ಶ್ರೀಶಾರದಾಶ್ರಮದಲ್ಲಿ ಜುಲೈ 20 ರಿಂದ 26 ರ – ವರೆಗೆ ಶ್ರೀಮದ್ ಭಾಗವತ ಸಪ್ತಾಹ.

ಚಳ್ಳಕೆರೆ ಜು.16

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಪ್ರತಿ ವರ್ಷ ದಂತೆ ಈ ವರ್ಷವೂ ಜುಲೈ 20 ರ ಸೋಮವಾರ ದಿಂದ ಜುಲೈ 26 ರ ಭಾನುವಾರದ ವರೆಗೆ ಶ್ರೀಮದ್ ಭಾಗವತ ಸಪ್ತಾಹ ಕಾರ್ಯಕ್ರಮವು ನಡೆಯಲಿದ್ದು.

ಪ್ರತಿ ದಿನ ಸಂಜೆ 5.30 ರಿಂದ 7.45 ರ ವರೆಗೆ ಭಜನೆ, ಆರತಿ ಮತ್ತು ಪ್ರವಚನ ಇರಲಿದ್ದು ಮೊದಲ ದಿನ ಬೆಂಗಳೂರಿನ ಬಸವನಗುಡಿಯ ಶ್ರೀರಾಮಕೃಷ್ಣ ಮಠದ ಸ್ವಾಮಿ ಸೌಖ್ಯಾನಂದಜೀ ಅವರಿಂದ “ಶ್ರೀಮದ್ ಭಾಗವತದಿಂದ ನಾವೇನು ಕಲಿಯಬಹುದು?” ಎಂಬ ವಿಷಯವಾಗಿ ಪ್ರವಚನ, ಎರಡನೇ ದಿನ “ನವವಿಧ ಭಕ್ತಿ” ಎಂಬ ವಿಷಯವಾಗಿ ಬೆಂಗಳೂರಿನ ಹಲಸೂರಿನ ಶ್ರೀರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಬೋಧಸ್ವರೂಪಾನಂದಜೀ ಅವರಿಂದ ಪ್ರವಚನ,ಮೂರನೇ ದಿನ ಬೆಂಗಳೂರಿನ ಸ್ವಾಮಿ ವಿವೇಕಾನಂದ ಯೂಥ್ ಮೂವ್ ಮೆಂಟ್ ನ ಸಂದೀಪ್ ಎಸ್ ವಶಿಷ್ಠ ಅವರಿಂದ “ಭಾಗವತದಲ್ಲಿ ಜೀವ ಶಿವಸೇವೆ” ಎಂಬ ವಿಷಯವಾಗಿ ಪ್ರವಚನ.

ನಾಲ್ಕು ಮತ್ತು ಐದನೇ ದಿನ ಹುಬ್ಬಳ್ಳಿಯ ಶ್ರೀಮಾತಾ ಆಶ್ರಮದ ಅಧ್ಯಕ್ಷರಾದ ಮಾತಾಜೀ ತೇಜೋಮಯೀ ಅವರಿಂದ “ಉದ್ಧವಗೀತಾ” ಎಂಬ ವಿಷಯವಾಗಿ ಪ್ರವಚನ,ಕೊನೆಯ ಎರಡು ದಿನ ಶ್ರೀನರಹರಿ ಸದ್ಗುರು ಆಶ್ರಮದ ಓಂಕಾರ ಪೀಠಾಧ್ಯಕ್ಷರಾದ ಪೂಜ್ಯ ವೈ ರಾಜಾರಾಮ್ ಗುರುಗಳಿಂದ “ಭಾಗವತದಲ್ಲಿ ವೇದಾಂತ” ಎಂಬ ವಿಷಯವಾಗಿ ಪ್ರವಚನ ಕಾರ್ಯಕ್ರಮಗಳು ನಡೆಯಲಿದ್ದು.

ಅನ್ನ ಪ್ರಸಾದದ ವ್ಯವಸ್ಥೆ ಮಾಡಲಾಗಿದ್ದು ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸತ್ಸಂಗದ ಪೂರ್ಣ ಪ್ರಯೋಜನ ಪಡೆದು ಕೊಳ್ಳುವಂತೆ ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button