ಶ್ರೀರಾಮಕೃಷ್ಣರ ಭಾವ ಚಿತ್ರವಿಲ್ಲದ ವಿಶಿಷ್ಟ ಆಶ್ರಮ ಮಾಯಾವತಿಯ ಅದ್ವೈತ ಆಶ್ರಮ – ಶ್ರೀಮತಿ ಜಿ.ಯಶೋಧಾ ಪ್ರಕಾಶ್.

ಚಳ್ಳಕೆರೆ ಜೂ.06

ಶ್ರೀಮತಿ ಜಿ ಯಶೋಧಾ ಪ್ರಕಾಶ್ ಅವರಿಂದ ಶ್ರೀಶಾರದಾದೇವಿ ಜೀವನಗಂಗಾ 📒 ಗ್ರಂಥ ಪಾರಾಯಣ

ಶ್ರೀರಾಮಕೃಷ್ಣರ ಭಾವ ಚಿತ್ರವು ಪೂಜೆ ಗೊಳ್ಳದ ಏಕೈಕ ಅದ್ವೈತ ಆಶ್ರಮವನ್ನು ಸ್ವಾಮಿ ವಿವೇಕಾನಂದರು ಹಿಮಾಲಯದ ತಪ್ಪಲಿನ ಮಾಯಾವತಿಯಲ್ಲಿ ಸ್ಥಾಪನೆ ಮಾಡಿದ್ದರು ಎಂದು ಚಳ್ಳಕೆರೆಯ ಶಿವ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಜಿ.ಯಶೋಧಾ ಪ್ರಕಾಶ್ ತಿಳಿಸಿದರು.

ಸಾಮೂಹಿಕ ಶ್ರೀವಿಷ್ಣು ಸಹಸ್ರನಾಮ ಪಾರಾಯಣ

ಶಿವ ನಗರದ ತಮ್ಮ ಜಿ.ವಿ.ಎಸ್ ನಿವಾಸದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಮಾಡುತ್ತ “ಮುನ್ನಡೆಸುವ ಮಹಾಶಕ್ತಿ” ಎಂಬ ಅಧ್ಯಾಯವನ್ನು ಓದುತ್ತಾ ಮಾತನಾಡಿದರು.

ಶ್ರೀಮದ್ ಭಗವದ್ಗೀತೆಯ ಪುರುಷೋತ್ತಮ ಯೋಗದ ಶ್ಲೋಕಗಳ ಕಲಿಕಾ ತರಗತಿ

ಅಧಿಕ ಮಾಸದ ಪ್ರಯುಕ್ತ ಸಾಮೂಹಿಕ ಶ್ರೀವಿಷ್ಣು ಸಹಸ್ರನಾಮ ಪಾರಾಯಣ, ಸಂಕಷ್ಟಹರ ಗಣಪತಿಯ ಪ್ರಯುಕ್ತ ಯತೀಶ್ ಎಂ ಸಿದ್ದಾಪುರ ನೇತೃತ್ವದಲ್ಲಿ ವಿಶೇಷ ಭಜನೆ, ಶ್ರೀಮದ್ ಭಗವದ್ಗೀತೆಯ ಪುರುಷೋತ್ತಮ ಯೋಗದ ಶ್ಲೋಕಗಳ ಕಲಿಕಾ ತರಗತಿ, ಪ್ರಸಾದ ವಿನಿಯೋಗ ನಡೆಯಿತು.

ಕಾರ್ಯಕ್ರಮದಲ್ಲಿ ಶಾಂತಮ್ಮ, ರಶ್ಮಿ, ಶೈಲಜಾ, ಕೃಷ್ಣವೇಣಿ, ನಾಗರತ್ನಮ್ಮ, ವೀರಮ್ಮ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಸುಧಾಮಣಿ, ಜಯಮ್ಮ, ಭ್ರಮರಂಬಾ, ಕವಿತಾ ಗುರುಮೂರ್ತಿ, ವಿಜಯಲಕ್ಷ್ಮೀ, ಜಯಶೀಲಮ್ಮ, ಗೀತಾಲಕ್ಷ್ಮೀ, ದ್ರಾಕ್ಷಾಯಣಿ ಪಾಲ್ಗೊಂಡಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button