ಮಾನವತಾವಾದಿ ಬಸವಣ್ಣನವರ ವಚನಗಳ ಅನುಸಂಧಾನ ದಿಂದ ಜೀವನ ಸಾರ್ಥಕ – ಶ್ರೀಮತಿ ಗೀತಾ.ಪ್ರಕಾಶ್ ಅಭಿಮತ.

ಚಳ್ಳಕೆರೆ ಏ.23

ಮಹಾನ್ ಮಾವನತಾವಾದಿ ಬಸವಣ್ಣನವರ ವಚನಗಳು ಅತ್ಯಂತ ಸರಳ ಕನ್ನಡದಲ್ಲಿ ಜನ ಸಾಮಾನ್ಯರ ಆಡು ಭಾಷೆಯಲ್ಲಿ ರಚನೆಯಾದ ಅದ್ಭುತ ಚಿಂತನೆಗಳಾಗಿದ್ದು ಅವುಗಳ ಅಂತರಾರ್ಥದ ಅನುಸಂಧಾನದಿಂದ ಜೀವನ ಸಾರ್ಥಕ ಗೊಳ್ಳುತ್ತದೆ ಎಂದು ಚಳ್ಳಕೆರೆಯ ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸದಸ್ಯರಾದ ಶ್ರೀಮತಿ ಗೀತಾ ಪ್ರಕಾಶ್ ಅಭಿಪ್ರಾಯ ಪಟ್ಟರು.

ತ್ಯಾಗರಾಜ ನಗರದ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ “ಜಗಜ್ಯೋತಿ ಬಸವೇಶ್ವರರ ಜಯಂತ್ಯುತ್ಸವ” ದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಅವರು ವಚನಗಳ ಗಾಯನದೊಂದಿಗೆ “ಬಸವಣ್ಣ, ಅಲ್ಲಮಪ್ರಭು ಮತ್ತು ಅಕ್ಕಮಹಾದೇವಿಯವರ ವಚನಗಳ ಅಂತರಾರ್ಥ” ವನ್ನು ವಿವರಿಸಿದರು.

ಬಸವಣ್ಣನವರು ‘ಕಳಬೇಡ-ಕೊಲಬೇಡ’ ವಚನದಲ್ಲಿ ತಿಳಿಸುವ ಸಪ್ತಶೀಲ ತತ್ವಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡು ಪಾಲಿಸಾದರೆ ಅದೇ ಅಂತರಂಗ ಮತ್ತು ಬಹಿರಂಗದ ಶುದ್ಧಿ ಯಾಗುತ್ತದೆ.ಆ ಮೂಲಕ ನಾವು ಕೂಡಲ ಸಂಗಮ ದೇವರನ್ನು ತಲುಪಬಹುದು ಎಂದು ತಿಳಿಸಿದರು.

ಜಯಂತೋತ್ಸವದ ಪ್ರಯುಕ್ತ ಸತ್ಸಂಗ ಕೇಂದ್ರದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಬಸವಣ್ಣ ಮತ್ತು ಶ್ರೀರಾಮಕೃಷ್ಣರ ನಾಮಸ್ಮರಣೆ, ಎಂ ಗೀತಾ ನಾಗರಾಜ್, ಸೌಮ್ಯ ಉಮೇಶ್, ತಿಪ್ಪಮ್ಮ ಉಮಾಶಂಕರ್ ಅವರಿಂದ ಬಸವಣ್ಣನವರ ವಚನ ಗಾಯನ, ಯತೀಶ್ ಎಂ ಸಿದ್ದಾಪುರ ಅವರಿಂದ “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ, ದಿವ್ಯತ್ರಯರಿಗೆ ಮತ್ತು ಬಸವಣ್ಣನವರಿಗೆ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಿತು.

ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶ್ರೀಮತಿ ರಂಗಮ್ಮ ಗುಂಡಲ, ಪ್ರೇಮಾ, ಗೀತಾ ವೆಂಕಟೇಶ್ ರೆಡ್ಡಿ, ಸೌಮ್ಯ ಪ್ರಸಾದ್, ಪ್ರಮೀಳಾ ಜಗದೀಶ್, ಎಂ ಲಕ್ಷ್ಮೀದೇವಮ್ಮ, ಸುವರ್ಣಮ್ಮ, ಅನುಸೂಯ ರಾಘವೇಂದ್ರ, ನಾಗರತ್ನಮ್ಮ, ಜಯಮ್ಮ, ಸರಸ್ವತಿ ನಾಗರಾಜ್, ಸರಸ್ವತಿ ರಾಜು, ಶ್ರೀಜನಿ ಭಾಗವಹಿಸಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button