ಜಲ ಮಾಲಿನ್ಯ ಉಂಟು ಮಾಡುವ ವಸತಿ ಸಮುಚ್ಚಯಗಳ ಮಾಲೀಕರ ಮೇಲೆ ಕಠಿಣ ಕಾನೂನು ಕ್ರಮ – ಜಿಲ್ಲಾಧಿಕಾರಿ ಸ್ವರೂಪ.ಟಿ.ಕೆ ಎಚ್ಚರಿಕೆ..!

ಉಡುಪಿ ಮೇ.28

ಜಿಲ್ಲೆಯಲ್ಲಿ ಜಲ ಮಾಲಿನ್ಯ ತಡೆಗಟ್ಟಲು ಜಿಲ್ಲಾಡಳಿತ ಈಗ ಕಠಿಣ ಕ್ರಮಕ್ಕೆ ಮುಂದಾಗಿದೆ. ವಸತಿ ಹಾಗೂ ಬಹು ಮಹಡಿ ವಸತಿ ಸಮುಚ್ಚಯಗಳು (Apartments) ತಮ್ಮ ಕೊಳಚೆ ಮತ್ತು ತ್ಯಾಜ್ಯ ನೀರನ್ನು ಸರಿಯಾಗಿ ಶುದ್ಧೀಕರಿಸದೆ, ನೇರವಾಗಿ ತೋಡು (ಗಟಾರ) ಗಳ ಮೂಲಕ ನದಿಗೆ ಹರಿಸಿ ಜಲ ಮಾಲಿನ್ಯ ಉಂಟು ಮಾಡುತ್ತಿರುವುದು ಕಂಡು ಬಂದಲ್ಲಿ, ಅಂತಹ ವಸತಿ ಸಮುಚ್ಚಯಗಳ ಮಾಲೀಕರ ವಿರುದ್ಧ ಸೂಕ್ತ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು “ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ” ಅವರು ಕಡಕ್ ಸೂಚನೆ ನೀಡಿದ್ದಾರೆ.

📌 ಪ್ರಮುಖ ಮುಖ್ಯಾಂಶಗಳು:-

🚨 ಕಠಿಣ ಕ್ರಮದ ಎಚ್ಚರಿಕೆ:-

ತ್ಯಾಜ್ಯ ನೀರನ್ನು ನದಿ, ಹಳ್ಳ-ಕೊಳ್ಳಗಳಿಗೆ ಹರಿಸುವ ಅಪಾರ್ಟ್‌ಮೆಂಟ್‌ಗಳ ವಿರುದ್ಧ ಇನ್ನು ಮುಂದೆ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುವುದು.

💧ಕಡ್ಡಾಯ ಶುದ್ಧೀಕರಣ:-

ಪ್ರತಿಯೊಂದು ಬಹುಮಹಡಿ ವಸತಿ ಸಮುಚ್ಚಯಗಳು ಕಡ್ಡಾಯವಾಗಿ ತಮ್ಮ ಕೊಳಚೆ ನೀರನ್ನು ವೈಜ್ಞಾನಿಕವಾಗಿ ಶುದ್ಧೀಕರಣ (STP) ಮಾಡಲೇ ಬೇಕು.

🌊 ನದಿಗಳ ಸಂರಕ್ಷಣ-

ತೋಡು (ಗಟಾರ) ಗಳ ಮೂಲಕ ಹರಿಯುವ ಕೊಳಚೆ ನೀರು ನೇರವಾಗಿ ನದಿಗಳನ್ನು ಸೇರುತ್ತಿರುವುದರಿಂದ ಜಲ ಚರಗಳಿಗೆ ಮತ್ತು ಸಾರ್ವಜನಿಕರ ಆರೋಗ್ಯಕ್ಕೆ ಧಕ್ಕೆ ಯಾಗುತ್ತಿರುವುದನ್ನು ತಡೆಯಲು ಈ ಕಟ್ಟುನಿಟ್ಟಿನ ಕ್ರಮ. “ಪರಿಸರ ಮತ್ತು ಜಲ ಮೂಲಗಳನ್ನು ಕಲುಷಿತ ಗೊಳಿಸುವುದು ಅಪರಾಧ.

ವಸತಿ ಸಮುಚ್ಚಯಗಳ ಮಾಲೀಕರು ತಮ್ಮ ಜವಾಬ್ದಾರಿಯನ್ನು ಅರಿತು, ತ್ಯಾಜ್ಯ ನೀರು ನಿರ್ವಹಣೆಯನ್ನು ಸೂಕ್ತವಾಗಿ ಮಾಡಬೇಕು. ನಿಯಮ ಉಲ್ಲಂಘಿಸುವವರ ವಿರುದ್ಧ ಕದ ತಟ್ಟಲಿದೆ ಕಾನೂನು.”—ಸ್ವರೂಪ.ಟಿ.ಕೆ ಜಿಲ್ಲಾಧಿಕಾರಿ, ಉಡುಪಿ.

ವರದಿ:ಆರತಿ.ಗಿಳಿಯಾರು.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button