ದಲಿತ ಮಹಿಳೆಯರಿಂದ ಜಾಗೃತಿಗಾಗಿ ಡಾ, ಬಿ.ಆರ್ ಅಂಬೇಡ್ಕರ್ – ಜಯಂತಿ ಆಚರಿಸಿ ಮಹಿಳೆಯರಿಂದ ಪ್ರತಿಪಾದನೆ.
ಮೆಳೆಕಟ್ಟಿ ಏ.14

ದಾವಣಗೆರೆ ಜಿಲ್ಲೆಯ ದಾವಣಗೆರೆ ತಾಲೂಕಿನ ಮೆಳೆಕಟ್ಟಿ ಗ್ರಾಮದಲ್ಲಿ ಮಂಗಳವಾರ ದಲಿತ ಮಹಿಳೆಯರಿಂದ ಜಾಗೃತಿಗಾಗಿ ಡಾ, ಬಿ.ಆರ್. ಅಂಬೇಡ್ಕರ್ ರವರ 135 ನೇ. ಜಯಂತಿ ಸಡಗರ ಸಂಭ್ರಮದಿಂದ ಆಚರಿಸಿದರು.
ಮಹಿಳೆಯರು ಶಿಕ್ಷಣ, ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಅಂಬೇಡ್ಕರ್ ಅವರ ಚಿಂತನೆಗಳನ್ನು ಅಳವಡಿಸಿ ಕೊಂಡು, ಹಕ್ಕುಗಳಿಗಾಗಿ ಹೋರಾಡಲು ಬದ್ಧರಾಗಿದ್ದಾರೆ. ಈ ಸಂದರ್ಭದಲ್ಲಿ ದಲಿತ ಮಹಿಳೆಯರು ಸಮುದಾಯದ ಜಾಗೃತಿಗಾಗಿ ಡಾ, ಬಿ.ಆರ್ ಅಂಬೇಡ್ಕರ್ ಜಯಂತಿ ಆಚರಿಸಿದರು.
ಮಹಿಳಾ ಸಬಲೀಕರಣ ಅಂಬೇಡ್ಕರ್ ಅವರ ವಿಚಾರಧಾರೆ ದಲಿತ ಮಹಿಳೆಯರಲ್ಲಿ ಆತ್ಮವಿಶ್ವಾಸ ಮತ್ತು ಸಾಮಾಜಿಕ ಹಕ್ಕುಗಳ ಅರಿವು ಮೂಡಿಸಿದೆ. ಜಾಗೃತಿ ಆಚರಣೆ ಶಿಕ್ಷಣ, ಸಮಾನತೆ ಮತ್ತು ಸ್ವಾತಂತ್ರ್ಯದ ಸಂದೇಶಗಳನ್ನು ಸಾರುವ ಮೂಲಕ ಜಯಂತಿ ಆಚರಿಸಲಾಯಿತು.
ದಲಿತ ಮಹಿಳೆಯರು ಅಂಬೇಡ್ಕರ್ ಅವರನ್ನು ಕೇವಲ ನಾಯಕರಾಗಿ ಮಾತ್ರವಲ್ಲದೆ, ತಮ್ಮ ಹಕ್ಕುಗಳ ರಕ್ಷಕನಾಗಿ ನೋಡುತ್ತಾರೆ.
ಈ ಸಂಧರ್ಭದಲ್ಲಿ ಮೆಳೆಕಟ್ಟಿ ರೇಣುಕಮ್ಮ ಹಾಲಮ್ಮ ಇತರರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.

