ಆರಾಧ್ಯ ದೇವತೆ ಶ್ರೀ ಶಕ್ತಿ ಮಾರಿಕಾಂಬ ದೇವಿ ರಥದ ಗಾಲಿಯನ್ನು ಹೊರ ಹಾಕುವ – ಮೂಲಕ ಜಾತ್ರೋತ್ಸವಕ್ಕೆ ಚಾಲನೆ ನೀಡಿದರು.

ಕಾನಾ ಹೊಸಹಳ್ಳಿ ಫೆ.05

ಕೂಡ್ಲಿಗಿ ತಾಲೂಕಿನ ಕಾನಾ ಹೊಸಹಳ್ಳಿಯ ಆರಾಧ್ಯ ದೇವತೆ ಶ್ರೀ ಶಕ್ತಿ ಮಾರಮ್ಮ ದೇವಿಯ ರಥದ ಗಾಲಿಯನ್ನು ಹೊರ ಹಾಕುವ ಮೂಲಕ ಜಾತ್ರೋತ್ಸವಕ್ಕೆ ಮಂಗಳವಾರ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಫೆ. 26 ರಂದು ರಥೋತ್ಸವ ಜರುಗಲಿದೆ.

ಜಾತ್ರೋತ್ಸವದ ಹಿನ್ನಲೆಯಲ್ಲಿ ಸೋಮವಾರ ರಾತ್ರಿ ಗುಗ್ಗರಿ ಹಾಕುವ ಕಾರ್ಯಕ್ಕೆ ಚಾಲನೆ ನೀಡಲಾಯಿತು, 287 ಸೇರು ಸಂಗ್ರಹವಾದ ಹುಳ್ಳಿ ಕಾಳುಗಳನ್ನು ಸುಮಾರು 41 ಮಡಿಕೆಗಳಲ್ಲಿ ಬೆರಣಿಯಿಂದ ಬೇಯಿಸಿ ಗುಗ್ಗರಿ ಮಾಡಿದ್ದು ವಿಶೇಷವಾಗಿತ್ತು. ಮಂಗಳವಾರ ಬೆಳಗಿನ ಜಾವಾ ಗ್ರಾಮದ ಎಲ್ಲಾ ದೇವಸ್ಥಾನಗಳಿಗೆ ಗುಗ್ಗರಿ ನೈವೇದ್ಯ ಅರ್ಪಿಸಿ, ದೈವಸ್ಥರಿಗೆ ವಿತರಿಸಲಾಯಿತು.

ನಂತರ ಸಕಲ ವಾಧ್ಯಗಳ ಮೂಲಕ ರಥದ ಮನೆಯಿಂದ ದೇವಿಯ ರಥದ ಗಾಲಿ (ಗಡ್ಡೆ) ಯನ್ನು ಹೊರ ಹಾಕುವ ಮೂಲಕ ಜಾತ್ರೋತ್ಸವಕ್ಕೆ ಅದ್ದೂರಿ ಚಾಲನೆ ದೊರೆಯಿತು. ಬೆಳಗ್ಗೆ ಯಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಗ್ರಾಮಸ್ಥರು ಸೇರಿದಂತೆ ಅಪಾರ ಭಕ್ತರ ಸಮ್ಮುಖದಲ್ಲಿ ರಥದ ಗಾಲಿಗೆ ವಿಧಿ ವಿಧಾನಗಳಂತೆ ಪೂಜೆ ಸಲ್ಲಿಸಿಲಾಯಿತು.

ಒಂದು ತಿಂಗಳಿಗೂ ಹೆಚ್ಚು ಕಾಲ ಜಾತ್ರೋತ್ಸವ ಅದ್ದೂರಿಯಾಗಿ ನಡೆಯಲ್ಲಿದ್ದು ಫೆ.10 ರಂದು ಕೋಟೆಗೆ ಏಣಿ ಹಾಕುವುದು, 16 ರಂದು ಮಳ್ಳುಳ್ಳಿ ಪಡುಗ ಕೊಡುವುದು, 20 ರಂದು ಕಳಾಸರೋಹಣ, 23 ರಂದು ಜಲ್ಲಿ ಮಾರಮ್ಮ ಪೂಜೆ ಹಾಗೂ 24 ರಂದು ತಾಯಿಯ ಚೌಕಿ ಮನೆ ಪ್ರವೇಶ, 25 ರಂದು ಹರಕೆ ಮತ್ತು 26 ರಂದು ಶ್ರೀ ಶಕ್ತಿ ಮಾರಮ್ಮ ದೇವಿಯ ಮಹಾ ರಥೋತ್ಸವ ಜರುಗಲಿದೆ.

ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ. ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button