ಬಸವ ರತ್ನ ಪ್ರಶಸ್ತಿಗೆ ಶಿಕ್ಷಕ – ಶ್ರೀ ಮುತ್ತು ವಡ್ಡರ ಆಯ್ಕೆ.

ಹಿರೇಮಳಗಾವಿ ಏ.23

ಎಸ್.ಎಸ್ ಆಡಿನ ಜನ ಸೇವಾ ಸಂಸ್ಥೆ (ರಿ) ಹೊಳೆ ಆಲೂರ, ಅವರು ಬಸವ ಜಯಂತಿಯ ಪ್ರಯುಕ್ತ ಬದಾಮಿಯಲ್ಲಿ ದಿನಾಂಕ 26-04-2026 ರವಿವಾರ ನಡೆಯಲಿರುವ ಬಸವ ರತ್ನ, ಬಸವ ಮಹಿಳಾ ರತ್ನ ಹಾಗೂ ಕಾಯಕ ಜೀವಿ ಆದರ್ಶ ದಂಪತಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಹುನಗುಂದ ತಾಲೂಕಿನ ಹಿರೇಮಳಗಾವಿ ಗ್ರಾಮದ ಗಣಿತ ಶಿಕ್ಷಕರಾಗಿರುವ ಶ್ರೀ ಮುತ್ತು ವಡ್ಡರ ಇವರ ಶೈಕ್ಷಣಿಕ ಹಾಗೂ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಬಸವ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಆಗಿರುವ ಶ್ರೀಮತಿ ಶೋಭಾ ಎಸ್ ಆಡಿನ ಅವರು ತಿಳಿಸಿದ್ದಾರೆ.

ವೃತ್ತಿಯಲ್ಲಿ ಶಿಕ್ಷಕರಾಗಿರುವ ಶ್ರೀ ಮುತ್ತು ವಡ್ಡರ ಅವರು ಪ್ರವೃತ್ತಿಯಲ್ಲಿ ಸಾಹಿತ್ಯ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದು ಅತಿ ಸರಳ ಗಣಿತ, ಎಲೆಮರೆ ಕಾಯಿಗಳು, ಸನ್ಮಾರ್ಗದ ದುಂಬಿ ಮತ್ತು ಬಿಡುಗಡೆಗೆ ಸಜ್ಜಾಗಿರುವ ಬದಲಾಗು ನೀ ಬೆಳಕಾಗು ನೀ ಎಂಬ ಸ್ಫೂರ್ತಿದಾಯಕ ಕೃತಿಗಳನ್ನು ರಚಿಸಿದ್ದಾರೆ.

ಜೊತೆ ಜೊತೆಗೆ ನಾಡಿನ ಹಲವಾರು ಪತ್ರಿಕೆಗಳಿಗೆ ಕಥೆ, ನ್ಯಾನೋ ಕಥೆಗಳು, ಲೇಖನ ಹಾಗೂ ಕವನಗಳನ್ನು ಬರೆದು ಪ್ರಕಟಿಸಿದ್ದಾರೆ, ಇವರು ಪ್ರತಿನಿತ್ಯ ವ್ಯಾಟ್ಸಪ್ ಬಳಗದಲ್ಲಿ ಸುಮಾರು 6,000 ಜನರಿರುವ ಜ್ಞಾನ ಜ್ಯೋತಿ ದಿನಂ ಪ್ರತಿ ಎಂಬ ಬಳಗದಲ್ಲಿ ನಿತ್ಯ ರಸ ಪ್ರಶ್ನೆ ಕಾರ್ಯಕ್ರಮ ನಡೆಸುತ್ತಿದ್ದಾರೆ.

ಇವರ ಶೈಕ್ಷಣಿಕ ಹಾಗೂ ಸಾಹಿತ್ಯ ಸೇವೆಯನ್ನು ಪರಿಗಣಿಸಿ 2026 ರ ಬಸವ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಬಸವ ಜಯಂತಿ ಪ್ರಯುಕ್ತ ಬಾದಾಮಿಯಲ್ಲಿ ನಡೆಯುವ ಬಸವ ಸಮ್ಮೇಳನದಲ್ಲಿ ಬಸವ ರತ್ನ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.

ಪ್ರಶಸ್ತಿಗೆ ಭಾಜನರಾಗಿರುವ ಶಿಕ್ಷಕ ಶ್ರೀ ಮುತ್ತು ವಡ್ಡರ ಅವರಿಗೆ ಹಾಗೂ ಶಿಕ್ಷಕ ಬಳಗಕ್ಕೆ ಮತ್ತು ಊರಿನ ಗುರು ಹಿರಿಯರಿಗೆ ಸಂತಸವಾಗಿದೆ ಎಂದು ವರದಿಯಾಗಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button