ಇಂದು RTPS ನ ಆಡಳಿತ ಕಚೇರಿ ಅವರಣದಲ್ಲಿ ಡಾ, ಬಿ.ಆರ್ ಅಂಬೇಡ್ಕರ್ ರವರ 135 ನೇ. ಹಾಗೂ ಡಾ, ಬಾಬು ಜಗಜೀವನ್ ರಾಮ್ ರವರ 119 ನೇ. ಜನ್ಮ ದಿನೋತ್ಸವದ – ಪೂಜಾ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ರಾಯಚೂರು ಏ.14

ಆರ್‌ಟಿಪಿಎಸ್ ಯೋಜನಾ ಪ್ರದೇಶದಲ್ಲಿ ನ್ಯಾಷನಲ್ ಫೈರ್ ಸರ್ವಿಸ್ ವೀಕ್ ಅಂಗವಾಗಿ, ಆರ್‌ಟಿಪಿಎಸ್ ಮ್ಯಾನೇಜ್‌ಮೆಂಟ್ ಸಹಕಾರದೊಂದಿಗೆ ಈ ವಾರದ ಏಳು ದಿನಗಳಲ್ಲಿ ವಿವಿಧ ಭದ್ರತಾ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಫೈರ್ ಸರ್ವಿಸ್ ವೀಕ್ ಉದ್ಘಾಟನಾ ಕಾರ್ಯಕ್ರಮ (14.04.2026 ರಿಂದ 20.04.2026 ರವರೆಗೆ)ವನ್ನು ದಿನಾಂಕ:- 14.04.2026 ರಂದು ಬೆಳಿಗ್ಗೆ 10:00 ಗಂಟೆಗೆ ಸಿಐಎಸ್ಎಫ್ ಯೂನಿಟ್, ಆರ್‌ಟಿಪಿಎಸ್, ಶಕ್ತಿ ನಗರ ಫೈರ್ ಸ್ಟೇಷನ್‌ನಲ್ಲಿ ಫೈರ್ ಸರ್ವಿಸ್ ವೀಕ್ ಉದ್ಘಾಟನಾ ಕಾರ್ಯಕ್ರಮವನ್ನು ವಿಜೃಂಬಣೆಯಿಂದ ನಡೆಸಲಾಯಿತು.

ಮುಖ್ಯ ಅತಿಥಿಯಾಗಿ ಶ್ರೀ ರಮೇಶ್ ಹೆಚ್.ಆರ್., ಇಡಿ (ಆರ್‌ಟಿಪಿಎಸ್) ಅವರ ಆಗಮನದಿಂದ ಕಾರ್ಯಕ್ರಮ ಪ್ರಾರಂಭವಾಯಿತು.ಈ ಕಾರ್ಯಕ್ರಮದಲ್ಲಿ ಶ್ರೀ ಶಶಿ ರಂಜನ್, ಸೀನಿಯರ್ ಕಮಾಂಡೆಂಟ್ (CISF), ಶ್ರೀ ಸತ್ಯವೀರ್ ಸಿಂಗ್ (CISF-Fire), ಶ್ರೀ ನಾಗೇಂದ್ರ (CISF) ಭಾಗವಹಿಸಿದರು.

ಅದೇ ರೀತಿ, ಆರ್‌ಟಿಪಿಎಸ್ ನ ಶ್ರೀ ಕೆ.ಕೆ ಕೃಷ್ಣರಾಜು, ಚೀಫ್ ಇಂಜಿನಿಯರ್ (ಓ&ಎಂ), ಶ್ರೀ ಅಜಯ್ ಟಿ.ಪಿ ಚೀಫ್ ಇಂಜಿನಿಯರ್ (ಸಿವಿಲ್), ಶ್ರೀ ಶಂಕರ್ ನಾಯಕ್ ಎಸ್, ಚೀಫ್ ಇಂಜಿನಿಯರ್ (ಎಫ್ಎಂ), ಶ್ರೀ ಅಮರೇಶ್, ಡಿಜಿಎಂ (HRD), ಹಾಗೂ ಆರ್‌ಟಿಪಿಎಸ್ ನ ಅಧಿಕಾರಿ ಸಿಬ್ಬಂದಿ ಮತ್ತು ಸಿಐಎಸ್ಎಫ್ ನ ಭದ್ರತಾ ಮತ್ತು ಅಗ್ನಿ ಶಾಮಕ ವಿಭಾಗದ ಸಿಬ್ಬಂದಿಗಳು ಸಕ್ರಿಯವಾಗಿ ಭಾಗವಹಿಸಿದರು.

ಈ ಕಾರ್ಯಕ್ರಮದಲ್ಲಿ ಒಟ್ಟು 60 ಅಧಿಕಾರಿ ಸಿಬ್ಬಂದಿ ವರ್ಗದ ಉದ್ಯೋಗಿಗಳು ಭಾಗವಹಿಸಿದರು ಎಂದು ವರದಿಯಾಗಿದೆ.
