ದಲಿತರಿಗೆ ಭೂಮಿ ಕೊಡಿಸುತ್ತೇನೆ ಎಂದ – ಶಾಸಕರು ಟಿ.ಡಿ ರಾಜೇಗೌಡ ಭರವಸೆ.

ನರಸಿಂಹರಾಜಪುರ ಫೆ.23

ಸರ್ಕಾರದಲ್ಲಿ ಒತ್ತಡ ತಂದು ಮುಖ್ಯಮಂತ್ರಿ, ಕಂದಾಯ ಮಂತ್ರಿ, ಕೃಷಿ ಮಂತ್ರಿಗಳೊಂದಿಗೆ ಮಾತನಾಡಿ ದಲಿತರಿಗೆ ಭೂಮಿ ಕೊಡಿಸುತ್ತೇನೆ ಎಂದು ಶಾಸಕ ಟಿ.ಡಿ ರಾಜೇಗೌಡ ರವರು ಹೇಳಿದರು.

ಅವರು ಇಂದು ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಮಹಾತ್ಮ ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಅಹೋರಾತ್ರಿ ಅನಿದಿಷ್ಟ ಕಾಲ ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಜೊತೆ ಕುಳಿತು ಮಾತನಾಡಿದರು 2009-10 ರಲ್ಲಿ ದಲಿತ ಸಂಘರ್ಷ ಸಮಿತಿಯು ಅಹೋರಾತಿ ಅನಿರ್ದಿಷ್ಟಕಾಲ ಧರಣಿ ಸತ್ಯ ಭೂಮಿ ಹೋರಾಟ ಪ್ರತಿಭಟನೆ ಮಾಡುವಾಗ ನಾನು ಶಾಸಕನಾಗಿರಲಿಲ್ಲ ಆದರೂ ಸ್ಥಳಕ್ಕೆ ಬಂದು ಬೆಂಬಲ ಸೂಚಿಸಿ ಜಮೀನು ಕೊಡಿಸುತ್ತೇನೆ ಎಂದು ಹೇಳಿದ್ದೆ.

ಆದರೆ ಹಲವಾರು ಕಾರಣಗಳಿಂದ ನಿಮ್ಮನ್ನು ಭೇಟಿ ಮಾಡಲಾಗಲಿಲ್ಲ ಇಂದು ನಾನು ಶಾಸಕನಾಗಿದ್ದೇನೆ ನಿಮಗೆ ಭೂಮಿ ಕೊಡಿಸುತ್ತೇನೆ ನನ್ನ ಮೇಲೆ ನಂಬಿಕೆ ಇಡಿ ನಮೂನೆ 53,57ರ ಅಡಿಯಲ್ಲಿ ಅರ್ಜಿ ಹಾಕಿರುವವರಿಗೆಲ್ಲ ಜಮೀನು ಮಂಜೂರಾತಿ ಮಾಡಿಸಿ ಕೊಡುತ್ತೇನೆ ಎಂದು ಹೇಳಿದರು.

ಟಾಸ್ಕ್ ಫೋರ್ಸ್ ಸಮಿತಿ ಇತ್ತು ಅದು 2017-18 ಕ್ಕೆ ನಿಂತು ಹೋಗಿದೆ ಪುನಃ ಪ್ರಾರಂಭಿಸಲಾಗಿದೆ ಅರಣ್ಯ ಇಲಾಖೆ, ಕಂದಾಯ ಇಲಾಖೆ ಜಂಟಿ ಸರ್ವೆ ಕಾರ್ಯ ಎಸ್.ಐ.ಟಿಯಿಂದ ನಡೆಯುತ್ತಿದೆ ಇದಾದ ನಂತರ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.

ಭೂಮಿ ಮನೆ ಇಲ್ಲದವರಿಗೆ ಕಂದಾಯ ಗ್ರಾಮ, ಉಪ ಕಂದಾಯ ಗ್ರಾಮಗಳ ಮೂಲಕ ಮನೆ ನಿವೇಶನಗಳ ಹಕ್ಕುಪತ್ರ ಕೊಡಿಸುತ್ತೇವೆ ಎಂದು ಹೇಳಿದರು.

ರಾಜ್ಯ ಸಂಚಾಲಕರಾದ ತರೀಕೆರೆ ಎನ್ ವೆಂಕಟೇಶ್ ಮಾತನಾಡಿ ಈ ಹಿಂದೆಯೂ ಸಹ ನಮಗೆ ಅಧಿಕಾರಿಗಳು ಜನ ಪ್ರತಿನಿಧಿಗಳು ಭೂಮಿ ಕೊಡುತ್ತೇವೆ ಎಂದು ಹೇಳಿ ಮೋಸ ಮಾಡಿದ್ದಾರೆ ಆದ್ದರಿಂದ ಪ್ರತಿಭಟನೆ ಧರಣಿ ನಿಲ್ಲಿಸುವುದಿಲ್ಲ ತಾವು ಜಿಲ್ಲಾಧಿಕಾರಿಗಳೊಂದಿಗೆ ಬನ್ನಿ ಬರವಣಿಗೆಯನ್ನು ಮಾಡಿ ಜಮೀನು ಕೊಡುತ್ತೇವೆ ಎಂದು ಹೇಳಿದರೆ ಮಾತ್ರ ಹೋರಾಟವನ್ನು ಸ್ಥಗಿತ ಗೊಳಿಸುತ್ತೇವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ರಾಜ್ಯ ಸಂಘಟನಾ ಸಂಚಾಲಕರಾದ ಮೈಸೂರಿನ ಕೆ.ನಂಜಪ್ಪ ಬಸವನಗುಡಿ ಹಾಗೂ ರಂಗಸ್ವಾಮಿ ಬಿ ಬಾಗಲಕೋಟೆ ಯಿಂದ ಆಗಮಿಸಿದ್ದ ರಾಜ್ಯ ಸಂಘಟನಾ ಸಂಚಾಲಕರಾದ ಮಾರುತಿ.ಬಿ ಹೊಸಮನಿ, ಬೆಳಗಾವಿ ವಿಭಾಗಿಯ ಸಂಚಾಲಕರಾದ ಹನುಮಂತ.ಎಚ್ ಹಿರೇಮನಿ, ಜಿಲ್ಲಾ ಚಾಲಕರಾದ ಯಮನಪ್ಪ.ಸಿ ಹಲಗಿ, ಜಿಲ್ಲಾ ಸಂಘಟನಾ ಸಂಚಾಲಕರಾದ ಯಮನಪ್ಪ.ಫ ಭಜಂತ್ರಿ ಹಾಗೂ ವಿಜಯನಗರ ಜಿಲ್ಲೆಯಿಂದ ಆಗಮಿಸಿರುವ ರಾಜ್ಯ ಸಂಘಟನಾ ಸಂಚಾಲಕರಾದ ದುರ್ಗಾ ದಾಸ್, ರಾಜ್ಯ ಸಮಿತಿ ಸದಸ್ಯರಾದ ಎಸ್ ರಾಜೇಶ್ ಕರ್ನಾಟಕ ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿಯಾದ ಎಂ.ವಿ ಭವಾನಿ ಜಿಲ್ಲಾ ಸಂಘಟನಾ ಸಂಚಾಲಕ ಅಬ್ದುಲ್ ರೆಹಮಾನ್, ತಾಲೂಕು ಸಂಚಾಲಕರಾದ ಸಿಜು, ಮೃತ್ಯುಂಜಯ, ರವಿ, ಜೈರಾಮ್, ಗೋಪಾಲ, ನಾಗರಾಜ, ಕಧೀರ್, ಎಸ್ ರಾಜು, ವಾಸಂತಿ, ಶೋಭಾ, ವೆನಿಲಾ. ರೇಣುಕಾ, ಕೆಪಿಸಿಸಿ ಸದಸ್ಯರಾದ ಸುಬ್ರಹ್ಮಣ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಟರಾಜ್, ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷರಾದ ಜುಬೇಧ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಪ್ರಶಾಂತ ಶೆಟ್ಟಿ, ಸದಸ್ಯರಾದ ಗಂಗಾಧರ್, ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ಮೊಹಮ್ಮದ್ ಫಯಾಜ್, ಹೋಬಳಿ ಕಾಂಗ್ರೆಸ್ ಅಧ್ಯಕ್ಷರಾದ ತಾಜು, ಬಗರು ಹುಕುಂ ಸಮಿತಿ ಸದಸ್ಯರಾದ ಇಸಿ ಜೋಯಿ ತಹಸಿಲ್ದಾರ್ ನೂರುಲ್ ಉದಾ ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎನ್.ವೆಂಕಟೇಶ್. ತರೀಕೆರೆ ಚಿಕ್ಕಮಗಳೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button