ಕನ್ನಡದ ಬಗ್ಗೆ ಅವಹೇಳನಕಾರಿ ಹೇಳಿಕೆಗೆ – ಕರವೇ ಬಣ ಕೆಂಡಾಮಂಡಲ.
ಮಾನ್ವಿ ಜೂ.01

ನಟ ಕಮಲ್ ಹಾಸನ್ ಅವರು ಕನ್ನಡದ ಬಗ್ಗೆ ಅವಹೇಳನ ಕಾರಿಯಾಗಿ ಹೇಳಿಕೆ ನೀಡಿರುವುದು ಖಂಡನೀಯ, ಕೂಡಲೇ ಕ್ಷಮೆ ಕೇಳುವ ಕೆಲಸ ಮಾಡಬೇಕು ಎಂದು ಕರವೇ ಜನಪರ ಬಣದ ರಾಜ್ಯಾಧ್ಯಕ್ಷ ಶ್ರೀಕಾಂತ್ ಪಾಟೀಲ್ ಗೂಳಿ ಒತ್ತಾಯಿಸಿದ್ದಾರೆ.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಮಾಧ್ಯಮದವ ರೊಂದಿಗೆ ಮಾತನಾಡಿ, ದೇಶದಲ್ಲಿಯೇ ಕನ್ನಡದ ಬಗ್ಗೆ ಗೌರವ ಇದೆ, ಹೆಚ್ಚು ಜ್ಞಾನಪೀಠ ಪ್ರಶಸ್ತಿ ಬಂದಿದ್ದು, ನಮ್ಮ ಕರ್ನಾಟಕಕ್ಕೆ ಆದರೆ ಕನ್ನಡ ಭಾಷೆಯ ಮೂಲ ತಮಿಳಿನಿಂದ ಬಂದಿದ್ದು ಎಂದು ವಿವಾದಾತ್ಮಕ ಹೇಳಿಕೆ ಕೊಟ್ಟು ಪ್ರಚಾರ ಗಿಟ್ಟಿಸಿ ಕೊಳ್ಳುವ ಕೆಲಸ ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಟ ಕಮಲ್ ಹಾಸನ್ ಅವರೆ ನಿಮಗೆ ಕನ್ನಡದ ಬಗ್ಗೆ ಜ್ಞಾನ ಗೊತ್ತಿಲ್ಲವೆಂದರೆ ಹೇಳಿ ಅದನ್ನು ಯಾವ ರೀತಿ ಎಂದು ನಾವು ಕಲಿಸಿ ಕೊಡಲು ಸಿದ್ದರಿದ್ದೇವೆ. ಕೂಡಲೇ ಕ್ಷಮೆಯಾಚನೆ ಮಾಡಬೇಕು, ಒಂದು ವೇಳೆ ನಿರ್ಲಕ್ಷ್ಯ ತೋರಿದರೆ ಕನ್ನಡಪರ ಸಂಘಟನೆಯ ಅಭಿಪ್ರಾಯದಂತೆ ನಾವು ಏನೆಂದು ತೋರಿಸ ಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ