ಬೇವೂರು ಪಿ.ಎಸ್ ಸಜ್ಜನ ಕಾಲೇಜು ವತಿಯಿಂದ ಎನ್.ಎಸ್.ಎಸ್ ವಿಶೇಷ ಶಿಬಿರದಲ್ಲಿ – ಪರಿಸರ ಪ್ರಜ್ಞೆ ಜಾಗೃತಿ ಗೊಳಿಸುತ್ತದೆ.

ಬಿಲ್ ಕೆರೂರು ಏ.14

ವಿದ್ಯೆ ಕಲಿಸಿದ ಗುರುಗಳನ್ನು, ಸಮಾಜದಲ್ಲಿ ನಮ್ಮನ್ನು ತಿದ್ದಿ ತಿಡಿದ ಹಿರಿಯರನ್ನು ಸ್ಮರಿಸಿ ಗೌರವಿಸಬೇಕು. ಎಂದು ಸಿಂದಗಿಯ ಅಬಕಾರಿ ಇಲಾಖೆಯ ಸಿ.ಪಿ.ಐ ಆದ ಶಿವಾನಂದ ಎಸ್. ಹೂಗಾರ ಹೇಳಿದರು.

ಬೇವೂರಿನ ಪರಪ್ಪ ಸಂಗಪ್ಪ ಸಜ್ಜನ ಕಲಾ ಮಹಾ ವಿದ್ಯಾಲಯದ ವತಿಯಿಂದ ಬಿಲ್ ಕೆರೂರ ಗ್ರಾಮದಲ್ಲಿ ಹಮ್ಮಿಕೊಂಡ ಎನ್.ಎಸ್.ಎಸ್ ವಾರ್ಷಿಕ ಶಿಬಿರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಅತಿಥಿಗಳಾಗಿ ಭಾಗವಹಿಸಿ ಮಾತಾನಾಡಿದ ಶಂಭುಗೌಡ ಪಾಟೀಲ ಭಾವೈಕ್ಯೈತೆ ಮೂಡಿಸುವ ಶಿಬಿರ ಪರಿಸರದ ಪ್ರಜ್ಞೆಯನ್ನು ಜಾಗೃತ ಗೊಳಿಸುತ್ತದೆ ಎಂದರು.

ಬೇವೂರಿನ ಆದರ್ಶ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ಜಿ.ಜಿ. ಮಾಗನೂರು ವಕೀಲರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿ ವಿದ್ಯಾರ್ಥಿ ಜೀವನ ಪರಿ ಪೂರ್ಣವಾಗ ಬೇಕಾದರೆ ಪಠ್ಯೇತರ ಚಟುವಟಿಕೆಗಳು ಅವಶ್ಯಕವಾಗಿವೆ. ಸಮಾಜದ ಬಗ್ಗೆ ಕಾಳಜಿ ಹೊಂದಿ ಸೇವಾ ಮನೋಭಾವ ದಿಂದ ಶ್ರಮದಾನ ಕೈಗೊಳ್ಳಬೇಕೆಂದು ಹೇಳಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತಾನಾಡಿದ ಬಿಲ್ ಕೆರೂರು ಬಿಲ್ವಾಶ್ರಮದ ಸಿದ್ದಲಿಂಗ ಶಿವಾಚಾರ್ಯರು ಶಿಕ್ಷಣ ಸೇವೆಗಾಗಿ ಬಿಲ್ ಕೆರೂರು ಮಠದ ರುದ್ರಮುನಿ ಶಿವಾಚಾರ್ಯರು ಜೋಳಿಗೆ ಹಿಡಿದು ಸಾರ್ಥಕ ಪರಿಶ್ರಮ ವಹಿಸಿದ್ದಾರೆ. ಅಕ್ಷರ ಅರಿವು ಸಂಸ್ಕಾರ ನೀಡಿ ಸಮಾಜದ ಉನ್ನತಿಗೆ ಶ್ರಮಿಸಿದ ಪೂಜ್ಯರು ಜನ ಮಾನಸದಲ್ಲಿ ಶಾಶ್ವತ ಸ್ಥಾನ ಗಳಿಸಿದ್ದಾರೆ ಎಂದು ಅವರು ಹೇಳಿದರು.

ಮಹಾ ವಿದ್ಯಾಲಯದ ಪ್ರಾಚಾರ್ಯರು ಡಾ, ಜಗದೀಶ.ಗು ಭೈರಮಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಹಿರಿಯ ಉಪನ್ಯಾಸಕರಾದ ಬಿ.ಬಿ ಬೇವೂರ ವಚನ ಪ್ರಾರ್ಥನೆ ನೆರವೇರಿಸಿದರು. ಎಸ್.ಎಸ್ ಆದಾಪೂರ ಎನ್.ಎಸ್.ಎಸ್ ಗೀತೆಯನ್ನು ಹಾಡಿದರು. ವಿದ್ಯಾರ್ಥಿನಿ ವಿಜಯಲಕ್ಷ್ಮೀ ಬಂಡಿವಡ್ಡರ ಹಾಗೂ ಜ್ಯೋತಿ ಗೌಡರ ಸಂಗಡಿಗರು ಪ್ರಾರ್ಥಿಸಿದರು.

ಆ.ವಿ.ವ ಸಂಘದ ಸದಸ್ಯರಾದ ಐ.ಜಿ ಕಡೇಮನಿ, ಬಿಲ್ ಕೆರೂರಿನ ಲಕ್ಷ್ಮಣ ಅರಮನಿ, ಶಿವಪ್ಪ ಕರಲಿಂಗನ್ನವರ, ಲೋಕನಗೌಡ ಪಾಟೀಲ, ಶಿವಬಸಪ್ಪ ಇಟಗಿ, ಮುಖ್ಯ ಗುರುಗಳಾದ ಸಂತೋಷ ಕಟಗೇರಿ ಉಪನ್ಯಾಸಕರಾದ ಡಾ, ಸಂಗಮೇಶ ಹಂಚಿನಾಳ, ಡಿ.ವಾಯ್ ಬುಡ್ಡಿಯವರ ಉಪಸ್ಥಿತರಿದ್ದರು.

ಎನ್.ಎಸ್.ಎಸ್ ಯೋಜನಾಧಿಕಾರಿಗಳಾದ ಜಿ.ಎಸ್ ಗೌಡರ ವಂದಿಸಿದರು. ಇತಿಹಾಸ ಉಪನ್ಯಾಸಕ ಡಾ, ಎ.ಎಮ್ ಗೊರಚಿಕ್ಕನವರ ನಿರೂಪಿಸಿದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button