, ಭಾಗ್ಯಲಕ್ಷ್ಮೀ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ರಶ್ಮಿ ವಸಂತ, ಗೀತಾಲಕ್ಷ್ಮೀ, ವೀರಮ್ಮ, ಸಂಗೀತ, ಶೈಲಜ, ಕೃಷ್ಣವೇಣಿ, ಉಷಾ ಶ್ರೀನಿವಾಸ್, ಜಯಮ್ಮ, ಯತೀಶ್ ಎಂ ಸಿದ್ದಾಪುರ ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

