“ತಂದೆ ತಾಯಿ ಅನುಬಂಧ”…..

ಹೆತ್ತು ಹೊತ್ತು ತುತ್ತು ಇಟ್ಟು ಮುತ್ತಾಗಿಸಿದವರು

ನೀತಿ ಪ್ರೀತಿ ಕರುಣೆ ತುಂಬಿಸಿದ ಕರ್ತೃಗಳು

ಕೋಪ ತಾಪ ಅಸೂಯೆ ಅಳಸಿ ನಗಿಸಿದವರು

ಭಯ ಭೀತಿ ಕಳೆ ಕಿತ್ತು ನಯ ವಿನಯ

ಬೆಳಸಿದವರು

ದುಃಖ ನೋವು ಹಸಿವು ತಾವುಂಡು ಸಿಹಿ

ಉಣಿಸಿದವರು

ಹೊಸ ವಸ್ತ್ರ ಉಡುಗರೆ ತಮಗೆ ಆಸೆಪಡೆದೆ

ನಮಗೆ ನೀಡಿದವರು

ಶುಭ ಸಂಭ್ರಮ ಖುಷಿ ನಗು ನಲಿವು

ನಮ್ಮಿಷ್ಟದಂತೆ ಪೂರೈಸಿ ಹರುಷ ಪಟ್ಟವರು

ಮಿನಗು ನಕ್ಷತ್ರಗಳ ನಾವಾಗಲು ಸೂರ್ಯ

ಚಂದ್ರರಂತೆ ಬೆಳಕಾದವರು

ಹೆತ್ತವರ ಋಣ ತೀರಿಸಲಾಗದು ಅವರ ಕಣ್ಣಲ್ಲಿ

ಸಂತಸ ಮಕ್ಕಳು

ತಂದೆ ತಾಯಿ ವೃದ್ಧಾಪದಲಿ ಆನಂದದಿ ನಲಿವು

ಪ್ರೀತಿ ಸಹಕಾರ ಖುಷಿ ನಮ್ಮಿಂದ ಇದ್ದರೆ ಸಾಕು

ಜಗದಲಿ ನಾವು ಪಾವನರಾಗಲು ಹೆತ್ತವರ

ಅನುಬಂಧವು

ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ

ದೇಶಂಸು ದೇವರ ಹಿಪ್ಪರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button