ಅವೈಜ್ಞಾನಿಕ ಮತ್ತು ಕಳಪೆ ಹೆದ್ದಾರಿ ಕಾಮಗಾರಿ – ವಿರುದ್ಧ ಡಿ.ಎಸ್.ಎಸ್ ದೂರು.
ಮಾನ್ವಿ ಜು.16

ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರ ನಿಯೋಗಳ ಮಂಗಳವಾರ ಬೆಂಗಳೂರಿಗೆ ತೆರಳಿ ಮಾನ್ವಿ ಪಟ್ಟಣದಲ್ಲಿ ಕಳಪೆ ಮತ್ತು ಅವೈಜ್ಞಾನಿಕವಾಗಿ ನಿರ್ಮಿಸುತ್ತಿರುವ.
ರಾಜ್ಯ ಹೆದ್ದಾರಿ, ಚರಂಡಿ ಹಾಗೂ ಸೇತುವೆ ಕಾಮಗಾರಿಗಳ ವಿರುದ್ದ ಬೆಂಗಳೂರಿನ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ದಿ ನಿಗಮದ ಕೇಂದ್ರ ಕಚೇರಿಯ ಮುಖ್ಯ ಇಂಜಿನೀಯರ್ ಮಾಲತೇಶ ಅವರಿಗೆ ದೂರು ನೀಡಿದರು.
ಚತುಷಥ ರಸ್ತೆ, ಚರಂಡಿ, ಸೇತುವೆ ಕಾಮಗಾರಿಗಳನ್ನು ಕಳಪೆ ಮತ್ತು ಅವೈಜ್ಞಾನಿಕವಾಗಿ ನಿರ್ಮಿಸುತ್ತಿರುವ ಗುತ್ತೇದಾರರು ಹಾಗೂ ಅದಕ್ಕೆ ಸಾತ್ ಕೊಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಕಾಮಗಾರಿಗಳನ್ನು ಗುಣಮಟ್ಟದ ರೀತಿಯಲ್ಲಿ ಮಾಡಬೇಕೆಂದು ಒತ್ತಾಯಿಸಿದರು.
ಅದೇ ರೀತಿ ಮಾನ್ವಿ ಪಟ್ಟಣದಲ್ಲಿ ಐಬಿ ಹತ್ತಿರದ ಅಂಬೇಡ್ಕರ್ ವೃತ್ತವನ್ನು ವಿರೂಪ ಗೊಳಿಸಿರುವುದರ ವಿರುದ್ಧ ದೂರು ನೀಡಿದ ಮುಖಂಡರು ಅಂಬೇಡ್ಕರ್ ವೃತ್ತವನ್ನು ಅಗಲೀಕರಣ ಮಾಡಿ ಈ ಜಾಗದಲ್ಲಿ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕಂಚಿನ ಪುತ್ತಳಿಯನ್ನು ಪ್ರತಿಷ್ಠಾಪಿಸಿ ಉದ್ಯಾನವನ ನಿರ್ಮಾಣ ಮಾಡಬೇಕೆಂದು ಮನವಿ ಸಲ್ಲಿಸಿದರು.
ಈ ನಿಯೋಗದಲ್ಲಿ ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ಪ್ರಭುರಾಜ ಕೊಡ್ಲಿ, ಮುಖಂಡರಾದ ಎಸ್.ಎಂ.ಶಾನವಾಜ್, ಎಂ.ಡಿ ನುಸರತ್, ಜಯರಾಜ ಕೊಡ್ಲಿ, ಶ್ಯಾಮ್ ಸಿಂಗ್, ಶಾಹೀದ್ ಸಿದ್ಧಿಖಿ, ಪಂಪಾಪತಿ ಹಡಪದ್, ವೆಂಕಟೇಶ, ಆಸೀಫ್, ರಾಜಕುಮಾರ ಮುಂತಾದವರು ಇದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿk

